ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಇಳಿಕೆಯಲ್ಲಿ ಕೊನೆಯಗೊಂಡ ಷೇರುಪೇಟೆ ಮಂಗಳವಾಗಿ ಏರಿಕೆಯ ಕಡೆಗೆ ಮುಖಮಾಡಿತ್ತು. ಹೀಗಿರುವಾಗ ಬುಧವಾರ ( ಜುಲೈ 02) ರಂದು) ಮಾರಕಟ್ಟೆ ತರೆಯುವ ಮುನ್ನ ಹೂಡಿದಾದರು ಇಂದು ಸುದ್ದಿಯಲ್ಲಿರುವ ಯಾವ ಷೇರುಗಳನ್ನು ಖರೀದಿಸಬಹುದು..? ಹೂಡಿಕೆದಾರಿಗೆ ಯಾವ ಷೇರು ಇಂದು ಲಾಭದಾಯಕವಾಗಬಹುದು ಎಂಬ ಹೆಚ್ಚಿನ ವಿವರ ಇಲ್ಲಿದೆ.
ಹೌದು, ಷೇರುಪೇಟೆಯಲ್ಲಿ ನಿನ್ನೆ(ಮಂಗಳವಾರ) ನಿಫ್ಟಿ ಸೂಚ್ಯಂಕ ಸಣ್ಣ ಹಿನ್ನಡೆಯ ನಂತರ ಚೇತರಿಕೆ ಕಂಡಿದೆ. ಹಿಂದಿನ ವಹಿವಾಟನ್ನು ಶೇ. 0.10 ರಷ್ಟು ಏರಿಕೆಯೊಂದಿಗೆ 25,541.80 ಕ್ಕೆ ಮುಕ್ತಾಯಗೊಂಡಿತ್ತು. ನಿಫ್ಟಿ ಬ್ಯಾಂಕ್ ಶೇ. 0.26 ರಷ್ಟು ಏರಿಕೆ ಕಂಡು 57,459.45 ಕ್ಕೆ ತಲುಪಿದೆ. ಇಂಡಿಯಾ VIX ಶೇ 2.01ರಷ್ಟು ಕುಸಿದು 12.52 ಕ್ಕೆ ತಲುಪಿದೆ. ಇದು ಷೇರು ಮಾರುಕಟ್ಟೆಯ ವಿಶ್ವಾಸವನ್ನ ಹೂಡಿಕೆದಾರಿಕೆ ಹೆಚ್ಚಿಸಲು ಕಾರಣವಾಗಿದೆ.

ಇಂದು ಖರೀದಿಸಬೇಕಾದ ಷೇರುಗಳು
ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಅವರು ನಿಫ್ಟಿಯ ಅಂತಿಮ ಅಂಕ 25550ರ ಆಸುಪಾಸಿನಲ್ಲಿರುವುದರಿಂದ ಇಂದು ಎರಡು ಷೇರುಗಳನ್ನು ಖರೀದಿಸಲು ಶಿಫಾರಸು ಮಾಡಿದ್ದಾರೆ. ಅವುಗಳೆಂದರೆ, ಅಂಬರ್ ಎಂಟರ್‌ಪ್ರೈಸಸ್ ಇಂಡಿಯಾ, ಟೆಕ್ನೋಕ್ರಾಫ್ಟ್ ಇಂಡಸ್ಟ್ರೀಸ್ (ಭಾರತ) ಷೇರುಗಳು ಇವುಗಳು ಇಂದು ನಿಮ್ಮಗೆ ಲಾಭವನ್ನು ತಂದುಕೊಂಡಬಹುದು ಎಮದು ಅಭಿಪ್ರಾಯವನ್ನು ತಿಳಿಸಿದ್ದಾರೆ.
