For Quick Alerts
ALLOW NOTIFICATIONS  
For Daily Alerts

Gold: ಬೆಲೆ ಜಿಗಿತ, ಹಳದಿ ಲೋಹದ ದರ ಸಾರ್ವಕಾಲಿಕ ಏರಬಹುದೇ?

|

ಹಲವಾರು ದಿನಗಳಿಂದ ಬಂಗಾರ ದರದಲ್ಲಿ ಏರಿಳಿತವನ್ನು ನಾವು ಕಾಣುತ್ತಿದ್ದೇವೆ. ಪ್ರಮುಖವಾಗಿ ಚಿನ್ನದ ಬೆಲೆಯು ಡಾಲರ್‌ನ ಮೌಲ್ಯದ ಮೇಲೆ ಅವಲಂಭಿತವಾಗಿರುತ್ತದೆ. ಹಾಗೆಯೇ ಬೇರೆ ಬೆಳವಣಿಗೆಗಳು ಕೂಡಾ ಗೋಲ್ಡ್ ರೇಟ್ ಮೇಲೆ ಪ್ರಭಾವ ಬೀರುತ್ತದೆ. ಸೋಮವಾರ ಆದ ಕೆಲವೊಂದು ಬೆಳವಣಿಗೆಗಳಿಂದಾಗಿ ಚಿನ್ನದ ಬೆಲೆಯು ಜಿಗಿದಿದೆ.

ಜಾಗತಿಕವಾಗಿ ಕಂಡು ಬಂದ ಪಾಸಿಟಿವ್ ಬೆಳವಣಿಗೆಯಿಂದಾಗಿ ಸೋಮವಾರ ಅಂದರೆ ಜನವರಿ 9ರಂದು ಚಿನ್ನದ ಬೆಲೆಯು ಏರಿಕೆಯಾಗಿದೆ. ಈ ಸಂದರ್ಭದಲ್ಲೇ ಬೆಳ್ಳಿ ದರವು ಶೇಕಡ 0.72ರಷ್ಟಿದೆ. ಮಲ್ಟಿ ಕಮೋಡಿಟಿ ಎಕ್ಸ್‌ಚೇಂಚ್ ಅಥವಾ ಎಂಸಿಎಕ್ಸ್‌ನಲ್ಲಿ ಗೋಲ್ಡ್ ಫೆಬ್ರವರಿ ಫ್ಯೂಚರ್ಸ್ 10 ಗ್ರಾಂ ಗೆ 56,057 ರೂಪಾಯಿಯಂತೆ ವಹಿವಾಟು ನಡೆಸುತ್ತಿದೆ.

ಸುಮಾರು 314 ರೂಪಾತಿ ಅಥವಾ ಶೇಕಡ 0.56ರಷ್ಟು ಹೆಚ್ಚಳವಾಗಿದೆ. ಇದೇ ಸಂದರ್ಭದಲ್ಲಿ ಸಿಲ್ವರ್ ಮಾರ್ಚ್ ಫ್ಯೂಚರ್ಸ್ ಸುಮಾರು 500 ರೂಪಾಯಿ ಹೆಚ್ಚಾಗಿ ಪ್ರತಿ ಕೆಜಿಗೆ 69,655 ರೂಪಾಯಿಯಂತೆ ವಹಿವಾಟು ನಡೆಸುತ್ತಿದೆ.

Year Ender 2022: 2023ರಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿಸಬಹುದೇ?Year Ender 2022: 2023ರಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿಸಬಹುದೇ?

ಜಾಗತಿಕವಾಗಿ ಶುಕ್ರವಾರ ಹಳದಿ ಲೋಹದ ದರವಯ ಏರಿಕೆಯಾಗಿದೆ. ಯುಎಸ್ ಉದ್ಯೋಗ, ಉದ್ಯೋಗ ಕಡಿತ, ಡಾಲರ್ ಮೌಲ್ಯ ಕುಸಿತದ ನಡುವೆ ಶುಕ್ರವಾರ ಗೋಲ್ಡ್ ರೇಟ್ ಸುಮಾರು ಶೇಕಡ 1ರಷ್ಟು ಹೆಚ್ಚಳವಾಗಿದೆ.

ಸ್ಟಾಟ್ ಗೋಲ್ಡ್ ಶೇಕಡ 1.6ರಷ್ಟು ಹೆಚ್ಚಾಗಿ ಪ್ರತಿ ಔನ್ಸ್‌ಗೆ 1,863.18 ಯುಎಸ್ ಡಾಲರ್ ಆಗಿತ್ತು. ಫ್ಯೂಚರ್ ಗೋಲ್ಡ್ ಶೇಕಡ 1.5ರಷ್ಟು ಹೆಚ್ಚಾಗಿ 1,867.60 ಡಾಲರ್‌ಗೆ ತಲುಪಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನದ ದರ ಸಾರ್ವಕಾಲಿಕವಾಗಿ ಏರಬಹುದೇ, ತಜ್ಞರು ಏನು ಹೇಳುತ್ತಾರೆ, ಇಲ್ಲಿದೆ ಈ ಬಗ್ಗೆ ವಿವರ ಮುಂದೆ ಓದಿ...

