ಚಿನ್ನವು ಎಂದಿಗೂ ಕೂಡಾ ವಿಶ್ವದಾದ್ಯಂತ ಒಂದು ಆಕರ್ಷಕ ಲೋಹವಾಗಿ ಉಳಿದಿದೆ. ಸಾಮಾನ್ಯ ಜನರಾಗಿರಲಿ ಅಥವಾ ಶ್ರೀಮಂತರು ಆಗಿರಲಿ ಚಿನ್ನವನ್ನು ಖರೀದಿ ಮಾಡುವುದರಲ್ಲಿ ಎಂದಿಗೂ ಹಿಂಜರಿಯುವುದಿಲ್ಲ. ಎಲ್ಲ ದೇಶಗಳು ಕೂಡಾ ಚಿನ್ನದ ನಿಕ್ಷೇಪವನ್ನು ಹೊಂದಿರುತ್ತದೆ. ಅಧಿಕ ಚಿನ್ನದ ನಿಕ್ಷೇಪ ಹೊಂದಿರುವ ಟಾಪ್ 10 ರಾಷ್ಟ್ರಗಳ ಪಟ್ಟಿಯನ್ನು ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಬಿಡುಗಡೆ ಮಾಡಿದೆ.
ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಇತ್ತೀಚೆಗೆ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ವಿಶ್ವದಾದ್ಯಂತ ರಾಷ್ಟ್ರಗಳು ಹೊಂದಿರುವ ಚಿನ್ನದ ನಿಕ್ಷೇಪಗಳ ಪಟ್ಟಿಯನ್ನು ಜಾರಿ ಮಾಡಿದೆ. ಚಿನ್ನದ ನಿಕ್ಷೇಪಗಳ ವಿಷಯದಲ್ಲಿ ಅಗ್ರ ಶ್ರೇಯಾಂಕದ ರಾಷ್ಟ್ರಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಜರ್ಮನಿ, ಇಟಲಿ, ಫ್ರಾನ್ಸ್, ರಷ್ಯಾ, ಚೀನಾ, ಸ್ವಿಟ್ಜರ್‌ಲ್ಯಾಂಡ್, ಜಪಾನ್, ಭಾರತ ಮತ್ತು ನೆದರ್ಲ್ಯಾಂಡ್ಸ್ ಇದೆ.

ಟಾಪ್ 10 ದೇಶಗಳ ವಿವರ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ಅತೀ ಅಧಿಕ ಚಿನ್ನದ ನಿಕ್ಷೇಪವನ್ನು ಹೊಂದಿರುವ ದೇಶವಾಗಿದೆ. ಅಮೇರಿಕಾದಲ್ಲಿ 8,133 ಟನ್ ಚಿನ್ನದ ನಿಕ್ಷೇಪಗಳನ್ನು ಹೊಂದಿದೆ. ಫೆಡರಲ್ ರಿಸರ್ವ್‌ನಲ್ಲಿರುವ ಅಧಿಕವಾಗಿ ಚಿನ್ನದ ನಿಕ್ಷೇಪವು ಅದರ ಆರ್ಥಿಕ ಶಕ್ತಿ ಎಷ್ಟಿದೆ ಎಂಬುವುದನ್ನು ಒತ್ತಿಹೇಳುತ್ತವೆ.
ಅಮೇರಿಕಾದ ನಂತರ ಜರ್ಮನಿಯು ನಂತರದ ಸ್ಥಾನದಲ್ಲಿದೆ. ಜರ್ಮನಿಯಲ್ಲಿ 3,355 ಮೆಟ್ರಿಕ್ ಟನ್ ಚಿನ್ನವನ್ನು ಹೊಂದಿದೆ. ಅಂದರೆ ಜರ್ಮನಿಯು ಹಣಕಾಸಿನ ಅನಿಶ್ಚಿತತೆಗಳನ್ನು ಎದುರಿಸಲು ಸಮರ್ಥವಾದ ದೇಶವಾಗಿದೆ. ಅಧಿಕ ಚಿನ್ನದ ನಿಕ್ಷೇಪ ಹೊಂದಿರುವ ದೇಶದ ಪಟ್ಟಿಯಲ್ಲಿ ಇಟಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು, ಇಟಲಿ ದೇಶದಲ್ಲಿ 2,452 ಮೆಟ್ರಿಕ್ ಟನ್ ಚಿನ್ನದ ನಿಕ್ಷೇಪವಿದೆ.
ಇನ್ನು ನಾಲ್ಕನೇ ಸ್ಥಾನದಲ್ಲಿರುವ ಫ್ರಾನ್ಸ್ 2,437 ಮೆಟ್ರಿಕ್ ಟನ್ ಚಿನ್ನದ ನಿಕ್ಷೇಪವನ್ನು ಹೊಂದಿದೆ. ರಷ್ಯಾ 2,330 ಮೆಟ್ರಿಕ್ ಟನ್ ಚಿನ್ನವನ್ನು ಹೊಂದಿದ್ದು, ರಷ್ಯಾ ಐದನೇ ಸ್ಥಾನದಲ್ಲಿದೆ. ಚೀನಾವು 2,113 ಮೆಟ್ರಿಕ್ ಟನ್‌ಗಳಷ್ಟು ಹಳದಿ ಲೋಹದ ನಿಕ್ಷೇಪವನ್ನು ಹೊಂದಿದ್ದು, ಆರನೇ ಅತ್ಯಧಿಕ ಚಿನ್ನದ ನಿಕ್ಷೇಪವನ್ನು ಹೊಂದಿರುವ ದೇಶವಾಗಿದೆ. ಸ್ವಿಟ್ಜರ್‌ಲ್ಯಾಂಡ್ 1,040 ಮೆಟ್ರಿಕ್ ಟನ್‌ಗಳನ್ನು ಹೊಂದಿದ್ದು, ಏಳನೇ ಸ್ಥಾನವನ್ನು ಪಡೆದುಕೊಂಡಿದೆ.
ಜಪಾನ್ 8 ನೇ ಸ್ಥಾನದಲ್ಲಿದ್ದು 846 ಮೆಟ್ರಿಕ್ ಟನ್‌ಗಳಷ್ಟು ಚಿನ್ನದ ನಿಕ್ಷೇಪವನ್ನು ಹೊಂದಿದೆ. ಒಂಬತ್ತನೇ ಸ್ಥಾನದಲ್ಲಿ ನಮ್ಮ ಭಾರತ ದೇಶವಿದ್ದು, 797 ಮೆಟ್ರಿಕ್ ಟನ್ ಚಿನ್ನವನ್ನು ಹೊಂದಿದೆ. ಸುಮಾರು 612 ಮೆಟ್ರಿಕ್ ಟನ್ ಚಿನ್ನದ ನಿಕ್ಷೇಪವನ್ನು ಹೊಂದಿರುವ ನೆದರ್‌ಲ್ಯಾಂಡ್ ಹತ್ತನೇ ಸ್ಥಾನವನ್ನು ಹೊಂದಿದೆ.
ಭಾರತದಲ್ಲಿ ಚಿನ್ನದ ಪ್ರಾಮುಖ್ಯತೆಯು ