ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಅವರು ಜಗತ್ತಿನಲ್ಲಿಯೇ ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ಅತ್ಯಂತ ಜನಪ್ರಿಯ ಮಹಿಳೆಯಾಗಿದ್ದಾರೆ. ಜತೆಗೆ ಬಿಲಿಯನೇರ್ ಕುಟುಂಬದ ಆಪ್ತ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಆದರೆ, ದೇಶದ ಅಗರ್ಭ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗುವ ಮೊದಲು ನೀತಾ ಅಂಬಾನಿ ಅವರ ಸರಳ ಬದುಕಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ.
ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ ಅವರು 1985ರಲ್ಲಿ ನೀತಾ ಅಂಬಾನಿ ಅವರನ್ನು ವಿವಾಹವಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ಆ ಪೈಕಿ ಆಕಾಶ್ ಅಂಬಾನಿ ಹಾಗೂ ಇಶಾ ಅಂಬಾನಿ ಅವಳಿ ಮಕ್ಕಳು. ಇನ್ನು ಕಿರಿಯ ಮಗನ ಹೆಸರು ಅನಂತ್ ಅಂಬಾನಿ. ಶ್ರೀಮಂತಿಯ ಉತ್ತುಂಗದಲ್ಲಿರುವ ಅಂಬಾನಿ ಕುಟುಂಬವು ಬಹಳ ಐಶಾರಾಮಿ ಜೀವನವನ್ನು ನಡೆಸುತ್ತಿದೆ.

ವಿವಾಹಕ್ಕೂ ಮುನ್ನ ಐಶಾರಾಮಿ ಜೀವನ ನಡೆಸದ ನೀತಾ ಅಂಬಾನಿ
ಗಮನಾರ್ಹವೆಂದರೆ, ಈಗ ಬಿಲಿಯನೇರ್ ಕುಟುಂಬಕ್ಕೆ ಸೇರಿದ್ದರೂ ನೀತಾ ಅಂಬಾನಿ ಅವರ ಬದುಕು ಅದಕ್ಕಿಂತ ಮೊದಲು ಅಷ್ಟೊಂದು ಐಶಾರಾಮಿ ಆಗಿರಲಿಲ್ಲ. ಮುಕೇಶ್ ಅಂಬಾನಿ ಅವರನ್ನು ಮದುವೆಯಾಗುವ ಮೊದಲು ನೀತಾ ದಲಾಲ್ ಅವರು ಮಾಧ್ಯಮ ಕುಟುಂಬದಲ್ಲಿ ಇದ್ದವರು. ನೀತಾ ದಲಾಲ್ ಅಂಬಾನಿ ಅವರ ತಂದೆ ರವೀಂದ್ರಭಾಯಿ ಅಂಬಾನಿ ಅವರು ಆದಿತ್ಯ ಬಿರ್ಲಾ ಗ್ರೂಪ್‌ನಲ್ಲಿ ಹಿರಿಯ ವ್ಯವಸ್ಥಾಪಕ ಹುದ್ದೆಯಲ್ಲಿ ಉದ್ಯೋಗ ಮಾಡುತ್ತಿದ್ದರು.
ನೀತಾ ಅಂಬಾನಿ ಅವರು ಕಲೆಯ ಬಗ್ಗೆ ಹೆಚ್ಚಿನ ಅಭಿರುಚಿಯನ್ನು ಹೊಂದಿದ್ದು, ತಮ್ಮ 6ನೇ ವಯಸ್ಸಿನಲ್ಲಿಯೇ ಭರತನಾಟ್ಯವನ್ನು ಕಲಿಯುವುದಕ್ಕೆ ಪ್ರಾರಂಭಿಸಿದ್ದರು. ನಿರಂತರ ತರಬೇತಿಯನ್ನು ಪಡೆಯುತ್ತಿದ್ದ ಅವರು 20ನೇ ವಯಸ್ಸಿನವರೆಗೆ ಭರತನಾಟ್ಯದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡು ಅದರಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ಈ ನಡುವೆ ಭರತನಾಟ್ಯವನ್ನು ಪರಿಪೂರ್ಣವಾಗಿ ಕಲಿತುಕೊಂಡ ಬಳಿಕ ನೀತಾ ಅವರು ನೃತ್ಯಗಾರ್ತಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಆ ಮೂಲಕ ಸಣ್ಣ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಹಣ ಸಂಪಾದನೆಯನ್ನು ಪ್ರಾರಂಭಿಸಿದ್ದರು.
