ನಿನ್ನೆ ಸ್ಥಿರವಾಗಿದ್ದ ಚಿನ್ನದ ಬೆಲೆಯು ಇಂದು ಇಳಿಕೆಯಾಗಿದೆ. ಕಳೆದ ವಾರ ಚಿನ್ನದ ಬೆಲೆಯು ಏರಿಳಿತ ಕಂಡಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರ ವಾಗಿದೆ. 3 ಬಾರಿ ಹೆಚ್ಚಳವಾಗಿದೆ.
ಆಗಸ್ಟ್ 29ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 150 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 47,150 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 170 ರೂಪಾಯಿ ಕುಗ್ಗಿದ್ದು ಪ್ರಸ್ತುತ 5,430 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ 800 ರೂಪಾಯಿ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು ಪ್ರಸ್ತುತ 54,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಆಗಸ್ಟ್ 29ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50948.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 53868.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce = 28.3495 ಗ್ರಾಂ) ಗೆ ಶೇ 0.47ರಷ್ಟು ಇಳಿಕೆಯಾಗಿದ್ದು 1,726.85 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.52ರಷ್ಟು ಕುಗ್ಗಿದ್ದು, 18.64 ಯುಎಸ್ ಡಾಲರ್ ಆಗಿದೆ.