For Quick Alerts
ALLOW NOTIFICATIONS  
For Daily Alerts

ಏನಿದು ಉದ್ಯೋಗ ಆಧಾರ್, ಪಡೆಯುವುದು ಹೇಗೆ?, ಇಲ್ಲಿದೆ ಪ್ರಮುಖ ಮಾಹಿತಿ

|

ಆಧಾರ್ ಕಾರ್ಡ್ ಎಂಬುವುದು ಪ್ರಸ್ತುತ ಅತೀ ಅಗತ್ಯ ದಾಖಲೆಯಾಗಿದೆ. ನಮ್ಮ ಜೀವನದ ಎಲ್ಲ ಘಟ್ಟಗಳಲೂ ಕೇಳಲಾಗುವ ಪ್ರಮುಖ ದಾಖಲೆ ಆಧಾರ್ ಕಾರ್ಡ್ ಆಗಿದೆ. ಹಾಗೆಯೇ ನಮ್ಮ ಪ್ಯಾನ್, ರೇಷನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ವಿಮೆ ಮೊದಲಾದ ಎಲ್ಲ ದಾಖಲೆಗಳಿಗೂ ಪ್ಯಾನ್ ಲಿಂಕಿಂಗ್ ಕಡ್ಡಾಯವಾಗಿದೆ. ಆದರೆ ನಿಮಗೆ ಉದ್ಯೋಗ ಆಧಾರ್ ಬಗ್ಗೆ ತಿಳಿದಿದೆಯೇ?

ಈ ಲೇಖನವನ್ನು ಓದುತ್ತಿರುವವರು ಖಂಡಿತವಾಗಿಯೂ ಆಧಾರ್ ಕಾರ್ಡ್ ಎಂದರೆ ಏನು ಎಂದು ತಿಳಿದಿರುತ್ತಾರೆ. ಯಾಕೆಂದರೆ ಆಧಾರ್ ಕಾರ್ಡ್ ಪ್ರಸ್ತುತ ನಮ್ಮ ಜೀವನದ ಪ್ರಮುಖ ದಾಖಲೆಯಾಗಿದೆ. ಆದರೆ ನಿಮಗೆ ಉದ್ಯೋಗ ಆಧಾರ್ ಎಂದರೆ ಏನು, ಅದನ್ನು ಯಾಕೆ ಬಳಕೆ ಮಾಡಲಾಗುತ್ತದೆ ಎಂಬುವುದು ತಿಳಿಯದೆ ಇರಬಹುದು.

ಆಧಾರ್ ಕಾರ್ಡ್ ಇಲ್ಲದೆಯೇ ಸಬ್ಸಿಡಿಗಳನ್ನು ಪಡೆಯುವುದು ಹೇಗೆ?ಆಧಾರ್ ಕಾರ್ಡ್ ಇಲ್ಲದೆಯೇ ಸಬ್ಸಿಡಿಗಳನ್ನು ಪಡೆಯುವುದು ಹೇಗೆ?

ಏನಿದು ಉದ್ಯೋಗ ಆಧಾರ್, ಇದರಿಂದ ಏನು ಪ್ರಯೋಜನ, ಯಾಕೆ ಇದನ್ನು ಬಳಕೆ ಮಾಡಲಾಗುತ್ತದೆ, ಇದರ ಮಾನದಂಡವೇನು ಎಂಬ ಮೊದಲಾದ ಅನುಮಾನಗಳು ನಿಮ್ಮನ್ನು ಕಾಡಬಹುದು. ಇದಕ್ಕೆ ಉತ್ತರ ಇಲ್ಲಿದೆ ಮುಂದೆ ಓದಿ...

 ಉದ್ಯೋಗ ಆಧಾರ್ ಎಂದರೇನು?

ಉದ್ಯೋಗ ಆಧಾರ್ ಎಂದರೇನು?

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ (ಎಂಎಸ್‌ಎಂಇ) ಸಚಿವಾಲಯವು ನೀಡುವ ವಿಶಿಷ್ಠ ಗುರುತಿನ ಸಂಖ್ಯೆಯೇ ಉದ್ಯೋಗ ಆಧಾರ್ ಆಗಿದೆ. ಈ ಉದ್ಯೋಗ ಎಂಬ ಪದವನ್ನು ಪ್ರಸ್ತುತ ಉದ್ಯಮ ಎಂದು ಬದಲಾವಣೆ ಮಾಡಲಾಗಿದೆ. ನೀವು ಈ ಉದ್ಯಮ ಪ್ರಮಾಣ ಪತ್ರ ಅಥವಾ ಉದ್ಯೋಗ ಆಧಾರ್ ಅನ್ನು ಪಡೆಯಬೇಕಾದರೆ ಉದ್ಯಮ ರಿಜಿಸ್ಟ್ರೇಷನ್ ಫೋರ್ಟಲ್‌ನಲ್ಲಿ ರಿಜಿಸ್ಟರ್ ಮಾಡುವುದು ಮುಖ್ಯವಾಗಿದೆ. ಇನ್ನು ಸರಳವಾಗಿ ಹೇಳುವುದಾದರೆ ಒಂಬ ವ್ಯಕ್ತಿಯ ಗುರುತನ್ನು ದೃಢೀಕರಿಸಲು ಇರುವ ಆಧಾರ್ ಕಾರ್ಡ್‌ನಂತೆಯೇ ವ್ಯಕ್ತಿಯ ಉದ್ಯಮವನ್ನು ದೃಢೀಕರಿಸುವ ವ್ಯವಸ್ಥೆ ಇದಾಗಿದೆ.