ಟೆಕ್ನೋಕ್ರಾಫ್ಟ್ ಇಂಡಸ್ಟ್ರೀಸ್ ಷೇರು
ಟೆಕ್ನೋಕ್ರಾಫ್ಟ್ ಇಂಡಸ್ಟ್ರೀಸ್ (ಭಾರತ) TIIL ನೀವು ನಗದು ರೂಪದಲ್ಲಿ ಖರೀದಿಸಿ ಎಂದು ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಶಿಫಾರಸು ಮಾಡಿದ್ದಾರೆ. ನೀವು ಇಂದು ಟೆಕ್ನೋಕ್ರಾಫ್ಟ್ ಇಂಡಸ್ಟ್ರೀಸ್ ಷೇರುನ್ನು 3199.9 ರೂ ಸ್ಟಾಪ್-ಲಾಸ್ 3080 ರೂ ಟಾರ್ಗೆಟ್ 3410 ಪ್ರಸ್ತುತ 3199.9 ಮಟ್ಟದಲ್ಲಿ ಇದೆ. ಮಂಗಳವಾರ ತೀವ್ರ ಏರಿಕೆ ಕಂಡಿತು.ಬೆಲೆ ಕ್ರಮವು ಅಲ್ಪಾವಧಿಯ ಏಕೀಕರಣ ವಲಯಕ್ಕಿಂತ ಮೇಲಿರುವ ನಿರ್ಣಾಯಕ ಬ್ರೇಕ್‌ಔಟ್ ಅನ್ನು ಸೂಚಿಸುತ್ತದೆ. ಇಂದು ಕೂಡ ಈ ಷೇರುಗಳನ್ನು ಖರೀದಿಸಬಹುದು.
ಅಂಬರ್ ಎಂಟರ್‌ಪ್ರೈಸಸ್ ಇಂಡಿಯಾ
ಅಂಬರ್ ಎಂಟರ್‌ಪ್ರೈಸಸ್ ಷೇರುನ್ನು ಖರೀದಿ ಮಾಡಲು ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಶಿಫಾರಸು ಮಾಡಿದ್ದಾರೆ. ಇತ್ತೀಚಿಗೆ ಅಂಬರ್ ಎಂಟರ್‌ಪ್ರೈಸಸ್ ಇಂಡಿಯಾ ಷೇರು ಏರಿಕೆಯಾಗಿರುವುದರಿಂದ ಅಂಬರ್ ಎಂಟರ್‌ಪ್ರೈಸಸ್ ಇಂಡಿಯಾ ಷೇರುಗಳ ಮೇಲೆ ಇಂದು ಹೂಡಿಕೆ ಮಾಡಬಹುದು ಎಂದು ಹೇಳಿದ್ದಾರೆ.
ಷೇರುಪೇಟೆಯಲ್ಲಿ ಗಮನಿಸಬಹುದಾದ ಷೇರುಗಳಗಳ ವಿವರ
ಹೀರೋ ಮೋಟೋಕಾರ್ಪ್
ದೆಹಲಿ ಮೂಲದ ಹೀರೋ ಮೋಟೋಕಾರ್ಪ್ ಜಾಗತಿಕ ಭಾರತೀಯ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಉತ್ಪಾದನಾ ವಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಜೂನ್‌ನಲ್ಲಿ ಹೀರೋ ಮೋಟೋಕಾರ್ಪ್‌ನ ಒಟ್ಟು ಮಾರಾಟವು ಶೇ 10 ರಷ್ಟು ಏರಿಕೆಯಾಗಿ 5,53,963 ಯುನಿಟ್‌ಗಳಿಗೆ ತಲುಪಿದೆ. ಆದಾಗ್ಯೂ, ನಿನ್ನೆ ಮಾರುಕಟ್ಟೆಯಲ್ಲಿ ಸ್ವಲ್ಪ ಕುಸಿತದೊಂದಿಗೆ ಸ್ಟಾಕ್ ಮುಕ್ತಾಯವಾಯಿತು, ಆದರೆ ಇಂದು ಹೆಚ್ಚಿನ ಗಮನ ಸೆಳೆಯಲಿದೆ.
ಜೆಎಂ ಫೈನಾನ್ಷಿಯಲ್
ಜೆಎಂ ಫೈನಾನ್ಷಿಯಲ್ ತನ್ನ ಅಂಗಸಂಸ್ಥೆ ಜೆಎಂ ಫೈನಾನ್ಷಿಯಲ್ ಕ್ರೆಡಿಟ್ ಸೊಲ್ಯೂಷನ್ಸ್ ಲಿಮಿಟೆಡ್ (ಜೆಎಂಎಫ್‌ಸಿಎಸ್‌ಎಲ್) ನಲ್ಲಿ ಉಳಿದ ಶೇಕಡಾ 2.98 ರಷ್ಟು ಪಾಲನ್ನು ಮೊರೈನ್ ಮಾಸ್ಟರ್ ಫಂಡ್‌ನಿಂದ ಪಡೆದುಕೊಂಡಿದೆ. ಈ ಹೆಚ್ಚುವರಿ ಪಾಲನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ, ಜೆಎಂ ಫೈನಾನ್ಷಿಯಲ್ ಕ್ರೆಡಿಟ್ ಸೊಲ್ಯೂಷನ್ಸ್ ಲಿಮಿಟೆಡ್ ಈಗ ಸಂಪೂರ್ಣವಾಗಿ ಜೆಎಂ ಫೈನಾನ್ಷಿಯಲ್ ಒಡೆತನದಲ್ಲಿದೆ. ಜೆಎಂ ಫೈನಾನ್ಷಿಯಲ್ ಷೇರುಗಳು ನಿನ್ನೆ ಮಾರುಕಟ್ಟೆಯಲ್ಲಿ ಕುಸಿದವು. ಪ್ರಸ್ತುತ ಷೇರಿನ ಬೆಲೆ 158.40 ರೂ.
ಟಾಟಾ ಸ್ಟೀಲ್
ಯುಕೆಯ ಪೋರ್ಟ್ ಟಾಲ್ಬೋಟ್‌ನಲ್ಲಿ ಎರಡು ಕ್ಯಾಸ್ಟರ್‌ಗಳ ನವೀಕರಣದ ಮೊದಲ ಹಂತಕ್ಕಾಗಿ ಟಾಟಾ ಸ್ಟೀಲ್ ವೆಲ್ಷ್ ಎಂಜಿನಿಯರಿಂಗ್ ಸಂಸ್ಥೆ ಸಿಸ್ಟಮ್ಸ್ ಗ್ರೂಪ್‌ಗೆ ಒಪ್ಪಂದವನ್ನು ನೀಡಿದೆ. ಇದು ಇಂದು ಮಾರುಕಟ್ಟೆಯಲ್ಲಿ ಟಾಟಾ ಸ್ಟೀಲ್ ಷೇರುಗಳ ಮೇಲೆ ಹೆಚ್ಚಿನ ಗಮನ ಹರಿಸಲಿದೆ. ಈ ಘೋಷಣೆಯೊಂದಿಗೆ, ಷೇರುಗಳು ನಿನ್ನೆ 159.80 ರೂ.ಗಳಲ್ಲಿ ಮುಕ್ತಾಯಗೊಂಡವು.
ಏಷ್ಯನ್ ಪೇಂಟ್ಸ್
ಬಣ್ಣಗಳ ತಯಾರಿಕೆ ಮತ್ತು ಮಾರಾಟದಲ್ಲಿ ಏಷ್ಯನ್ ಪೇಂಟ್ಸ್ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪದ ಕುರಿತು ಭಾರತೀಯ ಸ್ಪರ್ಧಾ ಆಯೋಗ (CCI) ವಿಶೇಷ ತನಿಖೆಗೆ ಆದೇಶಿಸಿದೆ. ಇದು ಷೇರುಗಳ ಮೇಲಿನ ಹೂಡಿಕೆದಾರರ ಗಮನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿನ್ನೆ ಧನಾತ್ಮಕ ಲಾಭದೊಂದಿಗೆ ಷೇರು 2,370.10 ರೂ.ಗಳಲ್ಲಿ ಮುಕ್ತಾಯವಾಯಿತು.
ಕೋಲ್ ಇಂಡಿಯಾ ಷೇರುಗಳು
ನಿರ್ಣಾಯಕ ಖನಿಜ ವಲಯದಲ್ಲಿ ಒಟ್ಟಾಗಿ ಕೆಲಸ ಮಾಡಲು ಕೋಲ್ ಇಂಡಿಯಾ ಹಿಂದೂಸ್ತಾನ್ ಕಾಪರ್ ಜೊತೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಉತ್ತಮ ಆರಂಭವಾಗಲಿದೆ. ಆದ್ದರಿಂದ, ಕೋಲ್ ಇಂಡಿಯಾ ಷೇರುಗಳು ಇಂದು ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭವನ್ನು ನೀಡಲಿವೆ.
ಐಎಚ್‌ಸಿಎಲ್
ನಿನ್ನೆ ಈ ಷೇರುಗಳು 760.60 ರೂ.ಗಳ ಧನಾತ್ಮಕ ಲಾಭದಲ್ಲಿ ಮುಕ್ತಾಯಗೊಂಡವು. ಇದು ಇಂದಿನ ಮಾರುಕಟ್ಟೆಯಲ್ಲೂ ಹೆಚ್ಚಿನ ಗಮನ ಸೆಳೆಯಲಿದೆ.


Click it and Unblock the Notifications