ಸಾಮಾನ್ಯವಾಗಿ ನಮಗೆ ಸಾಲದ ಅಗತ್ಯವಿದ್ದಾಗ ನಾವು ವೈಯಕ್ತಿಕ ಸಾಲವನ್ನು ಪಡೆಯುತ್ತೇವೆ. ಹಾಗೆಯೇ ನಾವು ಮನೆಯನ್ನು ಖರೀದಿ ಮಾಡುವಾಗ ಅಥವಾ ನಿರ್ಮಾಣ ಮಾಡುವಾಗ ಗೃಹ ಸಾಲವನ್ನು ಪಡೆಯುತ್ತೇವೆ. ಆದರೆ ನಮಗೆ ಆಸ್ತಿಯ ಮೇಲೆ ಸಾಲವನ್ನು (ಎಲ್‌ಎಪಿ) ಪಡೆಯುವ ಆಯ್ಕೆಯು ನಮಗಿದೆ.
ಆಸ್ತಿಯ ಮೇಲಾಧಾರವಾಗಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನೀಡುವ ಸಾಲವೇ ಎಲ್‌ಎಪಿ ಆಗಿದೆ. ಇದರರ್ಥ ಸಾಲ ಪಡೆದವರು ಸಾಲವನ್ನು ಮರುಪಾವತಿ ಮಾಡದಿದ್ದರೆ, ಸಾಲ ನೀಡಿದವರು ಆಸ್ತಿಯನ್ನು ವಶಪಡಿಸಿಕೊಳ್ಳಬಹುದಾಗಿದೆ. ಅಧಿಕ ಮೊತ್ತವನ್ನು ಸಾಲವಾಗಿ ಪಡೆಯಲು ಬಯಸುವವರಿಗೆ ಎಲ್‌ಎಪಿಯು ಅತೀ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಇತರೆ ಅಸುರಕ್ಷಿತ ಸಾಲಗಳಿಗಿಂತ ಕಡಿಮೆ ಬಡ್ಡಿದರ ಹೊಂದಿರುತ್ತದೆ.

ಆಸ್ತಿಯ ಮೇಲಿನ ಸಾಲವು ಹೇಗೆ ಕೆಲಸ ಮಾಡುತ್ತದೆ?
ಆಸ್ತಿಯ ಮೇಲಿನ ಸಾಲವನ್ನು ನೀವು ಪಡೆಯಬೇಕಾದರೆ ನೀವು ಆಸ್ತಿಯನ್ನು ಹೊಂದಿದ್ದೀರಿ ಎಂದು ಸಾಬೀತುಪಡಿಸುವುದು ಅತೀ ಅಗತ್ಯವಾಗಿರುತ್ತದೆ. ನೀವು ಅದಕ್ಕಾಗಿ ದಾಖಲೆಗಳನ್ನು ಕೂಡಾ ಹೊಂದಿರಬೇಕಾಗುತ್ತದೆ. ಉದಾಹರಣೆಗೆ ಆಸ್ತಿ ಪತ್ರ, ಅಡವಿಟ್ಟ ಪತ್ರ ಮೊದಲಾದವುಗಳನ್ನು ಹೊಂದಿರಬೇಕಾಗುತ್ತದೆ.
ನಿಮ್ಮಲ್ಲಿ ಆಸ್ತಿಯ ಎಲ್ಲ ದಾಖಲೆಗಳು ಇದ್ದರೆ, ಸಾಲ ನೀಡುವ ಸಂಸ್ಥೆ ನಿಮ್ಮ ಆಸ್ತಿ ಮೌಲ್ಯ ನಿರ್ಣಯ ಮಾಡುತ್ತದೆ. ಆಸ್ತಿಯ ಮೌಲ್ಯದ ಆಧಾರದಲ್ಲಿ ಸಂಸ್ಥೆಯು ನಿಮಗೆ ನೀಡಲಾಗುವ ಸಾಲದ ಮೊತ್ತವನ್ನು ನಿರ್ಧಾರ ಮಾಡುತ್ತದೆ. ಇತರೆ ಸಾಲಗಳಂತೆಯೇ ಸಾಲದ ಮೇಲಿನ ಬಡ್ಡಿ ದರವು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಆಸ್ತಿ ಮೇಲಿನ ಸಾಲ ಮತ್ತು ಗೃಹ ಸಾಲ ಹೇಗೆ ಭಿನ್ನ?