 ಚಿನ್ನ, ಬೆಳ್ಳಿ ದರ ದಿಢೀರ್ ಬದಲಾವಣೆ ಸಾಧ್ಯತೆ

ಚಿನ್ನ, ಬೆಳ್ಳಿ ದರ ದಿಢೀರ್ ಬದಲಾವಣೆ ಸಾಧ್ಯತೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಹ್ತಾ ಈಕ್ವಿಟೀಸ್‌ನ ವಿಪಿ ಕಮಾಡಿಟೀಸ್‌ನ ಉಪಾಧ್ಯಕ್ಷ ರಾಹುಲ್ ಕಲಾಂತ್ರಿ, "ಶುಕ್ರವಾರ ಚಿನ್ನ ಹಾಗೂ ಬೆಳ್ಳಿ ದರವು ಬಲಗೊಂಡಿದೆ. ಪ್ರಮುಖವಾಗಿ ಡಾಲರ್‌ ಇಂಡೆಕ್ಸ್‌ನಲ್ಲಿ ಆದ ಬೆಳವಣಿಗೆ ಹಾಗೂ ಯುಎಸ್‌ನ 10 ವರ್ಷದ ಬಾಂಡ್‌ ಯೀಲ್ಡ್‌ ( bond yields) ಬಂಗಾರ ದರದ ಮೇಲೆ ಪ್ರಭಾವ ಬೀರಿದೆ.

ಚಿನ್ನದ ಬೆಲೆ ಆರು ತಿಂಗಳಲ್ಲೇ ಭಾರೀ ಅಧಿಕವಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಯುಎಸ್‌ ಫೆಡರಲ್ ಮತ್ತೆ 25 ಮೂಲಾಂಕ ಹೆಚ್ಚಳ ಮಾಡುವ ಸಾಧ್ಯತೆಯಿದೆ. 2022ರಲ್ಲಿ ಬಡ್ಡಿದರ ಭಾರೀ ಹೆಚ್ಚಿಸಲಾಗಿದೆ. ಆದರೆ ಈಗ ಬಿಪಿಎಸ್ ಕೊಂಚ ಕುಗ್ಗುತ್ತಿದೆ," ಎಂದು ತಿಳಿಸಿದ್ದಾರೆ.

ಹಾಗೆಯೇ, "ಇಂದು ಚಿನ್ನ ಹಾಗೂ ಬೆಳ್ಳಿ ದರವು ದಿಢೀರ್ ಏರಿಳಿತ ಕಾಣುವ ಸಾಧ್ಯತೆಯಿದೆ. ಚಿನ್ನದ ಬೆಲೆಯು 55,640-55,450 ರೂಪಾಯಿ ನಡುವೆ ಇರುವ ಸಾಧ್ಯತೆಯಿದೆ," ಎಂದು ಕೂಡಾ ರಾಹುಲ್ ಕಲಾಂತ್ರಿ ಹೇಳಿದ್ದಾರೆ.

 ಕೋಟಕ್ ಸೆಕ್ಯುರಿಟೀಸ್‌ನ ರವೀಂದ್ರ ವಿ ರಾವ್ ಹೇಳುವುದೇನು?

ಕೋಟಕ್ ಸೆಕ್ಯುರಿಟೀಸ್‌ನ ರವೀಂದ್ರ ವಿ ರಾವ್ ಹೇಳುವುದೇನು?

"ಶುಕ್ರವಾರ ಎಂಸಿಎಕ್ಸ್‌ನಲ್ಲಿ ನಾಟಕೀಯವಾದ ಬೆಳವಣಿಗೆ ಕಂಡು ಬಂದಿದೆ. ಚಿನ್ನದ ಬೆಲೆಯು ಏಳು ತಿಂಗಳ ಸಾರ್ವಕಾಲಿಕ ಏರಿಕೆ ಕಂಡಿದೆ. ಡಾಲರ್ ಆರಂಭಿಕವಾಹಿ ಲಾಭ ಗಳಿಸಿದರೂ ಬಳಿಕ ಕುಸಿತ ಕಂಡಿದೆ.

