For Quick Alerts
ALLOW NOTIFICATIONS  
For Daily Alerts

ಮೈಕ್ರೋಸಾಫ್ಟ್ ವಿಂಡೋಸ್ 11 ಬಿಡುಗಡೆ: ಸ್ಕ್ರೀನ್‌ಶಾಟ್‌ ತೆಗೆಯುವುದು ಹೇಗೆ?

|

ಮೈಕ್ರೋಸಾಫ್ಟ್ ವಿಂಡೋಸ್ 11 ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಬಾರಿ ಈ ವಿಂಡೋಸ್ ಓಎಸ್‌ಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಜೊತೆಗೆ ಪ್ರತಿಯೊಬ್ಬರೂ ಯಾವುದೇ ಮೂರನೇ ವ್ಯಕ್ತಿಯ ಸಾಫ್ಟ್‌ವೇರ್ ಅನ್ನು ಬಳಸದೆ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಚಲಾಯಿಸಲು ಸಾಧ್ಯವಾಗುತ್ತದೆ.

 

ವಿಂಡೋಸ್ 11 ಲ್ಯಾಪ್‌ಟಾಪ್ ಮತ್ತು ಪಿಸಿಯಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದು ಹೇಗೆಂದು ಈ ಕೆಳಗೆ ತಿಳಿಯಿರಿ

ಹಂತ 1. ಪ್ರಿಂಟ್ ಸ್ಕ್ರೀನ್ ಕೀ (PrtScn) ಅನ್ನು ಬಳಸುವುದರಿಂದ ಇಡೀ ಪೇಜ್‌ನ ಸ್ಕ್ರೀನ್‌ಶಾಟ್ ಅನ್ನು ತೆಗೆಯಬಹುದು. ನೀವು ಸೆರೆಹಿಡಿದ ಫೋಟೋವನ್ನು Ctrl + V ಒತ್ತುವ ಮೂಲಕ ಪೈಂಟ್ ಟೂಲ್‌ಗೆ ಹೋಗಿ ಅಂಟಿಸಬಹುದು ಮತ್ತು ಅಲ್ಲಿಂದ ಫೋಟೋ ಡೌನ್‌ಲೋಡ್ ಮಾಡಿಕೊಳ್ಳಬಹುದು.

ವಿಂಡೋಸ್ 11 ಬಿಡುಗಡೆ: ಸ್ಕ್ರೀನ್‌ಶಾಟ್‌ ತೆಗೆಯುವುದು ಹೇಗೆ?

ಹಂತ 2. ವಿಂಡೋಸ್ + ಪ್ರಿಂಟ್ ಸ್ಕ್ರೀನ್ ಬಳಸಿ ನಿಮ್ಮ ವಿಂಡೋಸ್ 11 ಲ್ಯಾಪ್‌ಟಾಪ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು. ಇದರಲ್ಲಿ ಸಂಪೂರ್ಣ ಪೇಜ್‌ ಅನ್ನು ಸೆರೆಹಿಡಿಯಲಾಗುತ್ತದೆ. ಇದಕ್ಕಾಗಿ ನೀವು ಪೈಂಟ್ ಟೂಲ್‌ಗೆ ಹೋಗಿ ಅಂಟಿಸಲು Ctrl + V ಒತ್ತಿರಿ. ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಆ ಫೋಟೋವನ್ನು ಉಳಿಸಲು ನೀವು ಬಯಸಿದರೆ, ನಂತರ ನೀವು ಉಳಿಸು(Save) ಬಟನ್ ಕ್ಲಿಕ್ ಮಾಡುವ ಮೂಲಕ ಇದನ್ನು ಮಾಡಬಹುದು.

ಹಂತ 3. ಆಲ್ಟ್ + ಪ್ರಿಂಟ್ ಸ್ಕ್ರೀನ್ ಕೀಗಳನ್ನು ಬಳಸಿಕೊಂಡು ನೀವು ಸುಲಭವಾಗಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು. ಇದಕ್ಕಾಗಿ ನಾವು ಮೇಲೆ ಹೇಳಿದ ಅದೇ ಪ್ರಕ್ರಿಯೆಯೂ ಇದೆ.

ಹಂತ 4. ವಿನ್ + ಶಿಫ್ಟ್ + ಎಸ್ ಕೀಲಿಗಳನ್ನು ಬಳಸುವ ಮೂಲಕ ನೀವು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು.

ಹಂತ 5. ಇದರ ಹೊರತಾಗಿ, ವಿನ್ + ಆಲ್ಟ್ + ಪ್ರಿಂಟ್ ಸ್ಕ್ರೀನ್ ಕೀಗಳನ್ನು ಬಳಸಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು.

Read more about: microsoft laptop software
English summary

Windows 11 Launched: How To Screenshot On Windows 11

Here the details of how to take screenshot on windows 11
Story first published: Saturday, June 26, 2021, 10:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X