ನಮ್ಮ ದೇಶದಲ್ಲಿ ಕೃಷಿ ಎಂದಿಗೂ ಕೂಡಾ ದೇಶದ ಆರ್ಥಿಕ ಬೆಳವಣಿಗೆಗೆ ಅತೀ ಹೆಚ್ಚಿನ ಕೊಡುಗೆಯನ್ನು ನೀಡುವ ಕ್ಷೇತ್ರವಾಗಿದೆ. ಈ ಹಿಂದೆ ಹಳ್ಳಿಯಲ್ಲಿರುವ ರೈತರು ಮಾತ್ರ ಕೃಷಿಯನ್ನು ಮಾಡುತ್ತಿದ್ದರು. ಮತ್ತೆ ಹೆಚ್ಚಾಗಿ ಶಿಕ್ಷಣ ಇಲ್ಲದವರು, ಅಧಿಕ ಭೂಮಿ ಇರುವವರು ಕೃಷಿ, ವ್ಯವಸಾಯವನ್ನು ಮಾಡುತ್ತಿದ್ದರು. ಆದರೆ ಕಾಲ ಈಗ ಬದಲಾಗಿದೆ.
ಅಧಿಕ ಪಾವತಿಯನ್ನು ಪಡೆಯುವವರಿಂದ ಹಿಡಿದು ಗೃಹಿಣಿಯರು ಕೂಡಾ ಈಗ ಸಣ್ಣ ಪುಟ್ಟ ವ್ಯವಸಾಯವನ್ನು ಮಾಡುತ್ತಾರೆ. ಆಧುನಿಕ ಕೃಷಿ ವಿಧಾನವನ್ನು ಅಳವಡಿಸಿಕೊಂಡು ತಾವು ಕೂಡಾ ಒಂದು ಲಕ್ ಟ್ರೈ ಮಾಡುವ ಎಂದು ವ್ಯವಸಾಯ ಮಾಡುವ ಅದೆಷ್ಟೋ ಯುವಕರು, ಯುವತಿಯರು ಈಗ ಇದ್ದಾರೆ. ಅಂತಹವರ ಸಾಲಿನಲ್ಲಿ ಈ ಪುಣೆಯ ಮಹಿಳೆಯಿದ್ದಾರೆ.

ಈ ಮಹಿಳೆ ಬಗ್ಗೆ ತಿಳಿಯಿರಿ
ಪುಣೆಯ ಈ ಮಹಿಳೆ ಸ್ವಾತಿ ಕೇಂದ್ರೆ ಸಾಂಪ್ರದಾಯಿಕ ಕೃಷಿಯನ್ನು ಮಾಡುತ್ತಿದ್ದರು. ಆದರೆ ಬಳಿಕ ಆಧುನಿಕ ಕೃಷಿ ವಿಧಾನವನ್ನು ಪಾಲಿಸಿ ಈಗ ಲಕ್ಷಾಂತರ ರೂಪಾಯಿಯನ್ನು ಸಂಪಾದನೆ ಮಾಡುತ್ತಿದ್ದಾರೆ. ಅದು ಕೂಡಾ ಗರ್ಬೆರಾ ಹೂವುಗಳನ್ನು ಬೆಳೆಸಿ ಈ ಸಂಪಾದನೆ ಮಾಡುತ್ತಿದ್ದಾರೆ.
ವರದಿಗಳ ಪ್ರಕಾರ ಈ ಗರ್ಬೆರಾ ಹೂವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಈ ಪುಣೆಯ ಮಹಿಳೆ ಈಗ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಅದು ಕೂಡಾ ಬರೀ 30 ಗುಂಟೆ ಭೂಮಿಯಲ್ಲಿ ಅಂದರೆ ಸರಿಸುಮಾರು 30,000 ಸ್ಕ್ವೇರ್ ಫೀಟ್ ಭೂಮಿಯಲ್ಲಿ ಈ ಕೃಷಿಯನ್ನು ಮಾಡಿದ್ದಾರೆ ಎಂದರೆ ನೀವು ನಂಬುತ್ತೀರಾ?
ಪುಣೆಯ ಭೋರ್ ತಾಲೂಕಿನ ಬಲವಾಡಿ ಗ್ರಾಮದ ಸ್ವಾತಿ ಕೇಂದ್ರೆ ರೈತರಾಗಿದ್ದು, ಪತಿ ಅಮಿತ್ ಜ್ಞಾನೇಶ್ವರ್ ಅವರ ಸಹಾಯದೊಂದಿಗೆ ಜರ್ಬೆರಾ ಹೂವುಗಳನ್ನು ಕೃಷಿ ಮಾಡುತ್ತಿದ್ದಾರೆ. ಅವರ ಪತಿ ಪ್ರಸ್ತುತ ಪುಣೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಗದು ರೂಪದಲ್ಲಿ ಮತ್ತು ಕೃಷಿಗಾಗಿ ಬೇಕಾದ ಪಾಲಿಹೌಸ್‌ಗಳ ನಿರ್ಮಾಣಕ್ಕೆ ಪತಿ ಸಹಾಯ ಮಾಡುತ್ತಾರೆ.
