ಕೊರೊನಾ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಐದು ಹಂತದಲ್ಲಿ ಕೇಂದ್ರ ಸರ್ಕಾರ ಉತ್ತೇಜನ ಕ್ರಮಗಳನ್ನು ಘೋಷಣೆ ಮಾಡಿದೆ. ಅಂದ ಹಾಗೆ ಒಟ್ಟಾರೆ ಆರ್ಥಿಕತೆಗಾಗಿ ಕೇಂದ್ರ ತೆಗೆದುಕೊಂಡ ಕ್ರಮಗಳೇನು ಎಂಬ ಬಗ್ಗೆ ಹಣಕಾಸು ಲೆಕ್ಕಾಚಾರದ ಸಹಿತ ಇಲ್ಲಿ ನೀಡಲಾಗುತ್ತಿದೆ. ಪ್ರಧಾನಿ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿಯನ್ನೂ ಈ ಲೆಕ್ಕಾಚಾರ ಮೀರಿದೆ.
ಆತ್ಮ ನಿರ್ಭರ್ ಭಾರತ್ ಆರ್ಥಿಕ ಉತ್ತೇಜನ ಕ್ರಮದ ಹಣಕಾಸು ಲೆಕ್ಕಾಚಾರ ಹೀಗಿದೆ.
ಆರಂಭದ ಕ್ರಮಗಳು: 1,92,000 ಕೋಟಿ
ಮಾರ್ಚ್ 22ರಿಂದ ತೆರಿಗೆ ವಿನಾಯಿತಿ ನೀಡಿದ್ದರಿಂದ ಆದ ಆದಾಯ ನಷ್ಟ 7800 ಕೋಟಿ.
ಪಿಎಂ ಗರೀಬ್ ಕಲ್ಯಾಣ್ ಪ್ಯಾಕೇಜ್: 1,70,000 ಕೋಟಿ.
ಆರೋಗ್ಯ ವಲಯಕ್ಕಾಗಿ ಪ್ರಧಾನಮಂತ್ರಿ ಘೋಷಣೆ: 15 ಸಾವಿರ ಕೋಟಿ
ಮೊದಲ ಕಂತಿನ ಘೋಷಣೆ: 5,94,550 ಕೋಟಿ
ಎಂಎಸ್ ಎಂಇ ಸೇರಿದಂತೆ ವಿವಿಧ ವ್ಯಾಪಾರ- ಉದ್ಯಮಗಳಿಗೆ ತುರ್ತು ಕಾರ್ಯ ನಿರ್ವಹಣೆ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್): 3 ಲಕ್ಷ ಕೋಟಿ.
ಒತ್ತಡದಲ್ಲಿ ಇರುವ ಎಂಎಸ್ ಎಂಇಗಳ ಸಾಲ ಯೋಜನೆ: 20 ಸಾವಿರ ಕೋಟಿ
ಎಂಎಸ್ ಎಂಇಗಳಿಗೆ ಫಂಡ್ ಆಫ್ ಫಂಡ್: 50 ಸಾವಿರ ಕೋಟಿ
ಉದ್ಯಮ ಹಾಗೂ ಕಾರ್ಮಿಕರಿಗೆ ಇಪಿಎಫ್ ಬೆಂಬಲ: 2,800 ಕೋಟಿ
ಇಪಿಎಫ್ ದರ ಇಳಿಕೆ: 6750 ಕೋಟಿ
ಎನ್ ಬಿಎಫ್ ಸಿ, ಎಚ್ ಎಫ್ ಸಿ ಹಾಗೂ ಎಂಜಿಐಸಿಗೆ ವಿಶೇಷ ನಗದು ಯೋಜನೆ: 30,000 ಕೋಟಿ
ಎನ್ ಬಿಎಫ್ ಸಿ ಹಾಗೂ ಎಂಎಫ್ ಐಗಳಿಗೆ ಭಾಗಶಃ ಸಾಲ ಖಾತ್ರಿ ಯೋಜನೆ: 45 ಸಾವಿರ ಕೋಟಿ
ಡಿಸ್ಕಾಂಗಳಿಗೆ 90 ಸಾವಿರ ಕೋಟಿ. ಟಿಡಿಎಸ್/ಟಿಸಿಎಸ್ ದರ ಕಡಿತ: 50 ಸಾವಿರ ಕೋಟಿ ಕಡಿತ
ಎರಡನೇ ಕಂತಿನ ಘೋಷಣೆ: 3,10,000 ಕೋಟಿ
ಎರಡು ತಿಂಗಳ ಕಾಲ ವಲಸಿಗ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ಪೂರೈಕೆ: 3,500 ಕೋಟಿ
ಮುದ್ರಾ ಶಿಶು ಯೋಜನಾ ಬಡ್ಡಿ ದರ ರಿಯಾಯಿತಿ: 1,500 ಕೋಟಿ
ರಸ್ತೆ ಬದಿ ವ್ಯಾಪಾರಿಗಳಿಗೆ ವಿಶೇಷ ಸಾಲ ಯೋಜನೆ: 5000 ಕೋಟಿ
ಹೌಸಿಂಗ್ CLSS- MIG: 70,000 ಕೋಟಿ
ನಬಾರ್ಡ್ ಮೂಲಕ ಹೆಚ್ಚುವರಿ ತುರ್ತು ವರ್ಕಿಂಗ್ ಕ್ಯಾಪಿಟಲ್ ಫಂಡ್: 30,000 ಕೋಟಿ
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಹೆಚ್ಚುವರಿ ಸಾಲ: 2 ಲಕ್ಷ ಕೋಟಿ
ಮೂರನೇ ಕಂತಿನ ಘೋಷಣೆ: 1,50,000 ಕೋಟಿ
ಎಂಎಫ್ ಇಗಳಿಗೆ: 10,000 ಕೋಟಿ
ಮತ್ಸ್ಯ ಸಂಪದ ಯೋಜನೆ: 20,000 ಕೋಟಿ
TOP to TOTAL: 500 ಕೋಟಿ
ಅಗ್ರಿ ಇನ್ ಫ್ರಾ ಫಂಡ್: 1 ಲಕ್ಷ ಕೋಟಿ
ಪಶುಸಂಗೋಪನೆ ಅಭಿವೃದ್ಧಿ ನಿಧಿ: 15 ಸಾವಿರ ಕೋಟಿ
ವೈದ್ಯಕೀಯ ಸಸ್ಯಗಳ ಬೆಳೆಸಲು ಪ್ರೋತ್ಸಾಹಕ್ಕೆ: 4000 ಕೋಟಿ
ಜೇನು ಸಾಕಣೆಗೆ: 500 ಕೋಟಿ
ನಾಲ್ಕು ಮತ್ತು ಐದನೇ ಕಂತಿನ ಘೋಷಣೆ 48,100 ಕೋಟಿ
ವಯಬಿಲಿಟಿ ಗ್ಯಾಪ್ ಫಂಡಿಂಗ್: 8100 ಕೋಟಿ
ಹೆಚ್ಚುವರಿ ನರೇಗಾ 40,000 ಕೋಟಿ
ಆರ್ ಬಿಐನ ಆರ್ಥಿಕ ಕ್ರಮಗಳು: 8,01,603 ಕೋಟಿ ರುಪಾಯಿ
ಒಟ್ಟಾರೆ ಮೊತ್ತ: 20,97,053 ಕೋಟಿ


Click it and Unblock the Notifications