For Quick Alerts
ALLOW NOTIFICATIONS  
For Daily Alerts

ಚೀನೀ ಬ್ರ್ಯಾಂಡ್ ಗಳಿಗೆ ಭಾರತದಲ್ಲಿ ಭರ್ತಿ ಒದೆ ಬೀಳಲು ಎಷ್ಟು ಕಾರಣಗಳು?

|

ಕೊರೊನಾ ವ್ಯಾಪಿಸುತ್ತಿರುವಂತೆಯೇ ಚೀನಾ ಉತ್ಪನ್ನಗಳ ವಿರುದ್ಧ ಭಾರತೀಯ ಸಿಟ್ಟು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕೊರೊನಾ ಟೆಸ್ಟಿಂಗ್ ಕಿಟ್ ಗಳಲ್ಲಿ ಸಮಸ್ಯೆಯಾಗಿದ್ದು ಅಥವಾ ಕೊರೊನಾ ಸೋಂಕಿನ ಬಗ್ಗೆ ಚೀನಾ ಹೊರ ಜಗತ್ತಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂಬ ಆರೋಪ ಹಾಗೂ ಇದರ ಜತೆಗೆ ಚೀನಾದ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ವಿರುದ್ಧ ನಡೆಯುತ್ತಿರುವ ಆನ್ ಲೈನ್ ಅಭಿಯಾನ... ಇವೆಲ್ಲ ಸೇರಿ ಸಿಟ್ಟನ್ನು ಮತ್ತಷ್ಟು ಪಟ್ಟು ಹೆಚ್ಚಿಸಿದೆ.

ಕೊರೊನಾ ವಿಶ್ವದಾದ್ಯಂತ ಹಬ್ಬಿದ ನಂತರ ಏನೆಲ್ಲ ಆರೋಪಗಳು ಹಾಗೂ ಅದರ ಸುತ್ತ ಹುಟ್ಟಿಕೊಂಡಿರುವ ವ್ಯಾಖ್ಯಾನಗಳು ಚೀನಾ ಬಗ್ಗೆ ನಕಾರಾತ್ಮಕ ಪ್ರಭಾವಳಿಯನ್ನು ಸೃಷ್ಟಿಸಿವೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಸದ್ಯಕ್ಕೆ ಈ ನಕಾರಾತ್ಮಕ ಆಲೋಚನೆಗಳು ಚೀನಾದ ಪ್ರಾದೇಶಿಕ ಭಾಗದಲ್ಲಿ ಇದೆ. ಇದೇ ಆಲೋಚನೆ ಚೀನಾದ ಹೊರಭಾಗದಲ್ಲೂ ಇರುತ್ತದೋ ಅಥವಾ ಇಳಿಯುತ್ತದೋ ಗೊತ್ತಾಗಬೇಕಿದೆ.

ಯಾವುದೇ ಉತ್ಪನ್ನಕ್ಕೂ ಚೀನಾದ ಬಿಡಿ ಭಾಗ ಬೇಕು

ಯಾವುದೇ ಉತ್ಪನ್ನಕ್ಕೂ ಚೀನಾದ ಬಿಡಿ ಭಾಗ ಬೇಕು

ಚೀನಾದ ಪ್ರಾಡಕ್ಟ್ ಗಳ ಅಥವಾ ಬ್ರ್ಯಾಂಡ್ ಬಗ್ಗೆ ಇಂಥದ್ದೊಂದು ಸಿಟ್ಟು ಮೂಡುತ್ತಿರುವುದು ಇದೇ ಮೊದಲಲ್ಲ. 2014ರಲ್ಲಿ ಶಿಯೋಮಿ ಬಗ್ಗೆ ಭಾರತೀಯ ವಾಯುಸೇನೆ ಆಕ್ಷೇಪ ಎತ್ತಿತು. ಎಫ್- ಸೆಕ್ಯೂರ್ ಎಂಬ ಸೆಕ್ಯೂರಿಟಿ ಕಂಪೆನಿ ಒಂದು ವಿಚಾರ ಕಂಡುಹಿಡಿದಿತ್ತು. ಆ ಫೋನ್ ಗಳು ಫೋನ್ ನಂಬರ್, IMEI ಸಂಖ್ಯೆ, ಆಪರೇಟರ್ ಹೆಸರನ್ನು ಚೀನಾದಲ್ಲಿ ಇರುವ ರಿಮೋಟ್ ಸರ್ವರ್ ಗೆ ರವಾನೆ ಆಗುತ್ತಿದೆ ಎಂಬುದು ಆತಂಕಕ್ಕೆ ಕಾರಣವಾಗಿತ್ತು. ದೋಕ್ಲಾಂ ಬಿಕ್ಕಟ್ಟು ಕಾಣಿಸಿಕೊಂಡಾಗ, ಚೀನಾ ಉತ್ಪನ್ನಗಳನ್ನು ನಿರ್ಬಂಧಿಸುವಂತೆ ಯೋಗ ಗುರು ಬಾಬಾ ರಾಮ್ ದೇವ್ ಕರೆ ನೀಡಿದ್ದರು. ಇನ್ನು ಟೆಕ್ ಆರ್ಕ್ ಮುಖ್ಯ ಅನಲಿಸ್ಟ್, ಸ್ಥಾಪಕ ಫೈಸನ್ ಕವೂಸಾ ಪ್ರಕಾರ, ಕೆಲವು ಆನ್ ಲೈನ್ ಅಭಿಯಾನದ ಮೂಲಕ ಚೀನಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡದಿರುವಂತೆ ಇರಲು ಸಾಧ್ಯವಿಲ್ಲ. ದೋಕ್ಲಾಂ ಬಿಕ್ಕಟ್ಟು ಸಂದರ್ಭದಲ್ಲೂ ಹೀಗೇ ಆಗಿತ್ತು. ಆದರೆ ನಂತರ ಎಲ್ಲವೂ ಕರಗಿಹೋಯಿತು. ನಾವೆಂಥ ಜಗತ್ತಿನಲ್ಲಿ ಬದುಕುತ್ತಿದ್ದೀವಿ ಅಂದರೆ, ಪ್ರತಿ ದೇಶವೂ ಇನ್ನೊಂದು ದೇಶದ ಮೇಲೆ ಯಾವುದಕ್ಕಾದರೂ ಸರಿ, ಅವಲಂಬಿತವಾಗಿರುತ್ತದೆ. ಇವತ್ತಿಗೆ ಏನೇ ಉತ್ಪಾದನೆ ಆಗಬೇಕು ಅಂದರೂ ಅದಕ್ಕೆ ಚೀನಾದ ಬಿಡಿ ಭಾಗಗಳು ಬೇಕೇಬೇಕು.

