ಟಾಟಾ ಕನ್ಸಲ್ಟೆನ್ಸ್ ಸರ್ವಿಸಸ್‌ನ (ಟಿಸಿಎಸ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಜೇಶ್ ಗೋಪಿನಾಥನ್ ರಾಜೀನಾಮೆ ನೀಡಿದ್ದಾರೆ ಎಂದು ಟಿಸಿಎಸ್ ಸಂಸ್ಥೆಯು ಗುರುವಾರ (ಮಾರ್ಚ್ 16) ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ರಾಜೇಶ್ ಗೋಪಿನಾಥನ್ ರಾಜೀನಾಮೆ ನೀಡಿರುವುದು ಅಚ್ಚರಿಯ ಬೆಳವಣಿಗೆಯಾದರೂ ಕೂಡಾ ಸಂಸ್ಥೆಯು ಕೂಡಲೇ ಸಿಇಒ ಸ್ಥಾನಕ್ಕೆ ಕೃತಿವಾಸನ್‌ರವನ್ನು ನೇಮಕ ಮಾಡಿರುವುದು ಅಚ್ಚರಿ ಏನಲ್ಲ. ಹಲವಾರು ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃತಿವಾಸನ್ ಈ ಹುದ್ದೆಗೆ ಅರ್ಹರು ಎನ್ನುತ್ತಾರೆ ತಜ್ಞರು.
ಕೃತಿವಾಸನ್ ಅಧಿಕಾರವಧಿ ಮಾರ್ಚ್ 16ರಿಂದ ಆರಂಭವಾಗಲಿದೆ. ಕೃತಿವಾಸನ್ ಸಂಸ್ಥೆಯ ಬೆಳವಣಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದು, ಹಲವಾರು ಪ್ರಮುಖ ನಿರ್ಧಾರಗಳಲ್ಲಿ ಪಾಲುದಾರರಾಗಿದ್ದಾರೆ. ಟಿಸಿಎಸ್‌ನ ಸಿಇಒ ಹುದ್ದೆಯ ವಿಚಾರಕ್ಕೆ ಬಂದಾಗ ಎಂದಿಗೂ ಕೃತಿವಾಸನ್ ಹೆಸರು ಮೊದಲು ಬರುತ್ತದೆ ಎಂದು ಕೋಟಕ್ ಇನ್‌ಸ್ಟಿಟ್ಯೂಟ್ ಈಕ್ವಿಟೀಸ್ ಹೇಳಿದೆ. ಟಿಸಿಎಸ್ ಸಂಸ್ಥೆಯು 1968ರಲ್ಲಿ ಸ್ಥಾಪನೆಯಾಗಿದೆ. ಟಿಸಿಎಸ್‌ನ 55 ವರ್ಷಗಳ ಇತಿಹಾಸದಲ್ಲಿ ಕೃತಿವಾಸನ್ ಸಂಸ್ಥೆಯ 5ನೇ ಸಿಇಒ ಆಗಿದ್ದಾರೆ. ಹಾಗಿರುವಾಗ ಕೃತಿವಾಸನ್ ಬಗ್ಗೆ ನಾವು ಕೆಲವು ವಿಚಾರಗಳನ್ನು ತಿಳಿಯೋಣ ಮುಂದೆ ಓದಿ..

ಟಿಸಿಎಸ್ ನೂತನ ಸಿಇಒ ಕೃತಿವಾಸನ್ ಯಾರು?
ಟಿಸಿಎಸ್ ನೂತನ ಸಿಇಒ ಕೃತಿವಾಸನ್ 1989ರಲ್ಲಿ ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ. ಸಂಸ್ಥೆಯಲ್ಲಿ ನಾಯಕತ್ವ, ಸಿಬ್ಬಂದಿಗಳ ನಡುವಿನ ಸಂಬಂಧಗಳ ನಿರ್ವಹಣೆ, ದೊಡ್ಡ ಯೋಜನೆಗಳ ನಿರ್ವಹಣೆ, ಸೇಲ್ಸ್ ಡಿಪಾರ್ಟ್‌ಮೆಂಟ್ ನಿರ್ವಹಣೆಯನ್ನು ಕೃತಿವಾಸನ್ ಮಾಡಿಕೊಂಡು ಬಂದಿದ್ದಾರೆ. ಕೃತಿವಾಸನ್ ಸಿಇಒ ಆಗಿ ಮುಂಬಡ್ತಿ ಪಡೆಯುವುದಕ್ಕೂ ಮುನ್ನ ಟಾಟಾ ಕನ್ಸಲ್ಟೆನ್ಸ್ ಸರ್ವಿಸಸ್ ಬ್ಯಾಂಕಿಂಗ್, ಫೈನಾನ್ಶಿಯಲ್ ಸರ್ವಿಸಸ್ ಮತ್ತು ವಿಮಾ ವಹಿವಾಟು ಘಟಕದ ಅಧ್ಯಕ್ಷ ಮತ್ತು ಜಾಗತಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.
