ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ! ಕರಗಿತು ಹೂಡಿಕೆದಾರರ ಲಾಭದ ಕನಸು. ಹೌದು, ನಿನ್ನೆ ಶೇಕಡಾ ಅರ್ಧದಷ್ಟು ಲಾಭವನ್ನು ಗಳಿಸಿದ ಬಳಿಕ, ಇಂದು ಭಾರತೀಯ ಷೇರು ಮಾರುಕಟ್ಟೆ ತನ್ನ ಕುಸಿತದ ಹಾದಿಯನ್ನು ಮತ್ತೆ ಆರಂಭಿಸಿತು. ಇಂದಿನ (ಮೇ 22, ಗುರುವಾರ) ವಹಿವಾಟಿನಲ್ಲಿ ಸೆನ್ಸೆಕ್ಸ್ 800ಕ್ಕೂ ಹೆಚ್ಚು ಅಂಕಗಳಿಗೆ ಕುಸಿದಿದೆ. ಮತ್ತೊಂದೆಡೆ ನಿಫ್ಟಿ 50 24,550 ಕ್ಕಿಂತ ಕೆಳಕ್ಕೆ ಇಳಿದಿದೆ. ದಿಢೀರ್ ಕುಸಿತಕ್ಕೆ ಕಾರಣ ಏನು? ಹೂಡಿಕೆದಾರರಿಗೆ ಎಷ್ಟು ನಷ್ಟ? ಎಂಬಿತ್ಯಾದಿ ವಿವರ ಇಲ್ಲಿದೆ ನೋಡಿ.
ಭಾರತೀಯ ಷೇರು ಮಾರುಕಟ್ಟೆಇಂದು ಜಾಗತಿಕ ದುರ್ಬಲ ಸೂಚನೆಯಿಂದಾಗಿ ಕುಸಿತದ ಹಾದಿಯ ಕಡೆ ಹೋಗಿದೆ. ಪೇರುಪೇಟೆಯ ವಹಿವಾಟಿನ ಅವಧಿಯಲ್ಲಿ ಸೆನ್ಸೆಕ್ಸ್ 800 ಕ್ಕೂ ಹೆಚ್ಚು ಅಂಕಗಳಿಗೆ ಕುಸಿದರೆ, ನಿಫ್ಟಿ 50 24,550 ಕ್ಕಿಂತ ಕೆಳಕ್ಕೆ ಇಳಿಯಿತು.

ಬೆಳಿಗ್ಗೆ 10:15 ರ ಸುಮಾರಿಗೆ ಸೆನ್ಸೆಕ್ಸ್ 627 ಪಾಯಿಂಟ್‌ಗಳು ಅಥವಾ ಶೇಕಡಾ 0.77 ರಷ್ಟು ಕುಸಿದು 80,970 ಕ್ಕೆ ತಲುಪಿತು, ಆದರೆ ನಿಫ್ಟಿ 50 206 ಪಾಯಿಂಟ್‌ಗಳು ಅಥವಾ ಶೇಕಡಾ 0.83 ರಷ್ಟು ಕುಸಿದು 24,608 ಕ್ಕೆ ತಲುಪಿತು. ಮಿಡ್ ಮತ್ತು ಸ್ಮಾಲ್-ಕ್ಯಾಪ್ ವಿಭಾಗಗಳು ಮಿಶ್ರವಾಗಿದ್ದವು. ಆ ಸಮಯದಲ್ಲಿ ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.15 ರಷ್ಟು ಕುಸಿದಿದ್ದರೆ, ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.27 ರಷ್ಟು ಏರಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಬಂಡವಾಳ ಮಾರುಕಟ್ಟೆಗಳು ತೀವ್ರ ಕುಸಿತದ ಕಡೆಗೆ ಸಾಗಿದೆ. ಭಾರತ ಮತ್ತು ಅಮೆರಿಕದ ಪ್ರಮುಖ ಸೂಚ್ಯಂಕಗಳು ಇಂದು ಷೇರುಗಳು ನಷ್ಟವನ್ನು ಅನುಭವಿಸಿದ್ದವೆ.ಇದು ವ್ಯಾಪಾರದಲ್ಲಿ ಬಂಡವಾಳದ ಭೀತಿಯನ್ನು ಪ್ರತಿಬಿಂಬಿಸುತ್ತದೆ.