ಮುಕೇಶ್ ಅಂಬಾನಿ ಅವರನ್ನು ಮದುವೆಯಾಗುವುದಕ್ಕೂ ಮೊದಲು ನೀತಾ ಅವರು ಮುಂಬೈನ ಶಾಲೆಯೊಂದರಲ್ಲಿ ಡ್ಯಾನ್ಸ್ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನುರಿತ ಕ್ಲಾಸಿಕಲ್ ಡ್ಯಾನ್ಸರ್ ಆಗಿದ್ದ ನೀತಾ ಅವರು ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಈ ರೀತಿ ನೃತ್ಯ ಪ್ರದರ್ಶನ ಕಾರ್ಯಕ್ರಮಗಳನ್ನು ನೀಡುತ್ತಿರಬೇಕಾದರೆ ಒಮ್ಮೆ ಅದು ಮುಕೇಶ್ ಅವರ ತಂದೆ ಧೀರುಬಾಯಿ ಅವರ ಗಮನಸೆಳೆದಿತ್ತು. ಅದು ಅವರು ಅಂಬಾನಿ ಕುಟುಂಬದ ಸೊಸೆಯಾಗುವುದಕ್ಕೆ ಕಾರಣವಾಯಿತು.
ಮುಕೇಶ್ ಅಂಬಾನಿ ಅವರನ್ನು ಮದುವೆಯಾದ ಬಳಿಕ ನೀತಾ ಅವರದ್ದು ಒಂದು ಕೋರಿಕೆಯಿತ್ತು. ಅದೇನೆಂದರೆ ಮದುವೆ ಬಳಿಕವೂ ತಮ್ಮನ್ನು ಯಾರು ಕೂಡ ಕೆಲಸ ಮಾಡದಂತೆ ನಿರಾಕರಿಸಬಾರದ್ದು ಎನ್ನುವುದು. ಇದಕ್ಕೆ ಅಂಬಾನಿ ಕುಟುಂಬ ಕೂಡ ಸಂತೋಷದಿಂದ ಒಪ್ಪಿಗೆಯನ್ನು ನೀಡಿತ್ತು. ಸಿಮಿ ಗರೆವಾಲ್ ಅವರೊಂದಿಗಿನ ಸಂದರ್ಶನದಲ್ಲಿ ನೀತಾ ಅವರು ತಮ್ಮ ವೇತನವನ್ನು ಕೂಡ ಬಹಿರಂಗಪಡಿಸಿದ್ದರು.
ಮದುವೆಯಾದ ನಂತರವೂ ಸೇಂಟ್ ಫ್ಲವರ್ ನರ್ಸರಿ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವುದನ್ನು ಮುಂದುವರಿಸಿದ್ದರು ಎಂಬುದಾಗಿ ಖುದ್ದು ನೀತಾ ಅವರೇ ಹೇಳಿಕೊಂಡಿದ್ದರು. ಕೋಟ್ಯಾಧಿಪತಿ ಕುಟುಂಬಕ್ಕೆ ಸೊಸೆಯಾಗಿ ಬಂದರೂ ತಮ್ಮ ವೃತ್ತಿ ಬದುಕನ್ನು ಮುಂದುವರಿಸುವ ಮೂಲಕ ಆ ಕಾಲದಲ್ಲಿ ತಿಂಗಳಿಗೆ 800 ರೂಪಾಯಿ ವೇತನ ಕೂಡ ಪಡೆಯುತ್ತಿದ್ದರು ಎಂಬುದಾಗಿ ನೀತಾ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.


Click it and Unblock the Notifications