ಆಸ್ತಿಯ ಮೇಲಿನ ಸಾಲ (ಎಲ್‌ಎಪಿ) ನಿಮ್ಮ ಆಸ್ತಿಯನ್ನು ಮೇಲಾಧಾರವಾಗಿ ಬಳಸುವ ಒಂದು ರೀತಿಯ ಸಾಲವಾಗಿದೆ. ಇದರರ್ಥ ನೀವು ಸಾಲವನ್ನು ಮರುಪಾವತಿ ಮಾಡದಿದ್ದರೆ, ಸಾಲವನ್ನು ಮರುಪಾವತಿಸಲು ಸಾಲ ನೀಡಿದವರು ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು. ಎಲ್‌ಎಪಿಗಳನ್ನು ನಾವು ಯಾವುದೇ ಉದ್ದೇಶಕ್ಕಾದರೂ ಬಳಕೆ ಮಾಡಬಹುದು. ಆದರೆ ಮದುವೆಗಳು, ವೈದ್ಯಕೀಯ ತುರ್ತುಸ್ಥಿತಿಗಳು ಅಥವಾ ವ್ಯಾಪಾರ ಹೂಡಿಕೆಗಳಂತಹ ಪ್ರಮುಖ ವೆಚ್ಚಗಳಿಗೆ ಹಣಕಾಸು ಒದಗಿಸುವ ನಿಟ್ಟಿನಲ್ಲಿ ಹೆಚ್ಚಾಗಿ ಆಸ್ತಿ ಆಧಾರದಲ್ಲಿ ಸಾಲವನ್ನು ಪಡೆಯಲಾಗುತ್ತದೆ.
ಮತ್ತೊಂದೆಡೆ, ಗೃಹ ಸಾಲವು ನಿರ್ದಿಷ್ಟವಾಗಿ ಮನೆಯನ್ನು ಖರೀದಿಸಲು ಬಳಸಲಾಗುವ ಒಂದು ರೀತಿಯ ಸಾಲವಾಗಿದೆ. ಗೃಹ ಸಾಲಗಳು ಸಾಮಾನ್ಯವಾಗಿ ಎಲ್‌ಎಪಿಗಳಿಗಿಂತ ಕಡಿಮೆ ಬಡ್ಡಿದರವನ್ನು ಹೊಂದಿರುವ ಸಾಲವಾಗಿದೆ. ಆದರೆ ಅದಕ್ಕಾಗಿ ನೀವು ಹೆಚ್ಚುವರಿ ಮೊತ್ತವನ್ನು ಡೌನ್‌ಪೇಮೆಂಟ್ ರೂಪದಲ್ಲಿ ಪಾವತಿ ಮಾಡುವ ಅಗತ್ಯ ಇರುತ್ತದೆ. ಗೃಹ ಸಾಲವನ್ನು ಎಂದಿಗೂ ಕಡಿಮೆ-ಅಪಾಯದ ಸಾಲವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅಲ್ಲಿ ಆಸ್ತಿಯ ಭದ್ರತೆ ಇರುತ್ತದೆ.
ಆಸ್ತಿಯ ಮೇಲಿನ ಸಾಲ ಮತ್ತು ಗೃಹ ಸಾಲದ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಸಾಲದ ಉದ್ದೇಶವಾಗಿದೆ. ಎಲ್‌ಎಪಿಯನ್ನು ನಾವು ಯಾವುದೇ ಉದ್ದೇಶಕ್ಕಾದರೂ ಬಳಕೆ ಮಾಡಬಹುದು. ಆದರೆ ಗೃಹ ಸಾಲವನ್ನು ನಿರ್ದಿಷ್ಟವಾಗಿ ಮನೆಯನ್ನು ಖರೀದಿಸಲು ಬಳಸಲಾಗುತ್ತದೆ. ಹೆಚ್ಚುವರಿಯಾಗಿ ಎಲ್‌ಎಪಿಗಳು ಸಾಮಾನ್ಯವಾಗಿ ಗೃಹ ಸಾಲಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ಹೊಂದಿರುತ್ತದೆ. ಹಾಗೆಯೇ ಆಕ್ಸಿಸ್ ಬ್ಯಾಂಕ್ ಪ್ರಕಾರ ಅವು ಪೂರ್ವಪಾವತಿ ಶುಲ್ಕವನ್ನು ಹೊಂದಿರಬಹುದು.
