ಕೊರೊನಾ ಕಾರಣಕ್ಕೆ ನೆಲ ಕಚ್ಚಿರುವ ಆರ್ಥಿಕತೆಗೆ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದರು. "ಆತ್ಮನಿರ್ಭರ್ ಭಾರತ್" ಪ್ಯಾಕೇಜ್ ಎಂದು ಹೆಸರಿಡಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಘೋಷಣೆ ಮಾಡಿದ್ದಾರೆ. ಅವರ ಜತೆಗೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಇದ್ದರು.
* ಎಂಎಸ್ ಎಂಇಗಳಿಗೆ 6
* EPFಗೆ ಸಂಬಂಧಿಸಿದಂತೆ 2
* ಎನ್ ಬಿಎಫ್ ಸಿ ಮತ್ತು ಎಂಎಫ್ ಐಗಳಿಗೆ 2
* ಡಿಸ್ಕಾಂಗಳಿಗೆ 1
* ಕಾಂಟ್ರ್ಯಾಕ್ಟರ್ಸ್ ಗಳಿಗೆ 1
* ರಿಯಲ್ ಎಸ್ಟೇಟ್ ವಲಯಕ್ಕೆ ಸಂಬಂಧಿಸಿದಂತೆ ಒಂದು ಘೋಷಣೆ ಮಾಡುವುದಾಗಿ ಹೇಳಿದರು.
ಎಂಎಸ್ ಎಂಇಗಳಿಗೆ ಘೋಷಣೆ ಮಾಡಿದ 6 ಯೋಜನೆಗಳ ವಿವರ ಹೀಗಿದೆ:
ಆಟೋಮೆಟಿಕ್ ಸಾಲ, ಗ್ಯಾರಂಟಿ ಅಗತ್ಯ ಇಲ್ಲ
ಎಂಎಸ್ ಎಂಇಗಳಿಗೆ (ಕಿರು, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ) ಶ್ಯೂರಿಟಿ ಇಲ್ಲದ ಆಟೋಮೆಟಿಕ್ ಸಾಲ ದೊರೆಯಲಿದೆ. ಎಷ್ಟು ಮೊತ್ತ ಅಂದರೆ, ಅದಕ್ಕಾಗಿ ಮೂರು ಲಕ್ಷ ಕೋಟಿ ರುಪಾಯಿ ಮೀಸಲಿಡಲಾಗುವುದು. ನಾಲ್ಕು ವರ್ಷದಲ್ಲಿ ಮರುಪಾವತಿ ಮಾಡಬಹುದು. ಮೊದಲ ಹನ್ನೆರಡು ತಿಂಗಳು ವಿನಾಯಿತಿ ದೊರೆಯಲಿದೆ. ಇದಕ್ಕೆ ಯಾವುದೇ ಖಾತ್ರಿ, ಅಡಮಾನ ಬೇಕಾಗಿಲ್ಲ. ಅಕ್ಟೋಬರ್ 31, 2020ರ ತನಕ ಈ ಸಾಲ ದೊರೆಯಲಿದೆ. ನಲವತ್ತೈದು ಲಕ್ಷ ಘಟಕಕ್ಕೆ ಸಹಾಯ.