ಶಿಯೋಮಿ ಫೋನ್ ಪೈಕಿ ಶೇ. 99ರಷ್ಟು ಭಾರತದಲ್ಲೇ ಅಸೆಂಬಲ್

ಶಿಯೋಮಿ ಫೋನ್ ಪೈಕಿ ಶೇ. 99ರಷ್ಟು ಭಾರತದಲ್ಲೇ ಅಸೆಂಬಲ್

ಭಾರತದಲ್ಲಿ ಚೀನಾ ಉತ್ಪನ್ನಗಳು ವಿಪರೀತ ಹೊಕ್ಕುಬಳಕೆ ಆಗಿದೆ. ಇಲ್ಲಿನ ಸೆಲೆಬ್ರಿಟಿಗಳು ಚೀನಾ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಡರ್ ಆಗಿದ್ದಾರೆ. ಐಪಿಎಲ್ ಸೇರಿದಂತೆ ಹಲವು ಆಯೋಜಕತ್ವ ವಹಿಸಿದೆ ಚೀನಾದ ಬ್ರ್ಯಾಂಡ್ ಗಳು. ಇನ್ನೂ ಮುಂದುವರಿದು ಹೇಳಬೇಕೆಂದರೆ, ಅವುಗಳ ಉತ್ಪಾದನೆಯು ಭಾರತದಲ್ಲಿ ಆಗುತ್ತಿದೆ. ಉದಾಹರಣೆಗೆ, ಭಾರತದಲ್ಲಿ ಮಾರಾಟ ಆಗುವ ಶಿಯೋಮಿ ಫೋನ್ ಗಳ ಪೈಕಿ ಶೇಕಡಾ 99ರಷ್ಟು ಭಾರತದಲ್ಲೇ ಅಸೆಂಬಲ್ ಮಾಡಲಾಗುತ್ತದೆ. ಅವುಗಳಿಗೆ ಬೇಕಾದ ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಬ್ರ್ಯಾಂಡ್ ಇಮೇಜ್ ನಿರ್ವಹಿಸುವುದರಲ್ಲಿ ಚೀನಾ ಮೂಲದ ಕಂಪೆನಿಗಳು ವೃತ್ತಿಪರವಾಗಿ ಇರುತ್ತವೆ. ಅದನ್ನು ತುಂಬ ವೇಗವಾಗಿ, ಪ್ಲ್ಯಾನ್ ಹಾಕಿಕೊಂಡು ಮಾಡುತ್ತವೆ. ಆದ್ದರಿಂದ ಆನ್ ಲೈನ್ ನಲ್ಲಿ ನಡೆಯುತ್ತಿರುವ ಚೀನಾ ವಿರೋಧಿ ಅಭಿಯಾನ ಏನೂ ಕೆಲಸ ಮಾಡಲ್ಲ ಎಂಬುದು ಮಾರ್ಕೆಟ್ ತಜ್ಞರ ಅಭಿಪ್ರಾಯ.

