ಭಾರತದಲ್ಲಿ ಚಿನ್ನದ ಆಭರಣಗಳನ್ನು ತಮ್ಮ ಪ್ರತಿಷ್ಠೆಯ ಸಂಕೇತವನ್ನಾಗಿಯೇ ಬಳಕೆ ಮಾಡಲಾಗುತ್ತದೆ. ಯಾವುದಾದರೂ ಸಮಾರಂಭವಿದ್ದ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡುವುದು ಒಂದು ಸಂಪ್ರದಾಯವೇ ಎಂಬಂತಾಗಿದೆ. ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುವ ಕಾರಣದಿಂದಾಗಿ ಭಾರತವು ಅತೀ ಅಧಿಕ ಚಿನ್ನ ಬಳಕೆ ಮಾಡುವ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿ ಇದೆ. ಭಾರತವನ್ನು ಚಿನ್ನವನ್ನು ಅಧಿಕವಾಗಿ ಆಮದು ಮಾಡಿಕೊಳ್ಳುತ್ತದೆ. ಆದರೆ ಭಾರತದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುವವರು ಯಾರು ಎಂಬ ಪ್ರಶ್ನೆ ನಮಗೆ ಮೂಡಬಹುದು ಅಲ್ಲವೇ?
ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ 2021-22 ಹಣಕಾಸು ವರ್ಷದಲ್ಲಿ ಚಿನ್ನದ ಆಮದು 34.62 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ. 2021-22ರಲ್ಲಿ ಚಿನ್ನದ ಆಮದು ಪ್ರಮಾಣ 842.28 ಟನ್‌ಗಳಲ್ಲಿ ದಾಖಲಾಗಿದೆ.
ಭಾರತವು ಚಿನ್ನದ ಗಣಿಗಾರಿಕೆ ಮಾಡುವುದಿಲ್ಲ ಮತ್ತು ಹಿಂದೆ ಚಿನ್ನದ ಗಣಿಗಾರಿಕೆ ಮಾಡುತ್ತಿದ್ದ ಕರ್ನಾಟಕದ ಕೋಲಾರ ಎಂಬ ಸ್ಥಳವನ್ನು ಈಗ ಮುಚ್ಚಲಾಗಿದೆ. ಆದ್ದರಿಂದ, ಚಿನ್ನದ ಅಗತ್ಯವನ್ನು ಪೂರೈಸಲು ಭಾರತವು ತನ್ನ ಬಹುತೇಕ ಎಲ್ಲಾ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಹಾಗಾದರೆ ಭಾರತದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುವವರು ಯಾರು, ಭಾರತದಲ್ಲಿ ಯಾವ ಆಧಾರದಲ್ಲಿ ಚಿನ್ನದ ಬೆಲೆಯನ್ನು ನಿರ್ಧಾರ ಮಾಡಲಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯನ್ನು ನಿರ್ಧರಿಸಲು ನಾವು ಆಮದು ಮಾಡಿಕೊಂಡ ಚಿನ್ನದ ಬೆಲೆಗಳನ್ನು ಬಳಸುತ್ತೇವೆ. ಭಾರತದಲ್ಲಿ ಚಿನ್ನದ ಬೆಲೆಯ ಮೇಲೆ ಜಾಗತಿಕ ಬೆಳವಣಿಗೆಗಳು ಪ್ರಭಾವ ಬೀರುತ್ತದೆ. ಮದುವೆ ಸಮಾರಂಭ, ಹಬ್ಬದ ಸಂದರ್ಭ, ಹಣದುಬ್ಬರ, ಬಡ್ಡಿದರ, ಸರ್ಕಾರದ ನೀತಿ, ಜಾಗತಿಕ ವಿದ್ಯಮಾನಗಳು ಭಾರತದಲ್ಲಿ ಚಿನ್ನದ ಬೆಲೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಅದರಲ್ಲೂ ಚಿನ್ನ ಬೆಲೆಯು ಚಿನ್ನದ ಬೇಡಿಕೆಯ ಮೇಲೆ ಅವಲಂಭಿತವಾಗಿದೆ. ಚಿನ್ನದ ಮೇಲಿನ ಬೇಡಿಕೆಯು ಇಳಿಕೆಯಾದರೆ, ಚಿನ್ನದ ಬೆಲೆಯು ಕೂಡಾ ಇಳಿಕೆಯಾಗುತ್ತದೆ. ಒಂದು ವೇಳೆ ಚಿನ್ನದ ಬೇಡಿಕೆಯು ಅಧಿಕವಾದರೆ ಚಿನ್ನದ ಬೆಲೆಯೂ ಕೂಡಾ ಅಧಿಕವಾಗುತ್ತದೆ. ಆದ್ದರಿಂದಾಗಿ ಚಿನ್ನದ ಬೆಲೆ ಹಾಗೂ ಚಿನ್ನದ ಬೇಡಿಕೆಯ ನಡುವೆ ನೇರಾನೇರ ಸಂಬಂಧವಿದೆ. ಹಾಗೆಯೇ ಆಮದುದಾರರು ಕೂಡಾ ಭಾರತದಲ್ಲಿ ಚಿನ್ನದ ಬೆಲೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಚಿನ್ನವನ್ನು ಆಮದು ಮಾಡಿಕೊಂಡ ನಂತರ, ಆಮದು ಸುಂಕಗಳು, ವ್ಯಾಟ್ ಇತ್ಯಾದಿಗಳನ್ನು ಹಾಕಲಾಗುತ್ತದೆ. ಬಳಿಕ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ. ಅವರು ಅದನ್ನು ರಿಟೇಲ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ.
