ಬೆಂಗಳೂರು, ಜೂನ್ 18: ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡುವುದು ಹೇಗೆ? ಮ್ಯೂಚುವಲ್ ಫಂಡ್ ಗಳ ಪ್ರಕಾರಗಳು ಯಾವುವು ಎನ್ನುವ ಪ್ರಾಥಮಿಕ ಸಂಗತಿಗಳು ನಿಮಗೆ ಗೊತ್ತಿದೆ. ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದರೆ ಅದನ್ನು ಹೇಗೆ ರೀಡಿಮ್ ಮಾಡಿಕೊಳ್ಳಬಹುದು ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ. ಹಾಗಿದ್ದರೆ ಮ್ಯೂಚುವಲ್ ಫಂಡ್ ರಿಡೀಮ್ ಮಾಡುವುದಕ್ಕೂ ಮುನ್ನ ಯಾವೆಲ್ಲ ಸಂಗತಿಗಳು ನಿಮ್ಮ ಗಮನದಲ್ಲಿರಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.
ಪ್ರಮುಖವಾಗಿ ಮೂರು ಸಂದದರ್ಭಗಳಲ್ಲಿ ಮ್ಯೂಚುಯಲ್ ಫಂಡ್ ಯೂನಿಟ್ ಗಳನ್ನ ಯಾವಾಗ ರಿಡೀಮ್ ಮಾಡಬಹುದು. ನಿಮಗೆ ಯಾವಾಗ ಹಣ ಬೇಕಾಗಬಹುದು ಮತ್ತು ಬೇರೆಡೆಗಳಿಂದ ಹಣ ಹೊಂದಿಸುವುದಕ್ಕೆ ಸಾಧ್ಯವಾಗಲ್ಲ ಎನ್ನುವ ಸಂದರ್ಭ ಇರುತ್ತದೆ. ಇನ್ನು ಎರಡನೆಯದು, ನಿಮ್ಮ ಫಂಡ್ ಸ್ಟ್ರ್ಯಾಟಜಿ ಬದಲಾಗಿದ್ದರೆ ಇನ್ನು ಮೂರನೆಯದು, ನಿಮ್ಮ ಫಂಡ್ ಚೆನ್ನಾಗಿ ಫರ್ಮಾರ್ಮ್ ಮಾಡದೆ ಇದ್ದರೆ ಇಂತಹ ಸಂದರ್ಭಗಳಲ್ಲಿ ನೀವು ನಿಮ್ಮ ಮ್ಯೂಚುಯಲ್ ಫಂಡ್ ಗಳನ್ನ ಮಾರಾಟ ಮಾಡುವ ಬಗ್ಗೆ ಯೋಚನೆ ಮಾಡಬಹುದು.

ಮ್ಯೂಚುವಲ್ ಫಂಡ್ ಗಳನ್ನು ರಿಡೀಮ್ ಮಾಡುವುದಕ್ಕೂ ಮೊದಲು ನಿಮ್ಮನ್ನೇ ನೀವು ಕೆಲವು ಪ್ರಶ್ನೆಗಳು ಕೇಳಿಕೊಳ್ಳಬೇಕು. ನೀವು ಯಾವ ಉದ್ದೇಶಕ್ಕಾಗಿ ಹೂಡಿಕೆ ಮಾಡಿದ್ದಿರೋ ಅದು ಪೂರೈಸಿದೆಯಾ? ನಿಮ್ಮ ಉತ್ತರ ಹೌದು ಎಂದಾದರೆ ನೀವು ಆ ಹೂಡಿಕೆಯನ್ನ ರಿಡೀಮ್ ಮಾಡಿಕೊಳ್ಳಬಹುದು. ಅದೇ ರೀತಿ ನೀವು, ಮಾರುಕಟ್ಟೆ ಏರಿಳಿತದ ಕಾರಣ ನಿಮ್ಮ ಹೂಡಿಕೆ ಹಿಂಪಡೆಯಲು ಮುಂದಾಗಿದ್ದರೆ ಸ್ವಲ್ಪ ಯೋಚನೆ ಮಾಡಿ. ನಿಮ್ಮ ಟಾರ್ಗೆಟ್ ಬಗ್ಗೆ ಗಮನಹರಿಸಿ. ಮಾರುಕಟ್ಟೆ ಏರಿಳಿತ ಶಾಶ್ವತವಲ್ಲ, ಹೀಗಾಗಿ ನಿಮ್ಮ ಹೂಡಿಕೆಯನ್ನ ಹಿಂಪಡೆಯಬೇಡಿ.
ಇದಲ್ಲದೆ ನಾವು ನಿಮಗೆ ಕೆಲವೊಂದು ಸಲಹೆಗಳನ್ನು ನೀಡುತ್ತೇವೆ. ಫಂಡ್ ಪರ್ಫಾರ್ಮೆನ್ಸ್ ಮತ್ತು ರಿಡಮ್ಷನ್ ಕಾರಣಗಳ ಬಗ್ಗೆ ಇನ್ನು ಒಮ್ಮೆ ಯೋಚಿಸಿ ನಿರ್ಧಾರ ಮಾಡಿ. ಮಾರುಕಟ್ಟೆ ಏರಿಳಿತದ ನಡುವೆ ಆತುರದ ನಿರ್ಧಾರ ಮಾಡಬೇಡಿ. ನಿಮ್ಮ ಫಂಡ್ ಮ್ಯಾನೇಜರ್ ನಿರ್ಧಾರದ ಮೇಲೆ ವಿಶ್ವಾಸವಿರಲಿ.
ಎಕ್ಸಿಟ್ ಲೋಡ್ ನಂತಹ ಹೆಚ್ಚುವರಿ ಶುಲ್ಕಗಳ ಬಗ್ಗೆ ಜಾಗೃತರಾಗಿರಿ, ಅವು ಫಂಡ್ ನಿಂದ ಫಂಡ್ ಗೆ ಭಿನ್ನವಾಗಿರುತ್ತದೆ ಎನ್ನುವುದು
ಇಂತಹ ಸನ್ನಿವೇಶದಲ್ಲಿ, ನಿಮ್ಮ ದೀರ್ಘಾವಧಿ ಗುರಿ ಆಧರಿಸಿ ನೀವು ಮ್ಯೂಚುಯಲ್ ಫಂಡ್ ರಿಡಮ್ಷನ್ ಬಗ್ಗೆ ನಿರ್ಧರಿಸಬೇಕು. ಈ ಅವಧಿಯಲ್ಲಿ ಪಾವತಿಸಬೇಕಾಗಬಹುದಾದ ತೆರಿಗೆಗಳ ಬಗ್ಗೆ ನಿರ್ಲಕ್ಷ್ಯ ಬೇಡ. ದೊಡ್ಡ ಪ್ರಮಾಣದ ಹೂಡಿಕೆ ಹಿಂಪಡೆಯುವುದಿದ್ದರೆ ಒಮ್ಮೆ ನಿಮ್ಮ ಹಣಕಾಸು ಸಲಹೆಗಾರರ ಸಲಹೆ ಪಡೆದುಕೊಳ್ಳಿ.


Click it and Unblock the Notifications