ಸತತವಾಗಿ ಇಳಿಕೆ ಕಂಡಿದ್ದ ಚಿನ್ನದ ದರವು ಕಳೆದ ನಾಲ್ಕು ದಿನದಲ್ಲೇ ಭಾರೀ ಹೆಚ್ಚಳವಾಗುತ್ತಿದೆ. ಸೋಮವಾರವು ಎಂಸಿಎಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ದರವು ಏರಿಕೆಯಾಗಿದೆ. ಏಪ್ರಿಲ್ ಗೋಲ್ಡ್ ಫ್ಯೂಚರ್ಸ್ ಪ್ರತಿ ಹತ್ತು ಗ್ರಾಂಗೆ 56,594 ರೂಪಾಯಿಯಂತಿದೆ. ಇದು 9:40ರ ದರವಾಗಿದ್ದು ಶುಕ್ರವಾರದ ವಹಿವಾಟಿನ ಅಂತ್ಯದ ಬೆಲೆಯಿಂದ ಶೇಕಡ 0.79ರಷ್ಟು ಅಥವಾ 444 ರೂಪಾಯಿಯಷ್ಟು ಏರಿಕೆಯಾಗಿದೆ.
ಇನ್ನು ಬೆಳ್ಳಿ ಫ್ಯೂಚರ್ಸ್ ಶುಕ್ರವಾರದ ವಹಿವಾಟಿನ ಅಂತ್ಯದ ಬೆಲೆಯಿಂದ ಶೇಕಡ 1.21ರಷ್ಟು ಅಥವಾ 760 ರೂಪಾಯಿ ಏರಿಕೆಯಾಗಿ, 63,650 ರೂಪಾಯಿಗೆ ತಲುಪಿದೆ. ಗೋಲ್ಡ್ ಫ್ಯೂಚರ್ಸ್ ವರ್ಷದಿಂದ ವರ್ಷಕ್ಕೆ ಶೇಕಡ 3ರಷ್ಟು ಹೆಚ್ಚಳವಾಗಿದೆ. ವರ್ಷದಿಂದ ವರ್ಷಕ್ಕೆ ನೋಡಿದಾಗ ಬೆಳ್ಳಿ ಫ್ಯೂಚರ್ಸ್ ಶೇಕಡ 7.50ರಷ್ಟು ಇಳಿಕೆಯಾಗಿದೆ. ಭಾರತದ ಹಲವಾರು ನಗರಗಳಲ್ಲಿ ಬಂಗಾರ ದರ ಏರಿಕೆಯಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಸತತ 4 ದಿನಗಳಿಂದ ಚಿನ್ನದ ಬೆಲೆಯು ಏರಿಕೆಯಾಗುತ್ತಿದೆ. ಫೆಬ್ರವರಿ 13ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 290 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 52,450 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 330 ರೂಪಾಯಿ ಹಿಗ್ಗಿದ್ದು ಪ್ರಸ್ತುತ 57,220 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 300 ರೂಪಾಯಿ ಹಿಗ್ಗಿದ್ದು ಪ್ರಸ್ತುತ 66,000 ರೂಪಾಯಿ ಆಗಿದೆ.
ಎಂಸಿಎಕ್ಸ್‌ನಲ್ಲಿ ವಹಿವಾಟು ಹೇಗಿದೆ?
ಫೆಬ್ರವರಿ 13ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು 56888.00 ರೂಪಾಯಿ ಆಗಿದೆ. ಬೆಳ್ಳಿ ಹೆಚ್ಚಳವಾಗಿದ್ದು 63791.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.65ರಷ್ಟು ಹಿಗ್ಗಿದ್ದು 1,888.43 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.83ರಷ್ಟು ಏರಿಕೆಯಾಗಿದ್ದು 20.82 ಯುಎಸ್ ಡಾಲರ್ ಆಗಿದೆ.
ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ ದರ?
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 52,500 ರೂಪಾಯಿ
24 ಕ್ಯಾರೆಟ್ ಚಿನ್ನ: 57,270 ರೂಪಾಯಿ
ಮುಂಬೈ
22 ಕ್ಯಾರೆಟ್ ಚಿನ್ನ: 52,450 ರೂಪಾಯಿ
24 ಕ್ಯಾರೆಟ್ ಚಿನ್ನ: 57,220 ರೂಪಾಯಿ
ದೆಹಲಿ
22 ಕ್ಯಾರೆಟ್ ಚಿನ್ನ: 56,600 ರೂಪಾಯಿ
24 ಕ್ಯಾರೆಟ್ ಚಿನ್ನ: 57,370 ರೂಪಾಯಿ
ಕೇರಳ
22 ಕ್ಯಾರೆಟ್ ಚಿನ್ನ: 52,450 ರೂಪಾಯಿ
24 ಕ್ಯಾರೆಟ್ ಚಿನ್ನ: 57,220 ರೂಪಾಯಿ
ಮಂಗಳೂರು
22 ಕ್ಯಾರೆಟ್ ಚಿನ್ನ: 52,500 ರೂಪಾಯಿ
24 ಕ್ಯಾರೆಟ್ ಚಿನ್ನ: 57,270 ರೂಪಾಯಿ
ಮೈಸೂರು
22 ಕ್ಯಾರೆಟ್ ಚಿನ್ನ: 52,500 ರೂಪಾಯಿ
24 ಕ್ಯಾರೆಟ್ ಚಿನ್ನ: 57,270 ರೂಪಾಯಿ


Click it and Unblock the Notifications