ಇದು ಬಹಳ ಮಂದಿಗೆ ಇರುವ ಪ್ರಶ್ನೆ. ಎಲ್ಲ ವ್ಯವಹಾರಕ್ಕೂ ಇದ್ಯಾಕೆ Permanent Account Number (PAN) ಕೇಳ್ತಾರೆ? ತೆರಿಗೆ ಇಲಾಖೆಯಿಂದ ಯಾವ ಕಾರಣಕ್ಕೆ ಪ್ಯಾನ್ ಕಾರ್ಡ್ ನೀಡುತ್ತಾರೆ ಎಂಬುದು ನಿಮಗೆ ಗೊತ್ತಾ? ತೆರಿಗೆ ಪಾವತಿಸುವವರ ಎಲ್ಲ ವ್ಯವಹಾರಗಳನ್ನು ಗುರುತಿಸುವುದಕ್ಕೆ ತೆರಿಗೆ ಇಲಾಖೆಗೆ ಪ್ಯಾನ್ ಕಾರ್ಡ್ ನೆರವಾಗುತ್ತದೆ.
ಎಲ್ಲ ವ್ಯವಹಾರಗಳು ಅಂದರೆ, ಹಣದ ಆದಾಯ, ತೆರಿಗೆ ಕಡಿತ ಮತ್ತು ಪಾವತಿಸಿರುವ ಮೊತ್ತ, ತೆರಿಗೆ ರಿಟರ್ನ್ಸ್ ಮತ್ತು ಇತರ ನಿರ್ದಿಷ್ಟ ವ್ಯವಹಾರಗಳು ಒಳಗೊಂಡಿರುತ್ತವೆ. ಯಾವುದೇ ಆರ್ಥಿಕ ವರ್ಷದಲ್ಲಿ ತೆರಿಗೆ ವ್ಯಾಪ್ತಿಗೆ ಬರುವಷ್ಟು ಆದಾಯ ಇದ್ದಲ್ಲಿ ಪ್ಯಾನ್ ಕಾರ್ಡ್ ಇರಬೇಕು.

ಯಾವ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತದೆ?
60 ವರ್ಷ ವಯಸ್ಸಿನೊಳಗೆ ಇದ್ದವರಿಗೆ 2.5 ಲಕ್ಷ ಮತ್ತು ಮೇಲ್ಪಟ್ಟ ಆದಾಯಕ್ಕೆ
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 3 ಲಕ್ಷ ಮತ್ತು ಮೇಲ್ಪಟ್ಟ ಆದಾಯಕ್ಕೆ
80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ಮತ್ತು ಮೇಲ್ಪಟ್ಟ ಆದಾಯ ಇರುವವರಿಗೆ
ಪ್ಯಾನ್ ಕಾರ್ಡ್ ಭಾರತದಾದ್ಯಂತ ಅಧಿಕೃತ ಮತ್ತು ಯಾವುದೇ ತೆರಿಗೆ ಪಾವತಿದಾರರಿಗೆ ಒಂದು ಪರ್ಮನೆಂಟ್ ಅಕೌಂಟ್ ನಂಬರ್ ದೊರೆಯುತ್ತದೆ. ಒಂದು ವೇಳೆ ಪ್ಯಾನ್ ಗೆ ಸಂಬಂಧಿಸಿದ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಮಾಡಬೇಕಿದ್ದಲ್ಲಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಒದಗಿಸಬೇಕು. ಉದಾ: ಹೆಸರು, ವಿಳಾಸ ಇತ್ಯಾದಿ. ಬದಲಾವಣೆ ಮಾಡಿಸಿ, ಹೊಸ ಪ್ಯಾನ್ ಕಾರ್ಡ್ ಪಡೆಯಬಹುದು. ಆದರೆ ಒಬ್ಬ ವ್ಯಕ್ತಿ ಎರಡು ಪ್ಯಾನ್ ಇಟ್ಟುಕೊಳ್ಳುವುದು ಅಪರಾಧ.


Click it and Unblock the Notifications