ಭಾರತದ MSME ನೆರವಿಗೆ 5,625 ಕೋಟಿಗೂ ಹೆಚ್ಚು ಸಾಲ ನೀಡಿದ ವಿಶ್ವ ಬ್ಯಾಂಕ್

ವಿಶ್ವ ಬ್ಯಾಂಕ್ ನಿಂದ ಭಾರತಕ್ಕೆ 75 ಕೋಟಿ ಅಮೆರಿಕನ್ ಡಾಲರ್ ಮಂಜೂರಾಗಿದೆ. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ 5,625 ಕೋಟಿಗಿಂತ ಹೆಚ್ಚು ಮೊತ್ತ. ಕೊರೊನಾ ಬಿಕ್ಕಟ್ಟಿನಿಂದ ಗಂಭೀರವಾದ ಸಮಸ್ಯೆಗೆ ಸಿಲುಕಿಕೊಂಡಿರುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಂಸ್ಥೆಗಳಿಗೆ (MSME) ಸಾಲ ನೀಡುವ ಉದ್ದೇಶಕ್ಕೆ ಭಾರತಕ್ಕೆ ಮಂಜೂರು ಮಾಡಿರುವ ಮೊತ್ತ ಇದು.

ಭಾರತದ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಎಂಎಸ್ ಎಂಇ ವಲಯ ಬಹಳ ಮುಖ್ಯವಾದದ್ದು. ಭಾರತದ ಆರ್ಥಿಕ ಚೇತರಿಕೆಗೂ ಇದು ಬಹಳ ಮುಖ್ಯ ಎಂದು ಭಾರತಕ್ಕೆ ವಿಶ್ವ ಬ್ಯಾಂಕ್ ನಿರ್ದೇಶಕರಾಗಿರುವ ಜುನೈದ್ ಅಹ್ಮದ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾಧ್ಯಮದವರಿಗೆ ಹೇಳಿದ್ದಾರೆ.

MSME ನೆರವಿಗೆ 5,625 ಕೋಟಿಗೂ ಹೆಚ್ಚು ಸಾಲ ನೀಡಿದ ವಿಶ್ವ ಬ್ಯಾಂಕ್

ಈ ಬಗ್ಗೆ ಹೇಳಿಕೆ ನೀಡಿರುವ ವಿಶ್ವ ಬ್ಯಾಂಕ್, ಈ ಸಾಲವನ್ನು ನೀಡುತ್ತಿರುವುದು ಇಂಟರ್ ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ ಸ್ಟ್ರಕ್ಷನ್ ಅಂಡ್ ಡೆವಲಪ್ ಮೆಂಟ್ (ಐಬಿಆರ್ ಡಿ). ಇದು ವಿಶ್ವಬ್ಯಾಂಕ್ ನ ಖಾಸಗಿ ಅಂಗ ಸಂಸ್ಥೆ. 19 ವರ್ಷಕ್ಕೆ ಇದರ ಮೆಚ್ಯೂರಿಟಿ ಅವಧಿ. ಇದರಲ್ಲಿ 5 ವರ್ಷದ ವಿನಾಯಿತಿ ಅವಧಿಯೂ ಸೇರಿದೆ ಎಂದು ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+