ಭಾರತ ಮಾರುಕಟ್ಟೆಗಳಲ್ಲಿ ಕುಸಿತ
ಜಪಾನ್‌ನ ನಿಕ್ಕಿ ಸೂಚ್ಯಂಕ 332 ಅಂಕಗಳಷ್ಟು (0.89%) ಕುಸಿತ ಕಂಡು 36,967 ಮಟ್ಟಕ್ಕೆ ತಲುಪಿತು.
ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕ 35 ಅಂಕಗಳು (1.34%) ಕುಸಿತ ಹೊಂದಿ 2,590 ಕ್ಕೆ ಇಳಿಯಿತು.
ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ 78 ಅಂಕಗಳು (0.33%) ಕುಸಿದು 23,750 ಮಟ್ಟಕ್ಕೆ ತಲುಪಿದೆ.
ಚೀನಾದ ಶಾಂಘೈ ಕಾಂಪೋಸಿಟ್ ಸೂಚ್ಯಂಕ ಸ್ವಲ್ಪ ಪ್ರಮಾಣದಲ್ಲಿ ಇಳಿದು 3,386 ಮಟ್ಟಕ್ಕೆ ತಲುಪಿದೆ.
ಅಮೆರಿಕದ ಮಾರುಕಟ್ಟೆಗಳಲ್ಲಿ ಭಾರೀ ಕುಸಿತ
ಡೌ ಜೋನ್ಸ್ ಇಂಡಸ್ಟ್ರಿಯಲ್ ಅ್ಯಾವರೆಜ್ ಷೇರುಗಳು 816 ಅಂಕಗಳು (1.91%) ಕುಸಿದು 41,860 ಮಟ್ಟಕ್ಕೆ ತಲುಪಿದೆ.
ನಾಸ್ಡಾಕ್ ಕಾಂಪೋಸಿಟ್ 270 ಅಂಕಗಳು (1.41%) ಕುಸಿದು 18,873 ಕ್ಕೆ ಇಳಿದಿದೆ.
ಹೂಡಿಕೆದಾರರಲ್ಲಿ ಆತಂಕ
ಈ ಭಾರೀ ಕುಸಿತವು ಹೂಡಿಕೆದಾರರಲ್ಲಿ ಆತಂಕವನ್ನುಂಟುಮಾಡಿದೆ. ಬಡ್ಡಿದರ ಹೆಚ್ಚಳದ ಅಂದಾಜುಗಳು, ಬೃಹತ್ ತಂತ್ರಜ್ಞಾನ ಕಂಪನಿಗಳ ವರಮಾನ ನಿರೀಕ್ಷೆಗಳಿಗೆ ಹೊಡೆತ ಹಾಗೂ ಜಾಗತಿಕ ಅಸ್ಥಿರತೆಯ ಪರಿಣಾಮಗಳಿಂದಾಗಿ ಮಾರುಕಟ್ಟೆಗಳು ತೀವ್ರ ಕುಸಿತ ಅನುಭವಿಸುತ್ತಿವೆ.
ಷೇರು ಮಾರುಕಟ್ಟೆಯ ಮುಂದಿನ ಬದಲಾವಣೆಗಳು ಕೇಂದ್ರ ಬ್ಯಾಂಕ್‌ಗಳ ನೀತಿಗಳು ಹಾಗೂ ಬಂಡವಾಳ ಹೂಡಿಕೆದಾರರ ಮನೋಭಾವದಿಂದ ನಿರ್ಧಾರವಾಗುವ ನಿರೀಕ್ಷೆಯಿದೆ.
