ಸರ್ಕಾರ ನೆರವು ನೀಡದಿದ್ದರೆ ಉದ್ಯೋಗಿಗಳ ವಜಾ ಅನಿವಾರ್ಯ: ಕೈಗಾರಿಕಾ ಸಂಘಟನೆಗಳು

ದೇಶದಲ್ಲಿ ಮೇ 3ರವರೆಗೆ ಲಾಕ್‌ಡೌನ್ ಮುಂದುವರಿದಿದ್ದರಿಂದ ಬಹುತೇಕ ಎಲ್ಲಾ ಉದ್ಯಮಗಳು ಮತ್ತಷ್ಟು ಆಘಾತ ಎದುರಿಸಲಿದ್ದು, ಕೈಗಾರಿಕೆಗಳು ಕೂಡ ಭಾರೀ ನಷ್ಟ ಅನುಭವಿಸಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನೆರವನ್ನು ಎದುರು ನೋಡುತ್ತಿರುವ ಕಾರ್ಖಾನೆಗಳು ಸರ್ಕಾರ ಕೈ ಹಿಡಿಯದಿದ್ರೆ ಉದ್ಯೋಗಿಗಳ ವೇತನ ಕಡಿತ ಮತ್ತು ವಜಾ ಅನಿವಾರ್ಯ ಎನ್ನುವ ಮಟ್ಟಿಗೆ ತಲುಪಿವೆ.

ಲಾಕ್‌ಡೌನ್ ಕಾರಣ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಬೇಡಿ, ವೇತನ ಕಡಿತಗೊಳಿಸಬೇಡಿ, ಕಾರ್ಮಿಕರಿಗೆ ಅಗತ್ಯ ನೆರವು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಉದ್ದಿಮೆ ಮತ್ತು ಕೈಗಾರಿಕಾ ವಲಯಕ್ಕೆ ಮನವಿ ಮಾಡಿದರು. ಆದರೆ ಸರ್ಕಾರದ ಹಣಕಾಸಿನ ನೆರವು ದೊರೆಯದಿದ್ದರೆ ಪ್ರಧಾನಿ ಮಾತನ್ನು ಕೇಳದ ಪರಿಸ್ಥಿತಿ ಉದ್ಭವವಾಗಲಿದೆ.

ಸರ್ಕಾರ ನೆರವು ನೀಡದಿದ್ದರೆ ಉದ್ಯೋಗಿಗಳ ವಜಾ ಅನಿವಾರ್ಯ

21 ದಿನಗಳ ಲಾಕ್‌ಡೌನ್ ಜೊತೆಗೆ ಮತ್ತೆ ವಿಸ್ತರಣೆಯಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಉದ್ದಿಮೆಗಳಿಗೆ ವರಮಾನವೇ ಇಲ್ಲದಂತಾಗಿದೆ. ವಾಸ್ತವ ಪರಿಸ್ಥಿತಿ ಅರಿಯಲು ಕೈಗಾರಿಕಾ ಸಂಘಟನೆಗಳು ಸರ್ಕಾರದ ಗಮನಕ್ಕೆ ತಂದಿವೆ. ತಮ್ಮಿಂದ ವೇತನ ನೀಡಲು ಸಾಧ್ಯವಾಗದ ಕಾರಣಕ್ಕೆ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದು ಅನಿರ್ಯಾವಾಗಲಿದೆ ಎಂದು ಉದ್ದಿಮೆಗಳ ಮಾಲೀಕರು ಅಳಲು ತೋಡಿಗೊಂಡಿದ್ದಾರೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಕನಿಷ್ಟ ಆರು ತಿಂಗಳಾದರೂ 50 ಪರ್ಸೆಂಟ್ ವೇತನ ಪಾವತಿಸಬೇಕು ಇಎಸ್ಐ ಹಾಗೂ ಪಿಎಫ್ ಹಣವನ್ನು ಸರ್ಕಾರವೇ ಭರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+