ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ 'Svamitva' (ಸ್ವಾಮಿತ್ವ) ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಗೆ ಯಾರು ಅರ್ಹರು, ಯಾವ ರೈತರು ಈ ಯೋಜನೆಯ ಲಾಭ ಪಡೆಯಬಹುದು ಮೊದಲಾದ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಹೊಸ e- ಗ್ರಾಮ್ ಸ್ವರಾಜ್ ಪೋರ್ಟಲ್ ಆರಂಭಿಸಿದ್ದಾರೆ.
ಈ ಪೋರ್ಟಲ್ ಹಳ್ಳಿಯ ಸಮುದಾಯದ ಸಮಸ್ಯೆಗಳು ಹಾಗೂ ದೂರುಗಳ ಬಗ್ಗೆ ಮಾಹಿತಿ ನೀಡುತ್ತದೆ. ಪಂಚಾಯತ್ ರಾಜ್ ಸಚಿವಾಲಯವು ಇ- ಗ್ರಾಮ್ ಸ್ವರಾಜ್ ಪೋರ್ಟಲ್ ಆರಂಭಿಸಿದೆ. ದೇಶದಲ್ಲಿ ಒಂದು ಲಕ್ಷ ಮಂದಿಗೆ ಎಸ್ಸೆಮ್ಮೆಸ್ ಮೂಲಕ ಲಿಂಕ್ ಕಳುಹಿಸಲಾಗಿದೆ. ಆಸ್ತಿ ಮಾಲೀಕರು ಲಿಂಕ್ ಕ್ಲಿಕ್ ಮಾಡಿ, ಆಸ್ತಿ ಕಾರ್ಡ್ (ಪ್ರಾಪರ್ಟಿ ಕಾರ್ಡ್) ಡೌನ್ ಲೋಡ್ ಮಾಡಬಹುದು.
ಏನಿದು 'Svamitva' (ಸ್ವಾಮಿತ್ವ) ಯೋಜನೆ?
ಈ ಮಾಲೀಕತ್ವದ ಯೋಜನೆ ಅಡಿಯಲ್ಲಿ ಭೂ ಮಾಲೀಕರಿಗೆ ಬ್ಯಾಂಕ್ ಗಳಿಂದ ಸಾಲ ದೊರೆಯುತ್ತದೆ. ಮಾಲೀಕತ್ವ ಯೋಜನೆ ಅಡಿಯಲ್ಲಿ ಕಂದಾಯ ಇಲಾಖೆಯು ಹಳ್ಳಿಗಳಲ್ಲಿ ದಾಖಲೆ ಸಂಗ್ರಹಿಸಲು ಆರಂಭಿಸಿದೆ. ಇದರ ಜತೆಗೆ ಡಿಜಿಟಲ್ ವ್ಯವಸ್ಥೆ ಮಾಡಿದ್ದು, ವ್ಯಾಜ್ಯದಲ್ಲಿ ಇರುವ ಭೂಮಿಯ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ. ನಿಮಗೆಲ್ಲ ಗೊತ್ತಿರುವಂತೆ ಸರ್ಕಾರಿ ಸ್ವತ್ತುಗಳಿಗೆ ಹಳ್ಳಿಗಳಲ್ಲಿ ಯಾವುದೇ ದಾಖಲೆ ಇರುವುದಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ನರೇಂದ್ರ ಮೋದಿ ಯೋಜನೆ ಆರಂಭಿಸಿದ್ದಾರೆ. 743 ಹಳ್ಳಿಗಳಲ್ಲಿನ ಜನರಿಗೆ ಯಾರ ಬಳಿ ಭೂ ದಾಖಲೆ ಲಭ್ಯ ಇಲ್ಲವೋ ಅಂಥವರಿಗೆ ಮಾಲೀಕತ್ವ ದೊರೆಯುತ್ತದೆ. ಹಳ್ಳಿಗಳ ಸಮುದಾಯದ ಜನರ ಕೆಲಸವನ್ನು ಆನ್ ಲೈನ್ ಮೂಲಕ ಮಾಡಲಾಗುತ್ತದೆ. ಹಳ್ಳಿಯಲ್ಲಿನ ಎಲ್ಲ ಜನರ ಆಸ್ತಿಯನ್ನು ಮ್ಯಾಪಿಂಗ್ ಮಾಡಲಾಗುತ್ತದೆ. ಯಾರಿಗೆ ಭೂಮಿ ಇರುತ್ತದೋ ಅಂಥವರಿಗೆ ಇ- ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಪ್ರಮಾಣಪತ್ರ ದೊರೆಯುತ್ತದೆ. ಮುಂದಿನ ವರ್ಷ ಸ್ವಾಮಿತ್ವ ಯೋಜನೆಯನ್ನು ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸುವುದಾಗಿ ಮೋದಿ ಘೋಷಿಸಿದ್ದಾರೆ. ಇದರ ಜತೆಗೆ ಬಹುಮಾನವನ್ನು ಕೂಡ ಘೋಷಣೆ ಮಾಡಲಾಗುತ್ತದೆ.
'Svamitva' (ಸ್ವಾಮಿತ್ವ) ಯೋಜನೆ ಉದ್ದೇಶಗಳೇನು?