ಈಕ್ವಿಟಿ ರೂಪದಲ್ಲಿ ಹೂಡಿಕೆ
ಒತ್ತಡದಲ್ಲಿ ಇರುವ ಎಂಎಸ್ ಎಂಇಗಳಿಗೆ ಇಪ್ಪತ್ತು ಸಾವಿರ ಕೋಟಿ ರುಪಾಯಿ ಮೀಸಲಿಡಲಾಗುವುದು. ಇದರಿಂದ ಎರಡು ಲಕ್ಷಕ್ಕೂ ಹೆಚ್ಚು ಘಟಕಗಳಿಗೆ ಸಹಾಯ ಆಗಲಿದೆ. ಯಾವುದೆಲ್ಲ ಎಂಎಸ್ ಎಂಇ ಎನ್ ಪಿಎ ಒತ್ತಡದಲ್ಲಿ ಇದೆಯೋ ಅಂಥವು ಇದಕ್ಕೆ ಅರ್ಹ ಇರುತ್ತವೆ. ಸರ್ಕಾರವು 4 ಸಾವಿರ ಕೋಟಿ ರುಪಾಯಿಯನ್ನು CGTMSEಗೆ ಒದಗಿಸಲಿದೆ. ಇನ್ನು ಬ್ಯಾಂಕ್ ಗಳಿಗೆ CGTMSE ಗ್ಯಾರಂಟಿ ಬೆಂಬಲ ನೀಡಲಿದೆ. ಎಂಎಸ್ ಎಂಇಯ ಪ್ರವರ್ತಕರಿಗೆ ಬ್ಯಾಂಕ್ ಗಳಿಂದ ಸಾಲ ದೊರೆಯಲಿದೆ. ಅದನ್ನು ಈಕ್ವಿಟಿ ರೂಪದಲ್ಲಿ ಘಟಕದಲ್ಲಿ ಪ್ರವರ್ತಕರು ತುಂಬುತ್ತಾರೆ.
ಹತ್ತು ಸಾವಿರ ಕೋಟಿ ರುಪಾಯಿ ನಿಧಿ
ಎಂಎಸ್ ಎಂಇಗಳ ವಿಸ್ತರಣೆ -ಸಾಮರ್ಥ್ಯ ಹೆಚ್ಚಳಕ್ಕೆ 'ಫಂಡ್ಸ್ ಆಫ್ ಫಂಡ್ಸ್' ಮೂಲಕ ಐವತ್ತು ಸಾವಿರ ಕೋಟಿ ರುಪಾಯಿ ಬಂಡವಾಳ ಪೂರೈಕೆ ಮಾಡಲಾಗುತ್ತದೆ. ಹತ್ತು ಸಾವಿರ ಕೋಟಿ ರುಪಾಯಿಯ ನಿಧಿ ಸ್ಥಾಪನೆ ಮಾಡಲಾಗುತ್ತದೆ. ಪ್ರಗತಿ ಸಾಮರ್ಥ್ಯ ಇರುವ ಹಾಗೂ ಸಾಲಕ್ಕೆ ಅರ್ಹ ಇರುವ ಸಂಸ್ಥೆಗಳಿಗೆ ಸಾಲ ನೀಡಲಾಗುತ್ತದೆ. FOF (ಫಂಡ್ ಆಫ್ ಫಂಡ್) ಅನ್ನು ಕೆಲವು ಮದರ್ ಫಂಡ್ ಮತ್ತು ಕೆಲವು ಡಾಟರ್ ಫಂಡ್ ಮೂಲಕ ಕಾರ್ಯ ನಿರ್ವಹಿಸಲಾಗುತ್ತದೆ. ಡಾಟರ್ ಫಂಡ್ ಹಂತದಲ್ಲಿ 50 ಸಾವಿರ ಕೋಟಿ ಇರುತ್ತದೆ. ಇದರಿಂದ ಎಂಎಸ್ ಎಂಇ ಸಾಮರ್ಥ್ಯ, ಗಾತ್ರ, ಹೆಚ್ಚಳಕ್ಕೆ ಸಹಾಯ ಆಗುತ್ತದೆ. ಎಂಎಸ್ ಎಂಇಗಳನ್ನು ಷೇರು ಮಾರ್ಕೆಟ್ ನಲ್ಲಿ ಲಿಸ್ಟಿಂಗ್ ಆಗಲು ಪ್ರೋತ್ಸಾಹ ನೀಡಲಾಗುತ್ತದೆ.