ಮಾರುಕಟ್ಟೆಯು ಪ್ರಮುಖವಾಗಿ ಉದ್ಯೋಗ ಕಡಿತ ಹಾಗೂ ನಿರುದ್ಯೋಗ ದರವನ್ನು ಕಡೆಗಣಿಸಿದೆ. ಡಿಸೆಂಬರ್‌ನಲ್ಲಿ ಯುಎಸ್ ಆರ್ಥಿಕತೆಯು 223,000 ಉದ್ಯೋಗವನ್ನು ಸೇರಿಸಿದೆ. ಈ ಸಂದರ್ಭದಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇಕಡ 3.5ಕ್ಕೆ ಕುಸಿದಿದೆ.

ಈ ಎಲ್ಲ ಬೆಳವಣಿಗೆ ಬಡ್ಡಿದರ ಏರಿಕೆಗೆ ಕಾರಣವಾಗಿದೆ. ಇಂದು ಚಿನ್ನದ ದರವು ಏರಿಕೆಯಾಗಿದೆ. ಡಾಲರ್ ಕುಸಿದಿದ್ದರಿಂದ ಬಂಗಾರ ಬೆಲೆ ಹೆಚ್ಚಾಗಿದೆ," ಎಂದು ಕೋಟಕ್ ಸೆಕ್ಯುರಿಟೀಸ್‌ನ ರವೀಂದ್ರ ವಿ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಐಸಿಐಸಿಐ ಡೈರೆಕ್ಟ್ ವರದಿ ಏನು ಹೇಳುತ್ತದೆ?

ಐಸಿಐಸಿಐ ಡೈರೆಕ್ಟ್ ವರದಿ ಏನು ಹೇಳುತ್ತದೆ?

"ಡಾಲರ್ ಮೌಲ್ಯ ಇಳಿಕೆಯಾದಂತೆ ಚಿನ್ನದ ಬೆಲೆಯು ಹೆಚ್ಚಾಗಿದೆ. ಇದನ್ನು ಹೊರತುಪಡಿಸಿ ಯುಎಸ್ ಫೆಡರಲ್ ಸಣ್ಣ ಪ್ರಮಾಣದಲ್ಲಿ ಬಡ್ಡಿದರ ಹೆಚ್ಚಿಸುವ ಸುಳಿವನ್ನು ನೀಡಿದೆ. ಇದು ಕೂಡಾ ಚಿನ್ನದ ಬೆಲೆ ಮೇಲೆ ಪ್ರಭಾವ ಉಂಟು ಮಾಡಿದೆ.

ಡಾಲರ್ ಮೌಲ್ಯ ಇಳಿಕೆ ಹಾಗೂ ಯುಎಸ್ ಟ್ರೆಜರಿ ಯೀಲ್ಡ್ ಕುಸಿತದ ಕಾರಣದಿಂದಾಗಿ ಚಿನ್ನದ ಬೆಲೆಯು ಇಂದು ಕೂಡಾ ಏರುಗತಿಯಲ್ಲೇ ಸಾಗುವ ಸಾಧ್ಯತೆಯಿದೆ. ಎಂಸಿಎಕ್ಸ್ ಗೋಲ್ಡ್ ಏರಿಕೆಯಾಗಿ 56,200 ಅಲ್ಲಿಯೇ ಮುಂದುವರಿಯುವ ಸಾಧ್ಯೆತೆಯಿದೆ.

ಎಂಸಿಎಕ್ಸ್ ಸಿಲ್ವರ್ ಕೂಡಾ ಕಳೆದ ಶುಕ್ರವಾರ ಏರಿದೆ. ಸಿಲ್ವರ್ ಬೆಲೆ 70,100ರಲ್ಲಿ ಮುಂದುವರಿಯುವ ನಿರೀಕ್ಷೆ ಇದೆ," ಎಂದು ಐಸಿಐಸಿಐ ಡೈರೆಕ್ಟ್ ವರದಿಯು ಉಲ್ಲೇಖ ಮಾಡಿದೆ.

 ಎಂಸಿಎಕ್ಸ್ ವಹಿವಾಟು ಹೇಗಿದೆ?

ಎಂಸಿಎಕ್ಸ್ ವಹಿವಾಟು ಹೇಗಿದೆ?

ಜನವರಿ 9ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು 56100.00 ರೂಪಾಯಿ ಆಗಿದೆ. ಬೆಳ್ಳಿ ಏರಿಕೆಯಾಗಿದ್ದು 69663.00 ರೂಪಾಯಿ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.51ರಷ್ಟು ಹಿಗ್ಗಿದ್ದು 1,879.12 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.21ರಷ್ಟು ಏರಿಕೆಯಾಗಿದ್ದು 24.06 ಯುಎಸ್ ಡಾಲರ್ ಆಗಿದೆ.

English summary

Gold Prices Rise as Dollar Tumbles, Will it Climb to a New Peak, Explained in Kannada

Gold rate is trading higher on Monday as a result of positive global cues, Dollar Tumbles. Will it Climb to a New Peak?. Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X