* ರೈತರ ಭೂಮಿಯನ್ನು ಗ್ರಾಮೀಣ ಪ್ರದೇಶದಲ್ಲಿ ಆನ್ ಲೈನ್ ಮೂಲಕ ನಿಗಾ ಮಾಡಲಾಗುತ್ತದೆ.
* ಪಿಎಂ 'Svamitva' ಯೋಜನೆ ಅಡಿಯಲ್ಲಿ ಡ್ರೋಣ್ ಮ್ಯಾಪಿಂಗ್ ಮಾಡಲಾಗುತ್ತದೆ.
* ಭೂಮಿಯ ನಿಜವಾದ ಮಾಲೀಕರಿಗೆ ಅದರ ಹಕ್ಕು ದೊರೆಯುವಂತೆ ಮಾಡಲಾಗುತ್ತದೆ.
* ಭೂಮಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲಾಗುತ್ತದೆ.
* ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಮನೆ/ಕೃಷಿ ಸಾಲ ಸುಲಭವಾಗಿ ದೊರೆಯುವಂತಾಗಬೇಕು.
* ಆ ಆಸ್ತಿಗೆ ಸಂಬಂಧಿಸಿದ ಡಿಜಿಟಲ್ ಕಾರ್ಡ್ ಗಳನ್ನು ರೈತರಿಗೆ ವಿತರಿಸಲಾಗುತ್ತದೆ.
ಆನ್ ಲೈನ್ ನಲ್ಲಿ ಪ್ರಾಪರ್ಟಿ ಕಾರ್ಡ್ ಡೌನ್ ಲೋಡ್ ಮಾಡುವುದು ಹೇಗೆ?
* ಆಸ್ತಿಯ ಮಾಲೀಕರ ಮೊಬೈಲ್ ಫೋನ್ ಗೆ ಎಸ್ಸೆಮ್ಮೆಸ್ ಬರುತ್ತದೆ.
* ಆ ಎಸ್ಸೆಮ್ಮೆಸ್ ತೆರೆಯಬೇಕು.
* ಆ ಎಸ್ಸೆಮ್ಮೆಸ್ ನಲ್ಲಿ ಲಿಂಕ್ ಇರುತ್ತದೆ.
* ಆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
* ಪ್ರಾಪರ್ಟಿ ಕಾರ್ಡ್ ಡೌನ್ ಲೋಡ್ ಆಗುತ್ತದೆ.
* ಎಲ್ಲ ರಾಜ್ಯ ಸರ್ಕಾರಗಳು ಆ ನಂತರ ಪ್ರಾಪರ್ಟಿ ಕಾರ್ಡ್ ಗಳನ್ನು ಆಯಾ ಆಸ್ತಿ ಮಾಲೀಕರಿಗೆ ಹಂಚುತ್ತವೆ.
ಅರ್ಜಿ ಪ್ರಕ್ರಿಯೆ ಹೇಗೆ?
* ಪಿಎಂ ಓನರ್ ಷಿಪ್ ಯೋಜನೆಯ ವೆಬ್ ಸೈಟ್ https://egramswaraj.gov.in/ ಗೆ ಮೊದಲಿ ಕ್ಲಿಕ್ ಮಾಡಬೇಕು.
* ಹೋಮ್ ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ನ್ಯೂ ರಿಜಿಸ್ಟ್ರೇಷನ್ ಎಂಬ ಆಯ್ಕೆ ಕಾಣಿಸುತ್ತದೆ.
* ಆ ಆಯ್ಕೆಯನ್ನು ಕ್ಲಿಕ್ ಮಾಡಿದ ಮೇಲೆ ಹೊಸ ಫಾರ್ಮ್ ನಿಮ್ಮೆದುರು ತೆರೆದುಕೊಳ್ಳುತ್ತದೆ.
* ಅಲ್ಲಿರುವ ಮಾಹಿತಿಗಳನ್ನು ಎಚ್ಚರಿಕೆಯಿಂದ ಓದಿದ ನಂತರ ಕೇಳಲಾದ ಮಾಹಿತಿ ಭರ್ತಿ ಮಾಡಬೇಕು.
* ಅರ್ಜಿಯನ್ನು ಸರಿಯಾಗಿ ತುಂಬಲಾಗಿದೆ ಎಂದು ಖಾತ್ರಿ ಆದ ಮೇಲೆ ಸಬ್ ಮಿಟ್ ಎಂಬ ಬಟನ್ ಒತ್ತಬೇಕು.
* ಅರ್ಜಿ ಸಲ್ಲಿಕೆ ಯಶಸ್ವಿಯಾಗಿ ಆಗಿದೆ. ಒಂದು ವೇಳೆ ಏನಾದರೂ ಸಮಸ್ಯೆ ಕಂಡುಬಂದಲ್ಲಿ ಈ ವೆಬ್ ಸೈಟ್ https://mahayojana.com/ ನಲ್ಲಿ ನಿಮ್ಮ ಇ ಮೇಲ್ ಐಡಿ ನಮೂದಿಸಿ. ಮುಂದಿನ ಸೂಚನೆಗಳು ನಿಮಗೆ ದೊರೆಯಲಿವೆ.


Click it and Unblock the Notifications