ಚೀನಾ ಜತೆ 87 ಬಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರ

ಚೀನಾ ಜತೆ 87 ಬಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರ

ಭಾರತದ ಎಲೆಕ್ಟ್ರಾನಿಕ್ ಉಪಕರಣಗಳ ಪೂರೈಕೆ ಚೀನಾ ಮೇಲೆ ಹೆಚ್ಚು ಅವಲಂಬಿಸಿದೆ. ಕೊರೊನಾ ಕಾರಣಕ್ಕೆ ಚೀನಾದಲ್ಲಿ ಕಾರ್ಖಾನೆಗಳು ಉತ್ಪಾದನೆ ನಿಲ್ಲಿಸಿದಾಗ ಐಫೋನ್ ಸೇರಿದಂತೆ ಹಲವು ಪ್ರೀಮಿಯಂ ಹ್ಯಾಂಡ್ ಸೆಟ್ ಗಳ ಪೂರೈಕೆಯಲ್ಲೂ ಮಾರ್ಚ್ ನಲ್ಲಿ ಸಮಸ್ಯೆಯಾಯಿತು. ಇಂಟರ್ ನ್ಯಾಷನಲ್ ಡೇಟಾ ಕಾರ್ಪೊರೇಷನ್ (IDC) ಮಾಹಿತಿ ಪ್ರಕಾರ, 2019ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತಕ್ಕೆ ಬಂದಿರುವ ಒಟ್ಟು ಸ್ಮಾರ್ಟ್ ಫೋನ್ ಗಳಲ್ಲಿ ಶೇಕಡಾ 70ರಷ್ಟು ಚೈನೀಸ್ ಕಂಪೆನಿಯದು. ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿ- ಅಂಶ ಪ್ರಕಾರ, 2018-19ರಲ್ಲಿ ಚೀನಾದ ಜತೆಗೆ 87 ಬಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರ ಮಾಡಲಾಗಿದೆ. ಅದರಲ್ಲಿ 20.6 ಬಿಲಿಯನ್ ಅಮೆರಿಕನ್ ಡಾಲರ್ ಎಲೆಕ್ಟ್ರಾನಿಕ್ಸ್ ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ.

ಭಾರತದಲ್ಲಿನ ಮೊಬೈಲ್ ಬಿಡಿಭಾಗಗಳು ಶೇ. 90ರಷ್ಟು ಚೀನಾದಿಂದ ಬರುತ್ತವೆ

ಭಾರತದಲ್ಲಿನ ಮೊಬೈಲ್ ಬಿಡಿಭಾಗಗಳು ಶೇ. 90ರಷ್ಟು ಚೀನಾದಿಂದ ಬರುತ್ತವೆ

ಭಾರತದಲ್ಲಿ ಉತ್ಪಾದನೆ ಆಗುವ ಫೋನ್ ಗಳಲ್ಲಿ ಬಳಸುವ ಬಿಡಿ ಭಾಗಗಳಲ್ಲಿ ಶೇಕಡಾ 90ರಷ್ಟು ಚೀನಾದಿಂದ ಬರುತ್ತವೆ ಎಂಬುದನ್ನು ಟೆಲಿಕಾಂ ಎಕ್ವಿಪ್ ಮೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ಕೆ. ಗೋಯೆಲ್ ಹೇಳುತ್ತಾರೆ. ಆದರೆ ಕೊರೊನಾ ನಂತರ ಅರಿವಿಗೆ ಬರಲು ಆರಂಭಿಸಿದೆ: ಜಾಗತಿಕ ಮಟ್ಟದ ಪೂರೈಕೆ ಜಾಲದ ಮೇಲೆ ಅತಿಯಾದ ಅವಲಂಬನೆ ಸರಿಯಲ್ಲ ಎಂದು ಗೊತ್ತಾಗುತ್ತಿದೆ. ಬಹಳ ದೇಶಗಳು ದೇಶೀಯವಾಗಿಯೇ ಉತ್ಪಾದನೆ ಆರಂಭಿಸಿವೆ. ಹಲವು ಕಂಪೆನಿಗಳು ಉತ್ಪಾದನೆಯ ಮೂಲ ನೆಲೆಯನ್ನೇ ಬದಲಾಯಿಸಿಕೊಂಡಿವೆ. ಭಾರತವು ಭರವಸೆ ಮೂಡಿಸುವ ತಾಣವಾಗಿ ಗೋಚರಿಸುತ್ತಿದೆ. ಆದರೆ ಇದು ರಾತ್ರೋರಾತ್ರಿ ಆಗುವಂಥದ್ದಲ್ಲ. ಚೀನಾವಿರೋಧಿ ಮನಸ್ಥಿತಿ ಒಂದರಿಂದಲೇ ಎಲ್ಲವೂ ಬದಲಾವಣೆ ಆಗಬೇಕು ಅಂದುಕೊಂಡರೆ ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ಸಿದ್ಧತೆ, ಪ್ರಯತ್ನ, ಶ್ರಮ ಎಲ್ಲವೂ ಬೇಕು.

English summary

Will Anti China Sentiment Hurts Chinese Brands In India?

Corona impact: Will anti China sentiment hurts Chinese brand in India? Here is an analysis.
Story first published: Friday, April 24, 2020, 21:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X