2022ರ 2ನೇ ತ್ರೈಮಾಸಿಕದ ಕುಸಿತ ಬೆನ್ನಲ್ಲೂ ವರ್ಷದ ಮೊದಲಾರ್ಧದ ಚಿನ್ನದ ಬೇಡಿಕೆ ಹೆಚ್ಚಳ

ವಿಶ್ವ ಚಿನ್ನ ಪರಿಷತ್ತಿನ ಇತ್ತೀಚಿನ ಚಿನ್ನದ ಬೇಡಿಕೆ ಟ್ರೆಂಡ್‌ಗಳ ವರದಿ ಪ್ರಕಾರ, ಎರಡನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷದ ಚಿನ್ನದ ಬೇಡಿಕೆ (ಒಟಿಸಿ ಹೊರತುಪಡಿಸಿ) ಶೇ.8ರಷ್ಟು ಅಂದರೆ 984 ಟನ್‌ಗೆ ಇಳಿಕೆಯಾಗಿದೆ. ಆದರೆ, ಮೊದಲ ತ್ರೈಮಾಸಿಕದಲ್ಲಿ ಇಟಿಎಫ್‌ ಒಳಹರಿವು ಸದೃಢವಾಗಿದ್ದರಿಂದ, ಎಚ್1 2021 ರಕ್ಕೆ ಹೋಲಿಸಿದರೆ 2022ರ ಮೊದಲಾರ್ಧದ ಚಿನ್ನದ ಬೇಡಿಕೆ ಶೇ.12ರಷ್ಟು ಹೆಚ್ಚಾಗಿದೆ.

ಏಪ್ರಿಲ್‌ನ ಆರಂಭಿಕ ಹಂತದಲ್ಲಿ ಕಂಡುಬಂದ ಭೌಗೋಳಿಕ ರಾಜಕೀಯ ಅಪಾಯಗಳು ಮತ್ತು ಹಣದುಬ್ಬರದ ಒತ್ತಡದ ನಂತರ, ಹೂಡಿಕೆದಾರರು ತಮ್ಮ ಗಮನವನ್ನು ವೇಗವಾಗಿ ಏರುತ್ತಿರುವ ಬಡ್ಡಿದರಗಳು ಮತ್ತು ಸದೃಢ ಅಮೆರಿಕನ್ ಡಾಲರ್‌ ಕಡೆಗೆ ಹರಿಸಿರುವುದರಿಂದ 2022 ರ ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ಬೆಲೆ ಕುಸಿದಿದೆ.

ತ್ರೈಮಾಸಿಕದಲ್ಲಿ ಚಿನ್ನದ ಬೆಲೆಯ ಶೇ.6ರಷ್ಟು ಕುಸಿತ ಚಿನ್ನದ ಇಟಿಎಫ್‌ಗಳ ಮೇಲೆ ಪರಿಣಾಮ ಬೀರಿದ್ದು, ಎಚ್‌1 2021ರ 127 ಟನ್‌ ಹೊರಹರಿವಿಗೆ ಹೋಲಿಸಿದರೆ, ಎರಡನೇ ತ್ರೈಮಾಸಿಕದಲ್ಲಿ ಇದು 39ಟನ್‌ ಹೊರಹರಿವು ದಾಖಲಿಸಿದೆ. ಆದರೆ, ಎರಡನೇ ತ್ರೈಮಾಸಿಕದ ಕುಸಿತವು ಎರಡನೇ ತ್ರೈಮಾಸಿಕದ ಇಟಿಎಫ್‌ಗಳಿಗೆ ದುರ್ಬಲ ಬೆಳವಣಿಗೆ ನೀಡಿದೆ.