ವಿದೇಶಿ ಹೂಡಿಕೆದಾರರ ಬಂಡವಾಳ
ಜಾಗತಿಕ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಇದ್ದರೂ ಕೂಡ, ಮೇ 21 ರಂದು ವಿದೇಶಿ ಹೂಡಿಕೆದಾರರು (FIIಗಳು) ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದಾರೆ. ದಿನದ ವಹಿವಾಟಿನಲ್ಲಿ ಅವರು 2,201.79 ಕೋಟಿ ರೂ. ಮೌಲ್ಯದ ನಿವ್ವಳ ಷೇರುಗಳನ್ನು ಖರೀದಿ ಮಾಡಿದ್ದಾರೆ. ಈ ಮೂಲಕ ನಗದು ವಿಭಾಗದಲ್ಲಿ ಹೂಡಿಕೆಗೆ ಆಕರ್ಷಣೆಯಿರುವ ಸೂಚನೆ ಕಂಡುಬರುತ್ತದೆ.
ಇಂದಿನ ಷೇರು ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳು
ಅಮೆರಿಕದ ಮಾರುಕಟ್ಟೆಗಳಲ್ಲಿ ಭಾರಿ ಕುಸಿತ
ಮೇ 21 ರಂದು ಡೌ ಜೋನ್ಸ್, ನಾಸ್ಡಾಕ್ ಹಾಗೂ ಎಸ್ & ಪಿ 500 ಎಲ್ಲಾ ಪ್ರಮುಖ ಅಮೆರಿಕನ್ ಸೂಚ್ಯಂಕಗಳು ತೀವ್ರ ಕುಸಿತ ಕಂಡವು. ಇದರಿಂದ ಜಾಗತಿಕ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಯಾಗಿ, ಭಾರತೀಯ ಮಾರುಕಟ್ಟೆಯ ಮೇಲೂ ಪರಿಣಾಮವನ್ನು ಬೀರಿದೆ.
ಬಡ್ಡಿದರ ಹೆಚ್ಚಳ ಭೀತಿ ಪ್ರಭಾವ
ಅಮೆರಿಕದ ಫೆಡರಲ್ ರಿಸರ್ವ್ ಇನ್ನೂ ಬಡ್ಡಿದರ ಕಡಿತ ಮಾಡಲು ತಾತ್ಸಾರವಿದೆ ಎಂಬ ಸೂಚನೆ ಹೂಡಿಕೆದಾರರ ಮನೋಭಾವದ ಮೇಲೆ ಹೊಡೆತ ನೀಡಿದೆ. ಇದರಿಂದ ಹೂಡಿಕೆದಾರರು ಲಾಭ ವಸೂಲಿಗೆ ಮುಂದಾಗಿದ್ದಾರೆ.
ಭಾರತ ಮಾರುಕಟ್ಟೆಗಳಲ್ಲಿ ಕುಸಿತ
ಜಪಾನ್, ಕೊರಿಯಾ, ಹಾಂಗ್ ಕಾಂಗ್ ಮತ್ತು ಚೀನಾದ ಪ್ರಮುಖ ಮಾರುಕಟ್ಟೆಗಳಲ್ಲಿ ಕೂಡ ಕುಸಿತ ಕಂಡುಬಂದಿದ್ದು, ಭಾರತೀಯ ಷೇರು ಮಾರುಕಟ್ಟೆಯಲ್ಲೂ ಕುಸಿತ ಕಂಡಿದೆ.
ಆದಾಯ ನಿರೀಕ್ಷೆಗಳಲ್ಲಿನ ನಿರಾಶೆ
ಕೆಲವು ಪ್ರಮುಖ ಭಾರತೀಯ ಕಂಪನಿಗಳ ತ್ರೈಮಾಸಿಕ ಆದಾಯ ವರದಿಗಳು ನಿರೀಕ್ಷೆಗಿಂತ ಕಡಿಮೆಯಾಗಿ ಬಂದಿದ್ದು, ಹೂಡಿಕೆದಾರರಲ್ಲಿ ಆತಂಕ ತಂದಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯಾಗುತ್ತಿರುವುದು ಕೂಡ ವಿದೇಶಿ ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ.


Click it and Unblock the Notifications