ಚಿನ್ನವನ್ನು ಯಾರು ಆಮದು ಮಾಡಿಕೊಳ್ಳುತ್ತಾರೆ?
ಭಾರತದಲ್ಲಿ ಅನೇಕ ಚಿನ್ನದ ಆಮದುದಾರರಿದ್ದಾರೆ. ಪ್ರಮುಖವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ಪ್ರಮುಖ ಖಾಸಗಿ ವಲಯದ ಬ್ಯಾಂಕುಗಳು ಮತ್ತು ಹಲವಾರು ಖಾಸಗಿ ಕಂಪನಿಗಳು ಭಾರತದಲ್ಲಿ ಚಿನ್ನದ ಆಮದುದಾರರು ಆಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತಕ್ಕೆ ಚಿನ್ನವನ್ನು ಆಮದು ಮಾಡಿಕೊಳ್ಳುವ ಖಾಸಗಿ ಕಂಪನಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಭಾರತದ ಪ್ರಮುಖ ಚಿನ್ನದ ಆಮದುದಾರರ ಪಟ್ಟಿ ಈ ಕೆಳಗೆ ನೀಡಲಾಗಿದೆ.
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
* ಬ್ಯಾಂಕ್ ಆಫ್ ಬರೋಡಾ
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
* ಬ್ಯಾಂಕ್ ಆಫ್ ಇಂಡಿಯಾ
* ಪಂಜಾಬ್ ನ್ಯಾಷನಲ್ ಬ್ಯಾಂಕ್
* ಯೆಸ್ ಬ್ಯಾಂಕ್
* ಮಿನರಲ್ಸ್ ಆಂಡ್ ಮೆಟಲ್ ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ
ಭಾರತದಲ್ಲಿ ಚಿನ್ನದ ಬೆಲೆ ನಿರ್ಧರಿಸುವ ಪ್ರಮುಖ ಅಂಶಗಳು
ಚಿನ್ನದ ಬೆಲೆ ಬೇಡಿಕೆ ಮತ್ತು ಪೂರೈಕೆಯ ಮೇಲೆ ಅವಲಂಭಿತವಾಗಿದೆ. ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಚಿನ್ನವು ಸುಲಭವಾಗಿ ದೊರೆಯುವ ವಸ್ತುವಲ್ಲ. ಚಿನ್ನ ಸಾಕಷ್ಟು ವಿರಳವಾದ ಸಂಪತ್ತು. ಹೆಚ್ಚಿನ ದೇಶಗಳಲ್ಲಿ ಚಿನ್ನದ ನಿಕ್ಷೇಪಗಳು ಇಲ್ಲ. ಆದ್ದರಿಂದ, ಚಿನ್ನದ ಬೆಲೆಗಳು ಮುಖ್ಯವಾಗಿ ಬೇಡಿಕೆ ಮತ್ತು ಪೂರೈಕೆ ಅಂಶಗಳನ್ನು ವಿಶೇಷವಾಗಿ ಭಾರತದ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ. ಭಾರತವು ಚಿನ್ನವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ಆಮದು ಬೆಲೆಗಳು ಹೆಚ್ಚಾದಾಗ, ಭಾರತದಲ್ಲಿನ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರಳಿದೆ.
ಯುಎಸ್ ಡಾಲರ್, ಚಿನ್ನದ ನಡುವಿನ ನಂಟು
ಚಿನ್ನದ ಬೆಲೆಯು ಹಾಗೂ ಯುಎಸ್ ಡಾಲರ್ ಪರಸ್ಪರ ವಿರುದ್ಧವಾಗಿ ಇರುತ್ತದೆ. ಡಾಲರ್‌ನ ಮೌಲ್ಯದ ಆಧಾರದಲ್ಲಿ ಚಿನ್ನದ ದರವನ್ನು ನಿರ್ಧಾರ ಮಾಡಲಾಗುತ್ತದೆ. ಚಿನ್ನವು ಜಾಗತಿಕವಾಗಿ ವ್ಯಾಪಾರವಾಗುವ ಸರಕು ಮತ್ತು ಡಾಲರ್ ಹೆಚ್ಚಾಗಿ ಆದ್ಯತೆಯ ಜಾಗತಿಕ ಕರೆನ್ಸಿಯಾಗಿರುವುದರಿಂದ, ಚಿನ್ನ ಮತ್ತು ಯುಎಸ್ ಡಾಲರ್ ನಡುವೆ ಅಧಿಕ ನಂಟು ಇದೆ. ಚಿನ್ನದ ಬೆಲೆಗಳು ದೇಶಗಳ ನಡುವಿನ ಜಾಗತಿಕ ಅಥವಾ ಭೌಗೋಳಿಕ ರಾಜಕೀಯ ಸಂಬಂಧಗಳಿಂದ ಕೂಡಾ ಪ್ರಭಾವಿತವಾಗುತ್ತದೆ. ಪ್ರಮುಖ ಜಾಗತಿಕ ಆರ್ಥಿಕ ಬಿಕ್ಕಟ್ಟು ಸಂದರ್ಭವು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ.
More From GoodReturns

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate India: ಯುದ್ಧದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ! ದಿಢೀರ್ 4,900 ರೂ. ಕುಸಿತ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Lunar Eclipse 2026: ವರ್ಷದ ಮೊದಲ ಚಂದ್ರಗ್ರಣ...ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಎಚ್ಚರಿಕೆ? ತಿಳಿಯಿರಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?



Click it and Unblock the Notifications