ಮುಂಬೈನ ಕಿಂಗ್ಸ್ ಸರ್ಕಲ್‌ನಲ್ಲಿರುವ ಜಿಎಸ್‌ಬಿ (ಗೌಡ ಸಾರಸ್ವತ ಬ್ರಾಹ್ಮಣ) ಮಂಡಲವು ಭವ್ಯವಾದ ಗಣೇಶ ಮೂರ್ತಿಯನ್ನು ಅನಾವರಣಗೊಳಿಸಿದೆ. ಇದು ನಗರದ ಅತ್ಯಂತ 'ಶ್ರೀಮಂತ' ಗಣಪತಿ ಮಂಡಲಗಳಲ್ಲಿ ಒಂದಾಗಿದೆ. 69 ಕಿಲೋಗ್ರಾಂಗಳಷ್ಟು ಚಿನ್ನ ಮತ್ತು 336 ಕಿಲೋಗ್ರಾಂಗಳಷ್ಟು ಬೆಳ್ಳಿಯ ಅಲಂಕಾರವನ್ನು ಹೊಂದಿದೆ. ಈ ಭವ್ಯವಾದ ವಿಗ್ರಹವು ವಾರ್ಷಿಕ ಗಣೇಶ ಚತುರ್ಥಿ ಆಚರಣೆಗೆ ಹುಮ್ಮಸ್ಸು ನೀಡಿದೆ.
ಕಿಂಗ್ಸ್ ಸರ್ಕಲ್‌ನಲ್ಲಿರುವ ಜಿಎಸ್‌ಬಿ ಮಂಡಲವು ಗಣೇಶನ ಭಕ್ತಿ ಮತ್ತು ಸಮರ್ಪನೆಗಾಗಿ ಬಹಳ ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಪ್ರತಿ ವರ್ಷ, ಜಿಎಸ್‌ಬಿ ಮಂಡಲವು ಭಕ್ತರಿಗೆ ಮತ್ತು ಸಂದರ್ಶಕರಿಗೆ ದೈವಿಕ ಅನುಭವವನ್ನು ಸೃಷ್ಟಿಸಲು ಶ್ರಮಿಸುತ್ತಾ ಬಂದಿದ್ದಾರೆ. ಈ ವರ್ಷವೂ ಈ ಶ್ರಮವನ್ನು ಮಾಡಿದ್ದಾರೆ. ಅಮೂಲ್ಯವಾದ ಲೋಹಗಳಿಂದ ಅಲಂಕರಿಸಲ್ಪಟ್ಟ ಗಣಪತಿ ವಿಗ್ರಹವನ್ನು ಮಂಡಲ ಅನಾವರಣ ಮಾಡಿದೆ.

ಈ ಮಂಡಲವು ವೈಭವದ ಗಣೇಶ ವಿಗ್ರಹವನ್ನು ಹೊಂದಿದೆ. ಗಣೇಶ ಮೂರ್ತಿಯನ್ನು ಅಲಂಕರಿಸುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಬಳಸಲಾಗಿದ್ದು, ನೋಡಲು ಎರಡು ಕಣ್ಣುಗಳು ನಮಗೆ ಸಾಲದು. ಈ ಸುಂದರ ವಿಗ್ರಹವನ್ನು ನೋಡಿ ಭಕ್ತರು ನಿಬ್ಬೆರಗಾಗಿದ್ದಾರೆ, ವಿಸ್ಮಯಗೊಂಡಿದ್ದಾರೆ.
ಇಂತಹ ಅಗಾಧ ಪ್ರಮಾಣದ ಅಮೂಲ್ಯ ಲೋಹಗಳ ಬಳಕೆಯನ್ನು ಮುಂಬೈನಲ್ಲಿ ಸಾಮಾನ್ಯವಾಗಿ ಮಾಡಲಾಗುತ್ತದೆ. ಮುಂಬೈನಲ್ಲಿ ಗಣಪತಿ ಮೂರ್ತಿಯಲ್ಲಿ ಶೃಂಗರಿಸಲು ಅಮೂಲ್ಯವಾದ ಲೋಹಗಳ ಬಳಕೆಯು ಸಾಮಾನ್ಯವಾಗಿಯೇ ಕಂಡು ಬಂದಿದೆ. ಗಣೇಶ ಚತುರ್ಥಿಯು ಮುಂಬೈನಲ್ಲಿ ದೇಶದಲ್ಲೇ ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಜಿಎಸ್‌ಬಿ ಮಂಡಲ ಆಗಿದೆ.
ಜಿಎಸ್‌ಬಿ ಗಣೇಶನ ಶೃಂಗಾರದ ಜೊತೆಗೆ ಇತರೆ ಕಾರ್ಯಗಳನ್ನು ಕೂಡಾ ಮಾಡುತ್ತದೆ. ಜಿಎಸ್‌ಬಿ ಮಂಡಲ ಹಬ್ಬದ ಸಂದರ್ಭದಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸುವುದು, ಹಿಂದುಳಿದವರಿಗೆ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಮುಂಬೈ 10 ದಿನಗಳ ಗಣೇಶ ಚತುರ್ಥಿ ಹಬ್ಬಕ್ಕೆ ಸಜ್ಜಾಗುತ್ತಿದ್ದಂತೆ, ಕಿಂಗ್ಸ್ ಸರ್ಕಲ್‌ನಲ್ಲಿರುವ ಜಿಎಸ್‌ಬಿ ಮಂಡಲವು ತಮ್ಮ 'ಶ್ರೀಮಂತ' ಗಣಪತಿ ಮಂಡಲವನ್ನು ಸಿದ್ಧಪಡಿಸಿದೆ.
ದಾಖಲೆಯ ವಿಮಾ ಪಾಲಿಸಿ
ಮುಂಬೈನ ಅತ್ಯಂತ ಶ್ರೀಮಂತ ಗಣೇಶೋತ್ಸವದ ಸಂಘಟಕರಲ್ಲಿ ಒಂದೆಂದು ಕರೆಯಲ್ಪಡುವ ಕಿಂಗ್ಸ್ ಸರ್ಕಲ್‌ನಲ್ಲಿರುವ ಜಿಎಸ್‌ಬಿ ಸೇವಾ ಮಂಡಲ್, ನ್ಯೂ ಇಂಡಿಯಾ ಅಶ್ಯೂರೆನ್ಸ್‌ನಿಂದ ದಾಖಲೆಯ 360 ಕೋಟಿ ರೂಪಾಯಿ ಮೌಲ್ಯದ ವಿಮಾ ಪಾಲಿಸಿಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಕಿಂಗ್ಸ್ ಸರ್ಕಲ್‌ನಲ್ಲಿರುವ ಜಿಎಸ್‌ಬಿ ಸೇವಾ ಮಂಡಲ್ 316 ಕೋಟಿ ರೂಪಾಯಿ ಮೌಲ್ಯದ ಪಾಲಿಸಿಯನ್ನು ಖರೀದಿ ಮಾಡಿದೆ. ಈ ವರ್ಷ 360 ಕೋಟಿ ರೂಪಾಯಿ ಮೌಲ್ಯದ ವಿಮಾ ಪಾಲಿಸಿಯನ್ನು ಪಡೆದುಕೊಂಡಿದೆ. ಆದರೆ ಈ ವರ್ಷದ ಅಂಕಿ ಅಂಶವನ್ನು ನಾವು ಗಮನಿಸಿದಾಗ ಪಾಲಿಸಿಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ.
ಆದರೆ ಈ ವಿಮಾ ಕವರೇಜ್‌ಗಾಗಿ ಪಾವತಿಸಿದ ನಿಖರವಾದ ಪ್ರೀಮಿಯಂ ಅನ್ನು ಈ ಮುಂಬೈನ ಗಣೇಶ ಮಂಡಲ್ ಬಹಿರಂಗಪಡಿಸಿಲ್ಲ. ಇನ್ನು ಕಳೆದ ವರ್ಷದಿಂದ ಚಿನ್ನದ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ವಿಮಾ ವೆಚ್ಚಗಳ ವೆಚ್ಚಗಳು ಕೂಡಾ ಹೆಚ್ಚಳವಾಗಿದೆ ಎಂದು ವರದಿ ಹೇಳುತ್ತದೆ.
"360 ಕೋಟಿ ರೂಪಾಯಿಗಳಲ್ಲಿ, 38.47 ಕೋಟಿ ರೂಪಾಯಿಗಳನ್ನು ಎಲ್ಲಾ-ಅಪಾಯದ ವಿಮಾ ಪಾಲಿಸಿಗೆ ಹಂಚಲಾಗಿದೆ. ಇದು ಚಿನ್ನ ಮತ್ತು ಬೆಳ್ಳಿಯ ವಸ್ತುಗಳು ಮತ್ತು ಆಭರಣಗಳಿಗೆ ಸಂಬಂಧಿಸಿದ ಅಪಾಯಗಳನ್ನು ಒಳಗೊಂಡಿದೆ," ಎಂದು ಅಮಿತ್ ಪೈ ತಿಳಿಸಿದರು.
"ಹೆಚ್ಚುವರಿಯಾಗಿ, ಭೂಕಂಪದ ಅಪಾಯವನ್ನು ಒಳಗೊಂಡಂತೆ ಬೆಂಕಿ ಮತ್ತು ವಿಶೇಷ ಅಪಾಯಕ್ಕಾಗಿ 2 ಕೋಟಿ ರೂಪಾಯಿ ವಿಮೆ ಪಡೆಯಲಾಗಿದೆ. ಸಾರ್ವಜನಿಕ ಸುರಕ್ಷತೆಗಾಗಿ, ಪೆಂಡಾಲ್ ಮತ್ತು ಭಕ್ತರನ್ನು ರಕ್ಷಿಸಲು, 30 ಕೋಟಿ ರೂಪಾಯಿಗಳ ವಿಮೆ ಪಡೆಯಲಾಗಿದೆ. ಸ್ವಯಂಸೇವಕರು ಮತ್ತು ಸಿಬ್ಬಂದಿಯ ಯೋಗಕ್ಷೇಮವನ್ನು ಖಾತ್ರಿಪಡಿಸುವ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಗೆ ಬರೋಬ್ಬರಿ 289.50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ," ಎಂದು ಅಮಿತ್ ಪೈ ಹೇಳಿದರು.


Click it and Unblock the Notifications