ಭಾರತದಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಮಲ್ಟಿ ಕಮೋಡಿಟಿಸ್ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) ಚಿನ್ನದ ದರವು ಸೋಮವಾರ ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಹಳದಿ ಲೋಹದ ದರವು ಹತ್ತು ಗ್ರಾಮ್‌ಗೆ 60,000 ರೂಪಾಯಿಯನ್ನು ದಾಟಿದೆ. ಇಂದು (ಮಾರ್ಚ್ 21) ಭಾರತದಲ್ಲಿ ಚಿನ್ನದ ದರವು ಹೆಚ್ಚಳವಾಗಿದೆ. ಅದರಲ್ಲೂ ಮುಖ್ಯವಾಗಿ ಕಳೆದ 10 ದಿನದಲ್ಲಿ ಬಂಗಾರ ದರ 7 ಬಾರಿ ಏರಿಕೆಯಾಗಿದೆ. ಆದರೆ ಬರೀ 2 ಬಾರಿ ಮಾತ್ರ ಇಳಿಕೆಯಾಗಿದೆ. ಒಂದು ಬಾರಿ ಸ್ಥಿರತೆ ಕಂಡಿದೆ. ನಿನ್ನೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದ್ದರೂ ಭಾರತದಲ್ಲಿ 500 ರೂಪಾಯಿ ಇಳಿದಿತ್ತು. ಆದರೆ ಮಾರ್ಚ್ 21ರಂದು 200 ರೂಪಾಯಿ ಏರಿಕೆಯಾಗಿದೆ.
ನಿನ್ನೆ ಏರಿಕೆಯಾಗಿದ್ದಎಂಸಿಎಕ್ಸ್ ದರ ಇಂದು ಇಳಿಕೆಯಾಗಿದೆ. ಮಾರ್ಚ್ 21, 2023ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗ್ಗಿದ್ದು 59200.00 ರೂಪಾಯಿ ಆಗಿದೆ. ಬೆಳ್ಳಿ ಹೆಚ್ಚಳವಾಗಿದ್ದು 68645.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.54ರಷ್ಟು ಕುಗ್ಗಿದ್ದು 1,965.97 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.62ರಷ್ಟು ಇಳಿಕೆಯಾಗಿದ್ದು 22.37 ಯುಎಸ್ ಡಾಲರ್ ಆಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಕಳೆದ ಹತ್ತು ದಿನದಲ್ಲಿ ಚಿನ್ನ ದರ ಹೇಗಿದೆ
ಹಲವಾರು ದಿನಗಳಿಂದ ಚಿನ್ನದ ದರವು ಏರಿಳಿತ ಕಂಡು ಬರುತ್ತಿದೆ. ಕಳೆದ ಐದು ದಿನದಲ್ಲಿ ಮೂರು ಬಾರಿ ಗೋಲ್ಡ್ ರೇಟ್ ಹೆಚ್ಚಾಗಿದ್ದು, 1 ಬಾರಿ ಇಳಿದಿದೆ. ಒಂದು ಬಾರಿ ಸ್ಥಿರತೆ ಕಾಯ್ದುಕೊಂಡಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ ಬರೋಬ್ಬರಿ 7 ಬಾರಿ ಏರಿಕೆಯಾಗಿದೆ. 2 ಬಾರಿ ಮಾತ್ರ ಇಳಿಕೆಯಾಗಿದೆ. 1 ಬಾರಿ ಮಾತ್ರ ಸ್ಥಿರತೆ ಕಾಯ್ದುಕೊಂಡಿದೆ. ಬೆಳ್ಳಿ ದರವು ಇಂದು ಮತ್ತೆ ಏರಿಕೆಯಾಗಿದೆ ಕಳೆದ ಹತ್ತು ದಿನದಲ್ಲಿ 7 ಬಾರಿ ಬೆಳ್ಳಿ ಬೆಲೆ ಏರಿದ್ದು 1 ಬಾರಿ ಇಳಿದಿದೆ. 2 ಬಾರಿ ಮಾತ್ರ ಸ್ಥಿರವಾಗಿದೆ.
ಇಂದಿನ ಚಿನ್ನದ ದರ ಎಷ್ಟಿದೆ ನೋಡಿ?
10 ದಿನದಲ್ಲಿ 7 ದಿನ ಚಿನ್ನದ ಬೆಲೆಯು ಏರಿಕೆಯಾಗಿದೆ. ಮಾರ್ಚ್ 21ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 200 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 55,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 220 ರೂಪಾಯಿ ಹಿಗ್ಗಿದ್ದು ಪ್ರಸ್ತುತ 60,000 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 100 ರೂಪಾಯಿ ಹಿಗ್ಗಿದ್ದು ಪ್ರಸ್ತುತ 72,100 ರೂಪಾಯಿ ಆಗಿದೆ.
ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ ದರ?
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,050 ರೂಪಾಯಿ
24 ಕ್ಯಾರೆಟ್ ಚಿನ್ನ: 60,050 ರೂಪಾಯಿ
ಮುಂಬೈ
22 ಕ್ಯಾರೆಟ್ ಚಿನ್ನ: 55,000 ರೂಪಾಯಿ
24 ಕ್ಯಾರೆಟ್ ಚಿನ್ನ: 60,000 ರೂಪಾಯಿ
ದೆಹಲಿ
22 ಕ್ಯಾರೆಟ್ ಚಿನ್ನ: 55,150 ರೂಪಾಯಿ
24 ಕ್ಯಾರೆಟ್ ಚಿನ್ನ: 60,150 ರೂಪಾಯಿ
ಕೇರಳ
22 ಕ್ಯಾರೆಟ್ ಚಿನ್ನ: 55,000 ರೂಪಾಯಿ
24 ಕ್ಯಾರೆಟ್ ಚಿನ್ನ: 60,000 ರೂಪಾಯಿ
ಮಂಗಳೂರು
22 ಕ್ಯಾರೆಟ್ ಚಿನ್ನ: 55,050 ರೂಪಾಯಿ
24 ಕ್ಯಾರೆಟ್ ಚಿನ್ನ: 60,050 ರೂಪಾಯಿ
ಮೈಸೂರು
22 ಕ್ಯಾರೆಟ್ ಚಿನ್ನ: 55,050 ರೂಪಾಯಿ
24 ಕ್ಯಾರೆಟ್ ಚಿನ್ನ: 60,050 ರೂಪಾಯಿ


Click it and Unblock the Notifications