 ಚಿನ್ನದ ಬೇಡಿಕೆ 245 ಟನ್‌ಗೆ ಸ್ಥಿರ

ಚಿನ್ನದ ಬೇಡಿಕೆ 245 ಟನ್‌ಗೆ ಸ್ಥಿರ

ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ಗಟ್ಟಿ ಹಾಗೂ ನಾಣ್ಯಗಳ ವರ್ಷದಿಂದ ವರ್ಷದ ಬೇಡಿಕೆ 245 ಟನ್‌ಗೆ ಸ್ಥಿರವಾಗಿ ಮುಂದುವರಿದಿದೆ. ಚಿನ್ನದ ಬೇಡಿಕೆ ಗಮನಾರ್ಹವಾಗಿ ಭಾರತ, ಮಧ್ಯಪೂರ್ವ ಮತ್ತು ಟರ್ಕಿಯಿಂದ ಬಂದಿದ್ದು, ಇದು ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕು ಹಾಗೂ ಮುಂದುವರಿದ ಲಾಕ್‌ಡೌನ್‌ನಿಂದ ಕುಸಿದಿದ್ದ ಬೇಡಿಕೆಗೆ ಸಮತೋಲನ ಒದಗಿಸಿದೆ. ಪರಿಣಾಮವಾಗಿ, ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಗಟ್ಟಿ ಮತ್ತು ಬೇಡಿಕೆ 526 ಟನ್‌ನಷ್ಟು ಕಡಿಮೆಯಾಗಿದ್ದು, ವರ್ಷದಿಂದ ವರ್ಷದ ಬೇಡಿಕೆ ಶೇ.12ರಷ್ಟು ಕುಸಿದಿದೆ. ಆಭರಣ ವಲಯದಲ್ಲಿ, 2021ರ ಎರಡನೇ ತ್ರೈಮಾಸಿಕದ ಶೇ.49 ರ ಬೇಡಿಕೆಗೆ ಹೋಲಿಸಿದರೆ, ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ 453 ಟನ್‌ಗೆ ಅಂದರೆ ವರ್ಷದಿಂದ ವರ್ಷಕ್ಕೆ ಶೇ.4ಕ್ಕೆ ಏರಿಕೆಯಾಗಿದೆ. ಭಾರತದ ಅತ್ಯುತ್ತಮ ಸಾಧನೆ, ಚೀನಾದಲ್ಲಿ ಉಂಟಾಗಿರುವ ಶೇ.28ರಷ್ಟು ಮಾರುಕಟ್ಟೆ ಕುಸಿತವನ್ನು ಸಮತೋಲನಗೊಳಿಸುತ್ತದೆ.

 ಚಿನ್ನದ ನಿಕ್ಷೇಪ ಹೆಚ್ಚಳ ಉದ್ದೇಶ

ಚಿನ್ನದ ನಿಕ್ಷೇಪ ಹೆಚ್ಚಳ ಉದ್ದೇಶ

ಎರಡನೇ ತ್ರೈಮಾಸಿಕದಲ್ಲಿ ಕೇಂದ್ರೀಯ ಬ್ಯಾಂಕುಗಳು ನಿವ್ವಳ ಖರೀದಿದಾರರಾಗಿದ್ದು, ಜಾಗತಿಕ ಅಧಿಕೃತ ನಿಕ್ಷೇಪಗಳು 180 ಟನ್‌ಗೆ ತಲುಪಿದೆ. ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಖರೀದಿ 270 ಟನ್‌ಗೆ ತಲುಪಿದೆ, ಇತ್ತೀಚಿನ ಸೆಂಟ್ರಲ್ ಬ್ಯಾಂಕ್ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಇದರಲ್ಲಿ ಶೇ.25ರಷ್ಟು ಪ್ರತಿಕ್ರಿಯಿಸಿದವರು ಮುಂದಿನ 12 ತಿಂಗಳುಗಳಲ್ಲಿ ತಮ್ಮ ಚಿನ್ನದ ನಿಕ್ಷೇಪಗಳನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದ್ದಾರೆಂದು ಹೇಳಿದ್ದಾರೆ. ತಂತ್ರಜ್ಞಾನ ವಲಯದಲ್ಲಿ, ಚಿನ್ನದ ಬೇಡಿಕೆ 2021ರ ಎರಡನೇ ತ್ರೈಮಾಸಿಕದಿಂದ ಶೇ.2ರಷ್ಟು ಕುಸಿತ ಕಂಡಿದ್ದು, 78 ಟನ್‌ನಷ್ಟಿದೆ. ಪರಿಣಾಮವಾಗಿ, 2022ರ ಮೊದಲ ತ್ರೈಮಾಸಿಕದಲ್ಲಿ ಬೇಡಿಕೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದೆ. ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಪೂರೈಕೆ ಸರಪಳಿಯ ಅಡಚಣೆ ಮುಂದುವರೆಸಿದೆ ಮತ್ತು ಈಗ ಸಂಕಷ್ಟದ ಸಮಯದಿಂದ ಎಲೆಕ್ಟ್ರಾನಿಕ್ಸ್‌ಗಾಗಿ ಗ್ರಾಹಕರ ಬೇಡಿಕೆ ಇಳಿಮುಖವಾಗಿದೆ. ಇವೆರಡೂ ಬೇಡಿಕೆಯ ಕುಸಿತಕ್ಕೆ ಕಾರಣವಾಗಿವೆ.

 ಚೀನೀ ಗಣಿಗಾರಿಕೆ ಚೇತರಿಕೆಯಿಂದ ಉತ್ಪಾದನೆಗೆ ವೇಗ

ಚೀನೀ ಗಣಿಗಾರಿಕೆ ಚೇತರಿಕೆಯಿಂದ ಉತ್ಪಾದನೆಗೆ ವೇಗ

ವರ್ಷದ ಮೊದಲಾರ್ಧದಲ್ಲಿ ಗಣಿ ಉತ್ಪಾದನೆಯು ಚಿನ್ನದ ಬೇಡಿಕೆ ಟ್ರೆಂಡ್ಸ್ ಡೇಟಾ ಸರಣಿಯಲ್ಲಿ ದಾಖಲೆಯ ಗರಿಷ್ಠ ಮಟ್ಟ ಅಂದರೆ 1,764 ಟನ್‌ಗೆ ತಲುಪಿದೆ. ಉನ್ನತ ದರ್ಜೆಯ ನಿಕ್ಷೇಪಗಳ ಗಣಿಗಾರಿಕೆ ಮಾಡುವುದರಿಂದ ಮತ್ತು ಚೀನೀ ಗಣಿಗಾರಿಕೆ ಉದ್ಯಮದ ಚೇತರಿಸಿಕೊಳ್ಳುವಿಕೆಯಿಂದ ಉತ್ಪಾದನೆಗೆ ವೇಗ ದೊರೆತಿದೆ. ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿದ ಚಿನ್ನದ ಬೆಲೆಗಳು ಮತ್ತು ಹೆಚ್ಚುತ್ತಿರುವ ಆರ್ಥಿಕ ಸಂಕಷ್ಟ ಮತ್ತು ಅನಿಶ್ಚಿತತೆಯು ಮರುಬಳಕೆಯ ಚಟುವಟಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದ್ದು, ಒಟ್ಟು ಮರುಬಳಕೆಯು ವರ್ಷದಿಂದ ವರ್ಷಕ್ಕೆ ಶೇ.8ರಷ್ಟು ಹೆಚ್ಚಾಗಿದೆ.

 ಚಿನ್ನದ ಮಾರುಕಟ್ಟೆ ಭವಿಷ್ಯ ಹೇಗಿದೆ?

ಚಿನ್ನದ ಮಾರುಕಟ್ಟೆ ಭವಿಷ್ಯ ಹೇಗಿದೆ?

ವಿಶ್ವ ಚಿನ್ನದ ಪರಿಷತ್‌ನ ಇಎಂಇಎ ಹಿರಿಯ ವಿಶ್ಲೇಷಕ ಲೂಯಿಸ್‌ ಸ್ಟ್ರೀಟ್‌ ಪ್ರಕಾರ, "2022 ರ ಮೊದಲಾರ್ಧದಲ್ಲಿ, ಜಾಗತಿಕ ಚಿನ್ನದ ಮಾರುಕಟ್ಟೆಯು ಹಣದುಬ್ಬರ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಯಿಂದ ಬಳಲಿತ್ತು. ಜೊತೆಗೆ, ಅಮೆರಿಕನ್‌ ಡಾಲರ್ ಮೌಲ್ಯದ ಅಭೂತಪೂರ್ವ ಏರಿಕೆಯೊಂದಿಗೆ ಹೆಚ್ಚುತ್ತಿರುವ ಬಡ್ಡಿದರಗಳ ಸಮಸ್ಯೆಗಳನ್ನು ಎದುರಿಸಿತು. ಮೊದಲ ತ್ರೈಮಾಸಿಕದಲ್ಲಿ ಉನ್ನತ ಮಟ್ಟದಿಂದ ಬೆಲೆಗಳು ಸರಾಗವಾಗುತ್ತಿರುವುದು ಕಂಡುಬರುತ್ತಿದ್ದು, ಚಿನ್ನವು ಈ ವರ್ಷ ಇಲ್ಲಿಯವರೆಗೆ ಉತ್ತಮ ಪ್ರದರ್ಶನದ ಸ್ವತ್ತುಗಳಲ್ಲಿ ಒಂದು ಎಂದು ಸಾಬೀತಾಗಿದೆ. ಭವಿಷ್ಯದಲ್ಲಿ, 2022ರ ಎರಡನೇ ತ್ರೈಮಾಸಿಕದಲ್ಲಿ ಕೂಡ ಚಿನ್ನದ ಮಾರುಕಟ್ಟೆಯ ಸಮಸ್ಯೆಗಳು ಹಾಗೂ ಅವಕಾಶಗಳು ಕೂಡ ಹೆಚ್ಚುವುದನ್ನು ಕಾಣಬಹುದು."

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+