ಇದರೊಂದಿಗೆ ರಾಸಾಯನಿಕ ಗೊಬ್ಬರಗಳು, ಗೊಬ್ಬರ, ಸರಿಯಾದ ಕಳೆ ನಿಯಂತ್ರಣ, ನೀರಿನ ನಿರ್ವಹಣೆ, ಕೀಟನಾಶಕಗಳು ಮತ್ತು ಸಾವಯವ ಬ್ಯಾಕ್ಟೀರಿಯಾದ ಗೊಬ್ಬರಗಳ ಬಳಕೆಯಲ್ಲಿ ಕೂಡಾ ಅಮಿತ್ ಜ್ಞಾನೇಶ್ವರ್ ತನ್ನ ಪತ್ನಿಗೆ ಸಹಾಯ ಮಾಡಿದ್ದಾರೆ. ಜರ್ಬೆರಾ ಹೂವುಗಳಿಗೆ ಯಾವಾಗಲೂ ಬೇಡಿಕೆ ಇರುವುದರಿಂದ ದಂಪತಿಯು ಅದರ ಮಾರಾಟ ಮಾಡುವ ಯೋಚನೆ ಮಾಡಿ ಈ ಕೃಷಿ ಮಾಡಿದ್ದಾರೆ.
ಈ ದಂಪತಿಯು ತಮ್ಮ ಭೂಮಿಯಲ್ಲಿ ಸಾವಿರಾರು ಜರ್ಬೆರಾ ಹೂವುಗಳನ್ನು ಬೆಳೆಸುತ್ತಿದ್ದಾರೆ. ಈ ಬಗ್ಗೆ ನ್ಯೂಸ್18 ಜೊತೆ ಮಾತನಾಡಿದ ಈ ದಂಪತಿ, "18 ಸಾವಿರ ಜರ್ಬೆರಾ ಗಿಡಗಳನ್ನು ನೆಡುವ ಮೊದಲು ಒಂದೂವರೆ ಟನ್ ಭತ್ತದ ಹೊಟ್ಟು ಮತ್ತು 25 ಟ್ರಾಲಿ ಹಸುವಿನ ಸಗಣಿಯನ್ನು ಹೊಲದಲ್ಲಿ ಬೆರೆಸಲಾಗುತ್ತದೆ. ಅದರ ನಂತರ ಕನಿಷ್ಠ ಮೂರರಿಂದ ನಾಲ್ಕು ಬಾರಿ ಹೊಲವನ್ನು ಉಳುಮೆ ಮಾಡಲಾಗುತ್ತದೆ. ನೀರು ಬಿಟ್ಟ ಎರಡು ದಿನಗಳ ನಂತರ ಹಾಸಿಗೆಗಳನ್ನು ಸಿದ್ಧಪಡಿಸಿ 18 ಸಾವಿರ ಭತ್ತ ಮತ್ತು ಶೈನ್ ಜರ್ಬೆರಾ ಸಸಿಗಳನ್ನು ನೆಡಲಾಗುತ್ತದೆ," ಎಂದು ತಿಳಿಸಿದರು.
ಸ್ವಾತಿಗೆ ಈ ಹಿಂದಿನಿಂದಲೂ ಕೃಷಿಯಲ್ಲಿ ಆಸಕ್ತಿ ಇತ್ತು. ಉತ್ತಮ ಇಳುವರಿ ಮತ್ತು ಲಾಭಕ್ಕಾಗಿ ಸಾಂಪ್ರದಾಯಿಕ ಕೃಷಿಯ ಬದಲಿಗೆ ಆಧುನಿಕ ಕೃಷಿ ವಿಧಾನಗಳತ್ತ ಕೇಂದ್ರಿಕರಿಸಲು ಸ್ವಾತಿ ನಿರ್ಧರಿಸಿ ಇಷ್ಟೊಂದು ಸಂಪಾದನೆಯನ್ನು ಮಾಡಿಕೊಂಡಿದ್ದಾರೆ. ಹಬ್ಬ ಹರಿದಿನಗಳು, ಮದುವೆ ಸಮಾರಂಭಗಳಲ್ಲಿ ಈ ಹೂವಿಗೆ ಭೇಡಿಕೆ ಅಧಿಕವಾಗಿರುತ್ತದೆ. ಸಾಮಾನ್ಯವಾಗಿಯೇ ಸಮಾರಂಭಗಳಲ್ಲಿ ಅಲಂಕಾರ ಮಾಡಲು ಈ ಹೂವುಗಳನ್ನು ಬಳಸಲಾಗುತ್ತದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸ್ವಾತಿ ಕೇಂದ್ರೆ, "ಈ ಬೆಳೆ ವರ್ಷವಿಡೀ ಉತ್ಪಾದನೆಯಾಗುತ್ತದೆ. ಆದ್ದರಿಂದಾಗಿ ಆದಾಯವು ಉತ್ತಮವಾಗಿ ಬರುತ್ತದೆ. ಪುಣೆಯ ಮಾರುಕಟ್ಟೆಗೆ ಪ್ರತಿ ದಿನ 300 ಗೊಂಚಲು ಹೂವುಗಳನ್ನು ಕಳುಹಿಸುತ್ತೇನೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ 20 ರಿಂದ 90 ರೂಪಾಯಿವರೆಗೆ ಹಣಕ್ಕೆ ಮಾರಾಟ ಮಾಡಲಾಗುತ್ತದೆ," ಎಂದು ತಿಳಿಸಿದ್ದಾರೆ.


Click it and Unblock the Notifications