ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಮಂಡಳಿಯು ಶುಕ್ರವಾರ ಅಶೋಕ್ ವಾಸ್ವಾನಿ ಅವರನ್ನು ಬ್ಯಾಂಕ್‌ನ ನಿರ್ದೇಶಕ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಲು ಅನುಮೋದನೆ ನೀಡಿದೆ. ಕಳೆದ ತಿಂಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಾಸ್ವಾನಿಯನ್ನು ಮೂರು ವರ್ಷಗಳ ಅವಧಿಗೆ ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿ ನೇಮಿಸಲು ಅನುಮೋದನೆ ನೀಡಿತು.
ಶುಕ್ರವಾರ ನಡೆದ ತಮ್ಮ ಸಭೆಯಲ್ಲಿ ನಿರ್ದೇಶಕರ ಮಂಡಳಿಯು ವಾಸ್ವಾನಿ ಅವರನ್ನು ಜನವರಿ 1, 2024 ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಬ್ಯಾಂಕ್‌ನ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮತ್ತು ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ ನೇಮಕ ಮಾಡಿದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಬ್ಯಾಂಕಿನ ಸದಸ್ಯರ ಅನುಮೋದನೆ ಪಡೆಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಬಾರ್ಕ್ಲೇಸ್‌ನಲ್ಲಿ ಕೆಲಸ ಮಾಡಿದ ವಾಸ್ವಾನಿ ಅವರು ಸೆಪ್ಟೆಂಬರ್ 1 ರಿಂದ ಬ್ಯಾಂಕ್‌ನ ಎಂಡಿ ಹುದ್ದೆಯನ್ನು ತೊರೆದಿರುವ ಉದಯ್ ಕೋಟಕ್‌ರ ಸ್ಥಾನವನ್ನು ತುಂಬಲಿದ್ದಾರೆ. ಹಾಗಾದರೆ ವಾಸ್ವಾನಿ ಯಾರೆಂದು ತಿಳಿಯೋಣ ಮುಂದೆ ಓದಿ...
ಅಶೋಕ್ ವಾಸ್ವಾನಿ ಯಾರು?
ಪ್ರಸ್ತುತ, ವಾಸ್ವಾನಿ ಅವರು ಯುಎಸ್- ಇಸ್ರೇಲಿ ಎಐ ಫಿನ್‌ಟೆಕ್ ಸಂಸ್ಥೆಯಾದ ಪಗಾಯಾ ಟೆಕ್ನಾಲಜೀಸ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ. ಹಾಗೆಯೇ ವಾಸ್ವಾನಿ ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಗ್ರೂಪ್, ಯುಕೆ ಎಸ್‌ಪಿ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಮ್ಯಾನೇಜ್‌ಮೆಂಟ್‌ನ ಮಂಡಳಿಯಲ್ಲಿದ್ದಾರೆ. ಪ್ರಥಮ್ ಮತ್ತು ಲೆಂಡ್ ಎ ಹ್ಯಾಂಡ್ ಸೇರಿದಂತೆ ವಿವಿಧ ಲೋಕೋಪಕಾರಿ ಸಂಸ್ಥೆಗಳಿಗೆ ಬೆಂಬಲಿಸುತ್ತಿದ್ದಾರೆ.
62 ವರ್ಷದ ವಾಸ್ವಾನಿ ಅವರು ಮೂರೂವರೆ ದಶಕಗಳ ಕಾಲ, ಆರಂಭದಲ್ಲಿ ಸಿಟಿಗ್ರೂಪ್‌ನಲ್ಲಿ ಮತ್ತು ಇತ್ತೀಚೆಗಷ್ಟೇ ಬಾರ್ಕ್ಲೇಸ್‌ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕಾರ್ಪೊರೇಟ್ ಮತ್ತು ಗ್ರಾಹಕ ವ್ಯವಹಾರ, ಕೈಗಾರಿಕಾ ಶಕ್ತಿ ನಿರ್ವಹಣೆಯಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೆ.
ವಾಸ್ವಾನಿ ಯುಕೆಯ ಬಾರ್ಕ್ಲೇಸ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ನಂತರ ಅದರ ಜಾಗತಿಕ ಗ್ರಾಹಕ, ಖಾಸಗಿ, ಕಾರ್ಪೊರೇಟ್ ಮತ್ತು ಪಾವತಿ ವ್ಯವಹಾರಗಳ ಸಿಇಒ ಮತ್ತು ಗುಂಪಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಇದಕ್ಕೂ ಮೊದಲು, ಸಿಟಿಗ್ರೂಪ್ ಏಷ್ಯಾ ಪೆಸಿಫಿಕ್ ಸಿಇಒ ಮತ್ತು ಸಿಟಿಗ್ರೂಪ್ ಗ್ಲೋಬಲ್ ಆಪರೇಟಿಂಗ್ ಆಂಡ್ ಮ್ಯಾನೆಜ್‌ಮೆಂಟ್ ಕಮಿಟಿಗಳ ಸದಸ್ಯರಾಗಿದ್ದರು.
ಹಾಗೆಯೇ ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಗ್ರೂಪ್‌ನಂತಹ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಮಂಡಳಿಯಲ್ಲಿದ್ದಾರೆ. ಯುಕೆಯ ಎಸ್‌ಪಿ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಮ್ಯಾನೇಜ್‌ಮೆಂಟ್‌ನರಿ ಮಂಡಳಿಯಲ್ಲಿದ್ದರು. ಸಿಟಿಜನ್ ಅಡ್ವೈಸ್ ಬ್ಯೂರೋದ ಮಾಜಿ ಟ್ರಸ್ಟಿ, ಬ್ರಿಟಿಷ್ ಬ್ಯಾಂಕರ್ಸ್ ಅಸೋಸಿಯೇಷನ್‌ನ ರಿಟೇಲ್ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು.
ಇನ್ನು ಎಂಟರ್‌ಕಾರ್ಡ್‌ನ ಮಂಡಳಿಯ ಮಾಜಿ ಅಧ್ಯಕ್ಷ, ಟೆಲಿನಾರ್‌ನ ಮಾಜಿ ಬೋರ್ಡ್ ಸದಸ್ಯ, ವಿಸಾ ಏಷ್ಯಾ ಪೆಸಿಫಿಕ್ ಮತ್ತು ವಿಸಾದ ಯುಕೆಯ ಮಾಜಿ ಮಂಡಳಿಯ ಸದಸ್ಯರಾಗಿದ್ದರು.


Click it and Unblock the Notifications