ಕೆಲವೇ ಕ್ಲಿಕ್‌ನಲ್ಲಿ ಸಮೀಪದ ಆಧಾರ್ ಕೇಂದ್ರ ಪತ್ತೆ ಹಚ್ಚುವುದು ಹೇಗೆ?ಕೆಲವೇ ಕ್ಲಿಕ್‌ನಲ್ಲಿ ಸಮೀಪದ ಆಧಾರ್ ಕೇಂದ್ರ ಪತ್ತೆ ಹಚ್ಚುವುದು ಹೇಗೆ?

 ಉದ್ಯೋಗ ಆಧಾರ್ ಕಾರ್ಡ್ ಅನ್ನು ಪಡೆಯುವುದು ಹೇಗೆ?
 

ಉದ್ಯೋಗ ಆಧಾರ್ ಕಾರ್ಡ್ ಅನ್ನು ಪಡೆಯುವುದು ಹೇಗೆ?

ನೀವು ಉದ್ಯೋಗ ಆಧಾರ್ ಕಾರ್ಡ್‌ಗೆ ರಿಜಿಸ್ಟರ್ ಮಾಡುವ ಮುನ್ನ ನಿಮ್ಮ ಕೈಯಲ್ಲಿ ಆಧಾರ್ ಕಾರ್ಡ್ ಅನ್ನು ಹೊಂದಿರುವುದು ಮುಖ್ಯವಾಗಿದೆ. ನೀವು ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ ಮೊದಲು ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿ.

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಆಧಾರ್ ಕಾರ್ಡ್ ವಿವರ ಭರ್ತಿ ಮಾಡಿ
ಹಂತ 2: ಬಾಕ್ಸ್ ಮೇಲೆ ಚೆಕ್ ಮಾಡಿ Validate and Generate OTP ಮೇಲೆ ಕ್ಲಿಕ್ ಮಾಡಿ
ಹಂತ 3: ಒಟಿಪಿ ಹಾಕಿದ ಬಳಿಕ ಪೇಜ್‌ಗೆ ರಿಡೈರೆಕ್ಟ್ ಆಗಲಿದೆ
ಹಂತ 4: ಅಗತ್ಯ ದಾಖಲೆಗಳನ್ನು ಹಾಕಿ, ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ
ಹಂತ 5: ಸ್ಕ್ರೋಲ್ ಡೌನ್ ಮಾಡಿ, Submit ಮೇಲೆ ಕ್ಲಿಕ್ ಮಾಡಿ
ಹಂತ 6: ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ ಇನ್ನೊಂದು ಒಟಿಪಿ ಬರಲಿದೆ
ಹಂತ 7: ಒಟಿಪಿ ಹಾಕಿ Submit ಮೇಲೆ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ

 ಉದ್ಯೋಗ ಆಧಾರ್‌ಗೆ ಬೇಕಾದ ದಾಖಲೆಗಳು ಯಾವುದು?

ಉದ್ಯೋಗ ಆಧಾರ್‌ಗೆ ಬೇಕಾದ ದಾಖಲೆಗಳು ಯಾವುದು?

* ಆಧಾರ್ ಕಾರ್ಡ್
* ಮಾಲೀಕರ ಹೆಸರು
* ಅರ್ಜಿ ಸಲ್ಲಿಕೆ ಮಾಡುವವರ ವರ್ಗ
* ಉದ್ಯಮದ ಹೆಸರು
* ಸಂಸ್ಥೆಯ ಬಗ್ಗೆ ಮಾಹಿತಿ
* ಬ್ಯಾಂಕ್ ವಿವರ
* ನ್ಯಾಷನಲ್ ಇಂಡಸ್ಟ್ರಿಯಲ್ ಕ್ಲಾಸಿಫಿಕೇಷನ್ ಕೋಡ್
* ಉದ್ಯೋಗದಲ್ಲಿರುವ ವ್ಯಕ್ತಿಗಳ ಸಂಖ್ಯೆ
* ಜಿಲ್ಲಾವಾರು ಎಷ್ಟು ಕೇಂದ್ರಗಳು ಇವೆ ಎಂಬ ಮಾಹಿತಿ
* ಉದ್ಯಮ ಆರಂಭ ಮಾಡಿದ ದಿನಾಂಕ

 

 ಉದ್ಯೋಗ ಆಧಾರ್‌ನಿಂದಾಗುವ ಪ್ರಯೋಜನ

ಉದ್ಯೋಗ ಆಧಾರ್‌ನಿಂದಾಗುವ ಪ್ರಯೋಜನ

* ಉಚಿತ ನೋಂದಣಿ ಪ್ರಕ್ರಿಯೆ
* ಬಹು ಉದ್ಯೋಗ ಆಧಾರ್ ಅರ್ಜಿ ಸಲ್ಲಿಕೆಗೆ ಅವಕಾಶ
* ಸ್ವಯಂ ಘೋಷಣೆ ಸೌಲಭ್ಯ ಲಭ್ಯ
* ಸಬ್ಸಿಡಿ ದರಗಳಲ್ಲಿ ಸಾಲ ಪಡೆಯುವ ಅವಕಾಶ
* ಸುಲಭವಾಗಿ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ

English summary

Udyog Aadhar Registration, Features, Eligibility Criteria, Documents Required, Benefits in Kannada

What is Udyog Aadhar? Know Registration process, Eligibility Criteria, Documents Required, Features and Benefits in Kannada. Read on
Story first published: Friday, August 19, 2022, 13:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X