ಟಿಸಿಎಸ್ ವೆಬ್‌ಸೈಟ್‌ನಲ್ಲಿನ ಕೃತಿವಾಸನ್ ವ್ಯಕ್ತಿಚಿತ್ರದಲ್ಲಿ, ತನ್ನ ಹುದ್ದೆಯನ್ನು ನಿರ್ವಹಣೆ ಮಾಡುವ ಸಂದರ್ಭದಲ್ಲಿ ಕೃತಿವಾಸನ್ ಯೋಜನೆ, ಸಂಸ್ಥೆಯ ಬೆಳವಣಿಗೆಗೆ ಕಾರ್ಯತಂತ್ರ ರೂಪಿಸುವುದು, ಹಣಕಾಸು ಸ್ಥಿತಿಯ ಬೆಳವಣಿಗೆ, ಗ್ರಾಹಕರ ಫೀಡ್‌ಬ್ಯಾಕ್ ಹೆಚ್ಚಿಸುವುದು, ಮಾರುಕಟ್ಟೆಯಲ್ಲಿ ಸಂಸ್ಥೆಯ ಸ್ಥಾನ ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದರು. ಈ ನಿಟ್ಟಿನಲ್ಲಿ ಕೃತಿವಾಸನ್ ಸಂಸ್ಥೆಗಳು ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.
ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಬ್ಯಾಚುರಲ್ ಮೆಕಾನಿಕಲ್ ಇಂಜಿಯರಿಂಗ್ ಪದವಿಯನ್ನು ಪಡೆದ ಕೃತಿವಾಸನ್, ಐಐಟಿ ಕಾನ್ಪುರದಲ್ಲಿ ಇಂಡಸ್ಟ್ರಿಯಲ್ & ಮ್ಯಾನೆಜ್‌ಮೆಂಟ್ ಇಂಜಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಟಿಸಿಎಸ್ ಸಂಸ್ಥೆಗೆ 1989ರಲ್ಲಿ ಸೇರ್ಪಡೆಯಾಗಿದ್ದು ಸುಮಾರು 34 ವರ್ಷಗಳ ವೃತ್ತಿ ಜೀವನದ ಅನುಭವವನ್ನು ಹೊಂದಿದ್ದಾರೆ. ತನ್ನ ಜೀವನವನ್ನೇ ಟಿಸಿಎಸ್ ಉದ್ಯೋಗದಲ್ಲಿ ಕಳೆದ ಕೃತಿವಾಸನ್ ಸಂಸ್ಥೆಯ ಬಿಎಫ್‌ಎಸ್‌ಐ ಸೆಗ್‌ಮೆಂಟ್‌ನಿಂದ ಪಡೆಯುವ ಶೇಕಡ 35-40ರಷ್ಟು ಆದಾಯಕ್ಕೆ ಜವಾಬ್ದಾರರಾಗಿದ್ದಾರೆ.
ಈ ವಯಸ್ಸಿನ ಲೆಕ್ಕಾಚಾರ ನಿಮಗೆ ತಿಳಿದಿರಲಿ
ವಯಸ್ಸಿನ ವಿಚಾರದಲ್ಲಿ ಮೋತಿಲಾಲ್ ಓಸ್ವಾಲ್ ಸೆಕ್ಯೂರಿಟೀಸ್ ಲೆಕ್ಕಾಚಾರವೊಂದನ್ನು ಮಾಡಿದೆ. ಇದರ ಪ್ರಕಾರವಾಗಿ ಟಿಸಿಎಸ್ ಸಂಸ್ಥೆಯಲ್ಲಿ ಓರ್ವ ವ್ಯಕ್ತಿ ಸಿಇಒ ಆಗಿ ತನಗೆ 65 ವರ್ಷ ವಯಸ್ಸಾಗುವವರೆಗೂ ಇರಬಹುದು. ಅದರ ಲೆಕ್ಕಾಚಾರದಲ್ಲಿ ನೋಡಿದಾಗ ಕೃತಿವಾಸನ್ ಇನ್ನು 6-7 ವರ್ಷಗಳ ಕಾಲ ಸಂಸ್ಥೆಯ ಸಿಇಒ ಆಗಿರಲು ಅರ್ಹರಾಗಿದ್ದಾರೆ. ಎಸ್ ರಾಮದುರೈ 51 ವರ್ಷದಲ್ಲಿ ಸಿಇಒ ಆಗಿದ್ದರೆ, ಎನ್ ಚಂದ್ರಶೇಖರನ್ 45ನೇ ವರ್ಷದಲ್ಲಿ ಸಿಇಒ ಆಗಿದ್ದರು, ಗೋಪಿನಾಥನ್ 46ನೇ ವರ್ಷದಲ್ಲಿ ಸಿಇಒ ಆಗಿ ನೇಮಕಾತಿಹಗೊಂಡಿದ್ದಾರೆ, ಆದರೆ ಕೃತಿವಾಸನ್ ಪ್ರಸ್ತುತ 58 ವರ್ಷದವರಾಗಿದ್ದು ಇನ್ನು 6-7 ವರ್ಷದಲ್ಲಿ ನಿವೃತ್ತಿ ಹೊಂದಲಿದ್ದಾರೆ.


Click it and Unblock the Notifications