ಆಸ್ತಿಯ ಮೇಲಿನ ಸಾಲ: ಪ್ರಮುಖ ವಿಚಾರಗಳು
ಸಾಲದ ಮೊತ್ತ: ಸಾಲದ ಮೊತ್ತವು ಸಾಮಾನ್ಯವಾಗಿ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇಕಡಾವಾರು ಲೆಕ್ಕಾಚಾರದಲ್ಲಿರುತ್ತದೆ. ಸಾಲ ನೀಡುವ ಸಂಸ್ಥೆಯು ಆಸ್ತಿಯ ಮೌಲ್ಯವನ್ನು ನಿರ್ಧಾರ ಮಾಡುತ್ತದೆ. ಆಸ್ತಿಯ ಮೌಲ್ಯದ ಶೇಕಡ 60-70ರವರೆಗೆ ಸಾಲದ ಮೊತ್ತವನ್ನು ನೀಡಲಾಗುತ್ತದೆ.
ಆಸ್ತಿ ಮೌಲ್ಯಮಾಪನ: ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ನೋಡಿಕೊಂಡು ಆಸ್ತಿಯ ಮೇಲೆ ಸಾಲವನ್ನು ನೀಡಲಾಗುತ್ತದೆ. ಆಸ್ತಿಯ ಸ್ಥಳ, ಎಷ್ಟು ಹಳೆಯ ಆಸ್ತಿ, ಸ್ಥಿತಿ ಹೇಗಿದೆ ಎಂಬ ಎಲ್ಲ ಅಂಶವನ್ನು ಪರಿಗಣನೆ ಮಾಡಲಾಗುತ್ತದೆ.
ಸಾಲ ವಿತರಣೆ: ಸಾಲ ಪಡೆದವರ ದಾಖಲೆಗಳನ್ನು ಪರಿಶೀಲಿಸಿದ ನಂತರ ಮತ್ತು ಆಸ್ತಿಯನ್ನು ಮೌಲ್ಯಮಾಪನ ಮಾಡಿದ ನಂತರ, ಸಾಲದ ಮೊತ್ತವನ್ನು ಸಾಲ ಪಡೆಯುವವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಅಡಮಾನ ಸಾಲ ಎಂದರೇನು?
ಅಡಮಾನ ಸಾಲವು ನಿಮ್ಮ ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ಭದ್ರತೆಯಾಗಿ ಬಳಸಿ ಪಡೆಯುವ ಸಾಲವಾಗಿದೆ. ಸಾಲವನ್ನು ತೀರಿಸಲು ಮಾಸಿಕವಾಗಿ ಕಂತಿನಲ್ಲಿ ನೀವು ಮರುಪಾವತಿ ಮಾಡಬೇಕಾಗುತ್ತದೆ. ನಿರ್ಮಾಣ ಮಾಡಲಾಗಿರುವ ಮನೆ ಮತ್ತು ವಾಣಿಜ್ಯ ಕಟ್ಟಡಗಳನ್ನು ಅಡವಿಟ್ಟು ಈ ಸಾಲವನ್ನು ನೀಡಲಾಗುತ್ತದೆ. ಸುಮಾರು 20 ವರ್ಷಗಳವರೆಗೆ ಸಾಲ ಮರುಪಾವತಿ ಅವಧಿ ಇರುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Gold Price Today: ಭಾರತದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ! ದಿಢೀರ್ 12,000 ರೂ. ಹೆಚ್ಚಳ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications