ಕೊರೊನಾವೈರಸ್‌ನಿಂದಾಗಿ ದೇಶದಲ್ಲಿ ಒಂದು ರೀತಿಯ ತುರ್ತು ಪರಿಸ್ಥಿತಿ ಎದುರಾಗಿದ್ದು, ಈಗಾಗಲೇ ಬಹುತೇಕ ಕಡೆಯಲ್ಲಿ ಎಲ್ಲಾ ಕೈಗಾರಿಕೆಗಳು ಬಂದ್ ಆಗಿವೆ. ದೇಶದ ಹಲವು ಜಿಲ್ಲೆಗಳು ಲಾಕ್‌ಡೌನ್ ಆಗಿದ್ದು ಕರ್ನಾಟಕ ಕೂಡ ಮಾರ್ಚ್ 31ರವರೆಗೆ ಲಾಕ್‌ಡೌನ್ ಆಗಿರಲಿದೆ.
ಕೊರೊನಾವೈರಸ್ ಬಿಕ್ಕಟ್ಟಿನ ಹಿನ್ನೆಯಲ್ಲಿ ಕೈಗಾರಿಕಗಳು ಮುಚ್ಚಿದ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಸೋಮವಾರ ASSOCHAM, FICCI, CII ಸೇರಿದಂತೆ 18 ನಗರದ ಹಲವಾರು ಸ್ಥಳೀಯ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಸಂವಾದ ನಡೆಸಿದರು.

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕೈಗಾರಿಕೆಗಳ ಪ್ರತಿನಿಧಿಗಳು ತಮ್ಮ ಅಳಲು ತೋಡಿಕೊಂಡಿದ್ದು, ಕೈಗಾರಿಕೆಗಳು ಮುಚ್ಚಿರುವುದರಿಂದ ಭಾರೀ ನಷ್ಟವನ್ನು ಎದುರಿಸುವಂತಾಗಿದೆ. ತಕ್ಷಣವೇ ಸರ್ಕಾರ ನೆರವನ್ನು ನೀಡಬೇಕು ಎಂದು ಕೇಳಿಕೊಂಡಿವೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೈಗಾರಿಕೆಗಳು ಉಳಿಯಲು ಸರ್ಕಾರ ಸಹಾಯ ಮಾಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ, ಕ್ಯಾಬಿನೆಟ್ ಕಾರ್ಯದರ್ಶಿ, ಕೈಗಾರಿಕಾ ಉತ್ತೇಜನ ಇಲಾಖೆ ಕಾರ್ಯದರ್ಶಿ ಮತ್ತು ಆಂತರಿಕ ವ್ಯಾಪಾರದ ಕಾರ್ಯದರ್ಶಿ ಸಹ ಸಂವಾದ ಅಧಿವೇಶನದಲ್ಲಿ ಭಾಗವಹಿಸಿದರು.
ಭಾರತದ ಎಲ್ಲಾ 548 ಜಿಲ್ಲೆಗಳಲ್ಲಿ ಕೋವಿಡ್ -19 ನಿರ್ಬಂಧಗಳಿಂದಾಗಿ ಪ್ರವಾಸೋದ್ಯಮ, ಆತಿಥ್ಯ, ವಾಯುಯಾನ, ರೆಸ್ಟೋರೆಂಟ್ ವ್ಯವಹಾರದಂತಹ ಕ್ಷೇತ್ರಗಳು ತೀವ್ರ ಒತ್ತಡಕ್ಕೆ ಸಿಲುಕುತ್ತಿವೆ.


Click it and Unblock the Notifications