ಇಂದು ಷೇರುಮಾರುಕಟ್ಟೆಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಕಂಪನಿಗಳಿಗೆ ಸಂಬಂಧಿಸಿದಂತೆ ಕೆಲವು ಮಹತ್ವದ ಮಾಹಿತಿಗಳು ಹೊರಬೀಳಲಿವೆ. ಇಂದು ಟಾಟಾ ಸ್ಟೀಲ್‌ನ ತೆರಿಗೆಗೆ ಸಂಬಂಧಿಸಿದ ಸೂಚನೆ, ರಿಲಯನ್ಸ್ ಪವರ್‌ನ ವಿದೇಶಿ ಯೋಜನೆಗಳು, ಮಜಗಾಂವ್ ಡಾಕ್‌ನ ಜಾಗತಿಕ ವಿಸ್ತರಣೆ, ಮಹೀಂದ್ರಾ ಹಾಲಿಡೇಸ್‌ಗೆ ತೆರಿಗೆ ಬೇಡಿಕೆ, ಬಿಎಚ್‌ಇಎಲ್‌ನ ಹೊಸ ಆದೇಶ, ಎನ್‌ಟಿಪಿಸಿ ಗ್ರೀನ್ ಎನರ್ಜಿಯ ಯೋಜನೆಗಳ ಸ್ಥಾಪನೆ, ಎನ್‌ಎಲ್‌ಸಿ ಇಂಡಿಯಾದಿಂದ ಹೊಸ ಯೋಜನೆಗೆ ಒಪ್ಪಂದ, ವಾರೀ ಎನರ್ಜಿಸ್‌ನ ಮಾಡ್ಯೂಲ್ ಪೂರೈಕೆ, ಪ್ರೆಸ್ಟೀಜ್ ಎಸ್ಟೇಟ್‌ನ ವಸತಿ ಯೋಜನೆ, ಐಟಿಡಿ ಸಿಮೆಂಟೇಶನ್ ಇಂಡಿಯಾದ ಅಬುಧಾಬಿ ಯೋಜನೆ, ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಲಾಭಾಂಶ ಘೋಷಣೆ, ಅಹ್ಲುವಾಲಿಯಾ ಕಾಂಟ್ರಾಕ್ಟ್ಸ್‌ನ ಹೊಸ ಯೋಜನೆಗಳು ಮತ್ತು ಪಿರಾಮಲ್ ಎಂಟರ್‌ಪ್ರೈಸಸ್‌ನ ಹೂಡಿಕೆಗಳು ಸೇರಿದಂತೆ ಹಲವು ಪ್ರಮುಖ ಬೆಳವಣಿಗೆಗಳು ನಡೆಯಲಿದ್ದು, ನೀವು ಷೇರು ಹೂಡಿಕೆದಾರರ ಗಮನವನ್ನು ಹೇಗೆ ಸೆಳೆಯುತ್ತಾವೆ ಎಂಬ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ..

ಷೇರು ಹೂಡಿಕೆದಾದರು ಇಂದು ಗಮನಿಸಬೇಕಾಗದ ಪ್ರಮುಖ ಅಂಶಗಳು
ಟಾಟಾ ಸ್ಟೀಲ್: ಟಾಟಾ ಸ್ಟೀಲ್ ಕಂಪನಿಯು 1,000 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಇನ್‌ಪುಟ್ ತೆರಿಗೆ ಕ್ರೆಡಿಟ್ ಅನ್ನು ತಪ್ಪಾಗಿ ಪಡೆದ ಆರೋಪದ ಮೇಲೆ ತೆರಿಗೆ ಅಧಿಕಾರಿಗಳಿಂದ ಶೋಕಾಸ್-ಕಮ್-ಡಿಮಾಂಡ್ ನೋಟಿಸ್ ಅನ್ನು ನೀಡಿದೆ. ಇದು 2019 ರಿಂದ 2023ರ ಹಣಕಾಸು ವರ್ಷದವರೆಗಿನ ಜಿಎಸ್‌ಟಿ ನೋಟಿಸ್ ಆಗಿದೆ. ಕಂಪನಿಯು 30 ದಿನಗಳಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಹೇಳಲಾಗಿದೆ. ಆದರೆ ಈ ಬಗ್ಗೆ ಟಾಟಾ ಸ್ಟೀಲ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಇದು ಸಹ ಹೂಡಿದಾರರ ಮೇಲೆ ಪ್ರಭಾವನ್ನು ಬೀರಬಹುದು.
ರಿಲಯನ್ಸ್ ಪವರ್: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಪವರ್ ವಿದೇಶಗಳಲ್ಲ 1,500 ಮೆಗಾವ್ಯಾಟ್ ಅನಿಲ ಆಧಾರಿತ ವಿದ್ಯುತ್ ಯೋಜನೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಕುವೈತ್, ಯುಎಇ ಮತ್ತು ಮಲೇಷ್ಯಾ ಸೇರಿದಂತೆ ಜಾಗತಿಕ ಟೆಂಡರ್‌ಗಳಲ್ಲಿ ಬಿಡ್ಡಿಂಗ್ ಮಾಡಲು ಕಂಪೆನಿ ಹೆಚ್ಚಿನ ಆಕ್ತಿಯನ್ನು ತೋರುತ್ತದೆ. ರಿಲಯನ್ಸ್ ಪವರ್ ಇತ್ತೀಚೆಗಷ್ಟೇ ಭೂತಾನ್‌ನಲ್ಲಿ ಎರಡು ಪ್ರಮುಖ ವಿದ್ಯುತ್ ಯೋಜನೆಯನ್ನು ಆರಂಭ ಮಾಡಿದೆ. ಇದು ಮುಂಬರುವಂತಹ ದಿನಗಳಲ್ಲಿ
ಜಾಗತಿಕ ಯೋಜನೆಗಳಿಗಾಗಿ ಎರಡು 750-ಮೆಗಾವ್ಯಾಟ್ ಮಾಡ್ಯೂಲ್‌ಗಳನ್ನು ಸ್ಥಳಾಂತರಿಸಲು ಕಂಪೆನಿಯು ಪ್ಲಾನ್ ಮಾಡಿಕೊಂಡಿದೆ. ಇದು ಇಂದು ಷೇರುದಾರ ಗಮನವನ್ನು ಸಳೇಯುವಂತಹ ಸಾಧ್ಯತರಗಳು ಇರಬಹುದು.
ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್: ಸರ್ಕಾರಿ ಸ್ವಾಮ್ಯದ ರಕ್ಷಣಾ ಹಡಗು ನಿರ್ಮಾಣ ಸಂಸ್ಥೆಯಾದ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್, ಶ್ರೀಲಂಕಾದ ಕೊಲಂಬೊ ಡಾಕ್‌ಯಾರ್ಡ್ ಪಿಎಲ್‌ಸಿಯಲ್ಲಿ ನಿಯಂತ್ರಣ ಪಾಲನ್ನು 52.96 ಮಿಲಿಯನ್ ಡಾಲರ್‌ಗಳಿಗೆ ಅಂದರೆ ಸುಮಾರು 452 ಕೋಟಿ ರೂಪಾಯಿಗಳಿಗೆ ಸ್ವಾಧೀನಪಡಿಸಿಕೊಳ್ಳಲು ಅನುಮೋದನೆಯನ್ನು ಈ ಕಂಪನಿ ನೀಡಿದೆ. ಇದು ಜಪಾನ್‌ನ ಒನೊಮಿಚಿ ಡಾಕ್‌ಯಾರ್ಡ್ ಕಂಪನಿಯಿಂದ ಈ ಪಾಲನ್ನು ಖರೀದಿಯನ್ನು ಮಾಡಲಲಾಗುತ್ತದೆ. ಈ ಒಪ್ಪಂದವು ಕಡಲ ಮೂಲಸೌಕರ್ಯ ಕ್ಷೇತ್ರದಲ್ಲಿ ಮಜಗಾಂವ್ ಡಾಕ್‌ನ ಜಾಗತಿಕ ಮಟ್ಟದಲ್ಲಿ ಮೊದಲ ಪ್ರಮುಖ ವಿಸ್ತರಣೆಯಾಗಿದೆ. ಈ ಷೇರುಗಳು ಹೂಡಿದಾರ ನ್ನು ತನ್ನ ಕಡೆ ಸಳೇಯಬಹುದು.