ಎಂಎಸ್ ಎಂಇ ವ್ಯಾಖ್ಯಾನ ಬದಲಾವಣೆ
ಎಂಸ್ ಎಂಇ ವ್ಯಾಖ್ಯಾನ ಬದಲಾಗಲಿದೆ. ಇದರಿಂದ ಬೆಳವಣಿಗೆ ಬಗ್ಗೆ ಯೋಚಿಸುವ ಅಗತ್ಯ ಇಲ್ಲ. ಎಂಎಸ್ ಎಂಇಯಲ್ಲಿನ ಹೂಡಿಕೆ ಮಿತಿಯನ್ನು ಹೆಚ್ಚಿಸಲಾಗುವುದು. ಹೆಚ್ಚುವರಿ ಮಾನದಂಡ ಪರಿಚಯಿಸಲಾಗುವುದು. ಈಗ ಒಟ್ಟಾರೆ ವ್ಯವಹಾರವನ್ನು ಸೇರ್ಪಡೆ ಮಾಡಲಾಗುವುದು. ಮ್ಯಾನುಫ್ಯಾಕ್ಚುರಿಂಗ್, ಸೇವೆ ಅಂತ ವ್ಯತ್ಯಾಸ ಇರುವುದಿಲ್ಲ. ಒಂದು ಕೋಟಿ ತನಕ ಹೂಡಿಕೆ ಮಾಡಿದರೂ ಎಂಎಸ್ ಎಂಇ ಎಂದು ಕರೆಯಲಾಗುವುದು. ಈ ಮುಂಚೆ ಹತ್ತು ಲಕ್ಷ ಇತ್ತು ಟರ್ನ್ ಓವರ್ ಇತ್ತು. ಈಗ ಹೂಡಿಕೆ ಒಂದು ಕೋಟಿ ಆದರೂ, ಟರ್ನ್ ಓವರ್ ಐದು ಕೋಟಿ ಆದರೂ ಅದನ್ನು ಕಿರು ಕೈಗಾರಿಕೆ ಕರೆಯಲಾಗುವುದು. ಇದೇ ರೀತಿ ಸಣ್ಣ ಕೈಗಾರಿಕೆ ಹತ್ತು ಕೋಟಿ ಹೂಡಿಕೆ, ಐವತ್ತು ಕೋಟಿ ಟರ್ನ್ ಓವರ್ ಆದರೂ ಮತ್ತು ಮಧ್ಯಮ ಕೈಗಾರಿಕೆಯಲ್ಲಿ ಇಪ್ಪತ್ತು ಕೋಟಿ ಹೂಡಿಕೆ, ನೂರು ಕೋಟಿ ವ್ಯವಹಾರ ಮಾಡಬಹುದು.
ಇನ್ನೂರು ಕೋಟಿ ತನಕ ಜಾಗತಿಕ ಟೆಂಡರ್ ಇಲ್ಲ
ಇನ್ನು ಮುಂದೆ ಇನ್ನೂರು ಕೋಟಿ ತನಕ ಟೆಂಡರ್ ಗೆ ಜಾಗತಿಕ ಟೆಂಡರ್ ಕರೆಯುವುದಿಲ್ಲ. ಹೀಗೆ ಮಾಡುವುದರಿಂದ ನಮ್ಮ ಎಂಎಸ್ ಎಂಇಗಳು ಇದರಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಅದರಲ್ಲೂ ಸರ್ಕಾರದ ಟೆಂಡರ್ ಇಷ್ಟು ಮೊತ್ತಕ್ಕೆ ಜಾಗತಿಕ ಟೆಂಡರ್ ಅಲ್ಲ.
45 ದಿನಗಳಿಗೆ ಬಾಕಿ ಪಾವತಿ
ಕೊರೊನಾ ನಂತರ ಪ್ರದರ್ಶನ ಕಷ್ಟವಾಗಲಿದೆ. ಆದ್ದರಿಂದ ಇ- ಮಾರ್ಕೆಟ್ ಲಿಂಕೇಜ್ ವ್ಯವಸ್ಥೆ ಮಾಡಿಕೊಡಲಾಗುವುದು. ಸರ್ಕಾರದಿಂದ ಹಾಗೂ ಪಿಎಸ್ ಯುಗಳಿಂದ ಬಾಕಿ ಇರುವ ಎಲ್ಲ ಮೊತ್ತವನ್ನು 45 ದಿನದೊಳಗೆ ಎಂಎಸ್ ಎಂಇಗಳಿಗೆ ಪಾವತಿ ಮಾಡಲಾಗುವುದು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications