ಭಾರತದಲ್ಲಿ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ದರವು ಮಾರ್ಚ್ 22 (ಬುಧವಾರ) ದಿಢೀರ್ ಆಗಿ ಭಾರೀ ಇಳಿಕೆಯಾಗಿದೆ. ಮಲ್ಟಿ ಕಮೋಡಿಟಿಸ್ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) ಚಿನ್ನದ ದರವು ಸೋಮವಾರ (ಮಾರ್ಚ್ 20) ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಹಳದಿ ಲೋಹದ ದರವು ಹತ್ತು ಗ್ರಾಮ್‌ಗೆ 60,000 ರೂಪಾಯಿಯನ್ನು ದಾಟಿದೆ. ಇದಾದ ಮರುದಿನವೇ ಭಾರತದಲ್ಲಿ ಗೋಲ್ಡ್ ರೇಟ್ 200 ರೂಪಾಯಿ ಏರಿದೆ. ಆದರೆ ಬುಧವಾರ ಭಾರತದಲ್ಲಿ ಚಿನ್ನದ ದರವು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
ಮಾರ್ಚ್ 20ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹ ದರ ಏರಿಕೆಯಾಗಿದ್ದರೂ ಭಾರತದಲ್ಲಿ 500 ರೂಪಾಯಿ ಇಳಿದಿತ್ತು. ಮಾರ್ಚ್ 21ರಂದು ಏರಿತ್ತು, ಆದರೆ ಇಂದು ಬರೋಬ್ಬರಿ 800 ರೂಪಾಯಿ ಕುಗ್ಗಿದೆ. ಬೆಂಗಳೂರಿನಲ್ಲೂ 800 ರೂಪಾಯಿ ದರ ಇಳಿಕೆ ಕಂಡು ಬಂದಿದೆ. ಇನ್ನು ನಾವು ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯ ಏರಿಳಿತವನ್ನು ಗಮನಿಸಿದಾಗ 10 ದಿನದಲ್ಲಿ 6 ಬಾರಿ ದರ ಏರಿಕೆಯಾಗಿದ್ದು, 3 ಬಾರಿ ಬೆಲೆ ಇಳಿದಿದೆ. ಬರೀ ಒಂದು ಬಾರಿ ಮಾತ್ರ ಗೋಲ್ಡ್ ರೇಟ್‌ನಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

ಮಾರ್ಚ್ 22, 2023ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗ್ಗಿದ್ದು 58599.00 ರೂಪಾಯಿ ಆಗಿದೆ. ಬೆಳ್ಳಿ ಹೆಚ್ಚಳವಾಗಿದ್ದು 68742.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.06ರಷ್ಟು ಕುಗ್ಗಿದ್ದು 1,941.81 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.12ರಷ್ಟು ಇಳಿಕೆಯಾಗಿದ್ದು 22.41 ಯುಎಸ್ ಡಾಲರ್ ಆಗಿದೆ. ಮಾರ್ಚ್ 20ರಂದು ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಏರಿಕೆಯಾಗಿದ್ದು, ಅದಾದ ಮರುದಿನವೇ ಇಳಿಕೆಯಾಗಿದೆ.
ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
10 ದಿನದಲ್ಲಿ 6 ಬಾರಿ ಚಿನ್ನದ ಬೆಲೆಯು ಏರಿಕೆಯಾಗಿದೆ. ಆದರೆ ಇಂದು ಭಾರೀ ಇಳಿಕೆಯಾಗಿದೆ. ಮಾರ್ಚ್ 22ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 800 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 54,200 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 870 ರೂಪಾಯಿ ಕುಗ್ಗಿದ್ದು ಪ್ರಸ್ತುತ 59,130 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂಪಾಯಿ ಕುಸಿದಿದ್ದು ಪ್ರಸ್ತುತ 71,200 ರೂಪಾಯಿ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದೆ ಎಂದು ನೋಡಿ..
ಪ್ರಮುಖ ನಗರಗಳಲ್ಲಿ ಚಿನ್ನದ ದರ
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (-800 ರೂಪಾಯಿ)
24 ಕ್ಯಾರೆಟ್ ಚಿನ್ನ: 59,180 ರೂಪಾಯಿ (-870 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 54,200 ರೂಪಾಯಿ (-800 ರೂಪಾಯಿ)
24 ಕ್ಯಾರೆಟ್ ಚಿನ್ನ: 59,130 ರೂಪಾಯಿ (-870 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 54,350 ರೂಪಾಯಿ (-800 ರೂಪಾಯಿ)
24 ಕ್ಯಾರೆಟ್ ಚಿನ್ನ: 59,280 ರೂಪಾಯಿ (-870 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 54,200 ರೂಪಾಯಿ (-800 ರೂಪಾಯಿ)
24 ಕ್ಯಾರೆಟ್ ಚಿನ್ನ: 59,130 ರೂಪಾಯಿ (-870 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (-800 ರೂಪಾಯಿ)
24 ಕ್ಯಾರೆಟ್ ಚಿನ್ನ: 59,180 ರೂಪಾಯಿ (-870 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 54,200 ರೂಪಾಯಿ (-800 ರೂಪಾಯಿ)
24 ಕ್ಯಾರೆಟ್ ಚಿನ್ನ: 59,130 ರೂಪಾಯಿ (-870 ರೂಪಾಯಿ)


Click it and Unblock the Notifications