ಮಹೀಂದ್ರಾ ಹಾಲಿಡೇಸ್ & ರೆಸಾರ್ಟ್ಸ್: 363 ಕೋಟಿ ರೂ.ಗಳಿಗೂ ಹೆಚ್ಚಿನ ತೆರಿಗೆ ಬೇಡಿಕೆ, ಹಾಗೂ ಕ್ಲಬ್ ಸದಸ್ಯತ್ವ ಸೇವೆಗಳ ಮೇಲಿನ ಜಿಎಸ್‌ಟಿಗೆ ಸಂಬಂಧಿಸಿದಂತೆ ದಂಡವನ್ನೂ ಒಳಗೊಂಡಂತೆ ಹೆಚ್ಚಿನ ತೆರಿಗೆ ಬೇಡಿಕೆ ನೋಟಿಸ್ ಅನ್ನು ಮಹೀಂದ್ರಾ ಹಾಲಿಡೇಸ್ & ರೆಸಾರ್ಟ್ಸ್ ಕಂಪನಿ ತಗೆದುಕೊಂಡಿದೆ.ಈ ಕುರಿತು ಮಹೀಂದ್ರಾ ಹಾಲಿಡೇಸ್ ಈ ನೋಟಿಸ್ ಅನ್ನು ಕಾನೂನುಬದ್ಧವಾಗಿ ಪ್ರಶ್ನಿಸಲು ಸಿದ್ಧತೆಯನ್ನು ಸಹ ಮಾಡಿಕೊಂಡಿದೆ. ಈ ಹಿಂದೆಯೂ ಮಹೀಂದ್ರಾ ಹಾಲಿಡೇಸ್ & ರೆಸಾರ್ಟ್ಸ್ ಕಂಪನಿಗೆ ಇಂತಹ ಹಲವಾರರು ಪ್ರಕರಣಗಳು ದಾಖಲೆಯಾಗಿದ್ದವು. ಇದು ಸಹ ಷೇದಾರರ ಮೇಲೆ ಪ್ರಾಭಾವನ್ನು ಬೀರುವಂತಹ ಸಾಧ್ಯತೆ ಇದೆ.
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್): ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ಆರು ಉಷ್ಣ ವಿದ್ಯುತ್ ಘಟಕಗಳ ನಿರ್ಮಾಣದ ಮೇಲ್ವಿಚಾರಣೆಗಾಗಿ ಪ್ರಮುಖ ಆದೇಶವನ್ನು ಪಡೆದುಕೊಂಡಿದೆ. ಜೂನ್ 27 ರಂದು ಈ ಆದೇಶವನ್ನು ಕಾಯ್ದಿರಿಸಲಾಗಿದೆ. ಬಿಎಚ್‌ಇಎಲ್‌ನ ವಿದ್ಯುತ್ ಉಪಕರಣ ವ್ಯವಹಾರಕ್ಕೆ ಇದು ಪ್ರಮುಖ ಉತ್ತೇಜನ ನೀಡಲಿದೆ.ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಷೇರು ಕೂಡ ಹೂಡಿದಾರನ್ನನು ಗಮನ ಸಳೆಯಬಹುದು.
ಎನ್‌ಟಿಪಿಸಿ ಗ್ರೀನ್ ಎನರ್ಜಿ: ನವೀಕರಿಸಬಹುದಾದ ಇಂಧನವಾದ ಎನ್‌ಟಿಪಿಸಿ ಗ್ರೀನ್ ಎನರ್ಜಿಯು ತನ್ನ ಅಂತಿಮ 120 ಮೆಗಾವ್ಯಾಟ್ ವಿಭಾಗವನ್ನು ಸಕ್ರಿಯಗೊಳಿಸಿದ ನಂತರ 220-ಮೆಗಾವ್ಯಾಟ್ ಶಾಜಾಪುರ ಸೌರ ಯೋಜನೆಯನ್ನು (ಘಟಕ-II) ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದೆ.ಭಾರತ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ.
ಎನ್‌ಎಲ್‌ಸಿ ಇಂಡಿಯಾ:ಈ ಯೋಜನೆಯು 25 ವರ್ಷಗಳ ವಿದ್ಯುತ್ ಖರೀದಿ ಒಪ್ಪಂದವನ್ನು ಒಳಗೊಂಡಿರುತ್ತದೆ. ಇದು ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ನೀಡುತ್ತಿರುವ ಉತ್ತೇಜನ ಕ್ರಮವಾಗಿದೆ.ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ 450 ಮೆಗಾವ್ಯಾಟ್ ಪವನ-ಸೌರ ಹೈಬ್ರಿಡ್ ಯೋಜನೆಯನ್ನು ಅಭಿವೃದ್ಧಿಪಡಿಸಲು ಎನ್‌ಎಲ್‌ಸಿ ಇಂಡಿಯಾ ಎನ್‌ಟಿಪಿಸಿಯಿಂದ ಪ್ರಶಸ್ತಿ ಪತ್ರವನ್ನು ಗೆದ್ದಿದೆ.
ವಾರೀ ಎನರ್ಜಿಸ್: ವಾರೀ ಸೋಲಾರ್ ಅಮೆರಿಕ, ವಾರೀ ಎನರ್ಜಿಸ್‌ನ ಯುಎಸ್ ಅಂಗವಾಗಿದೆ. ಯುಎಸ್ ಮೂಲದ ಸೋಲಾರ್ ಮತ್ತು ಸ್ಟೋರೇಜ್ ಪ್ರಾಜೆಕ್ಟ್ ಡೆವಲಪರ್‌ನಿಂದ 540 ಮೆಗಾವ್ಯಾಟ್ ಸೋಲಾರ್ ಮಾಡ್ಯೂಲ್ ಪೂರೈಕೆ ಆದೇಶವನ್ನು ಪಡೆದುಕೊಂಡಿದೆ. ಜೂನ್ 27 ರಂದು ಕಾಯ್ದಿರಿಸಲಾದ ಈ ಆದೇಶವು ವಾರಿಯ ಅಂತರಾಷ್ಟ್ರೀಯ ನವೀಕರಿಸಬಹುದಾದ ಪೋರ್ಟ್‌ಫೋಲಿಯೊವನ್ನು ಹೆಚ್ಚಿನ ಬಲಪಡಿಸುತ್ತಿದೆ ಇದು ಕೂಡ ಹೂಡಿಕೆದಾರರ ಮೇಲೆ ಪ್ರಭಾವನ್ನು ಬೀರುತ್ತದೆ.
ಪ್ರೆಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ಸ್: ಪ್ರೆಸ್ಟೀಜ್ ಗ್ರೂಪ್ ಮತ್ತು ಅರಿಹಂತ್ ಫೌಂಡೇಶನ್ಸ್ ಚೆನ್ನೈನ ವೇಲಾಚೇರಿಯಲ್ಲಿ ವಸತಿ ಯೋಜನೆಗಾಗಿ ಪಾಲುದಾರಿಕೆ ಮಾಡಿಕೊಂಡಿವೆ. ಹೀಗಾಗಿ ಈ ಯೋಜನೆಯ3.48 ಎಕರೆ ವಿಸ್ತೀರ್ಣಯಿಂದಾಗಿ 1,600 ಕೋಟಿ ರೂ.ಗಳಿಗೂ ಹೆಚ್ಚು ಆದಾಯವನ್ನು ನಿರೀಕ್ಷಿಯನ್ನು ಮಾಡಲಾಗಿದೆ.
ITD ಸಿಮೆಂಟೇಶನ್ ಇಂಡಿಯಾ: ಅಬುಧಾಬಿಯಲ್ಲಿ ರುವೈಸ್ ಎಲ್‌ಎನ್‌ಜಿ ಯೋಜನೆಗಾಗಿ ಜೆಟ್ಟಿ ನಿರ್ಮಿಸಲು ಸಂಸ್ಥೆಯು 67.4 ಮಿಲಿಯನ್ ಡಾಲರ್ (ಸುಮಾರು 580 ಕೋಟಿ ರೂ.) ಒಪ್ಪಂದವನ್ನು ಈ ಕಂಪನಿಯು ಪಡೆದುಕೊಂಡಿದೆ. ಈ ಒಪ್ಪಂದ ಅಂತರರಾಷ್ಟ್ರೀಯ ಗೆಲುವನ್ನು ಸೂಚಿಸುತ್ತದೆ ಇದು ಕೂಡ ಹೂಡಿಕೆದಾರನ್ನು ಸಳೆಯಬಹುದು.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL): 2025ರ ಹಣಕಾಸು ವರ್ಷದಲ್ಲಿ ಎಚ್ಎಎಲ್ ಪ್ರತಿ ಷೇರಿಗೆ 15 ರೂ.ರ ಅಂತಿಮ ಲಾಭಾಂಶವನ್ನು ಘೋಷಣೇಯನ್ನು ಮಾಡಿದೆ. ಇದರ ಮುಖಬೆಲೆ ಶೇಕಡಾ 300 ಆಗಿದೆ. ಇದು ಕೂಡ ಷೇರು ಹೂಡಿದಾರ ಸಖೆಯುವಂತಹ ಪ್ರಮುಖ ಷೇರುಗಳಲ್ಲಿ ಒಂದಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಇದು ವಿವಿಧ ಕಂಪನಿಗಳು ಪ್ರಕಟಿಸಿದ ಲಾಭ-ನಷ್ಟದ ಮಾಹಿತಿಯು ಹೂಡಿಕೆದಾರರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವು ಆಗುತ್ತದೆ. ತೆರಿಗೆ, ಹೊಸ ಯೋಜನೆಗಳು, ಜಾಗತಿಕ ವಿಸ್ತರಣೆ, ಮತ್ತು ಹೂಡಿಕೆಗಳಂತಹ ಅಂಶಗಳು ಷೇರು ಮಾರುಕಟ್ಟೆಯ ಮೇಲೆ ಪರಿಣಾಮಗಳು ಷೇರು ಮಾರುಕಟ್ಟೆಯಲ್ಲಿ ಪ್ರಭಾವನ್ನು ಬೀರಬಹುದು.
Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ.
More From GoodReturns

Middle East tensions: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ…ಈ ಹೊತ್ತಲ್ಲಿ ಚಿನ್ನ-ಬೆಳ್ಳಿ ಹೂಡಿಕೆದಾರರು ಏನು ಮಾಡಬೇಕು?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

10 ಲಕ್ಷ ಹೂಡಿಕೆ ಮಾಡಿ ಸುಲಭವಾಗಿ ದೊಡ್ಡ ಲಾಭ ಪಡೆಯಿರಿ! ಅದು ಹೇಗೆಂದು ತಿಳಿಯಿರಿ

SEBI: ಹೂಡಿಕೆದಾರರ ಸುರಕ್ಷತೆಗೆ ಸೆಬಿ ಹೊಸ ಲಾಕ್ ಸೌಲಭ್ಯ…ಮ್ಯೂಚುವಲ್ ಫಂಡ್ ಹಿಂಪಡೆಯುವಿಕೆ ತಡೆಯಿರಿ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications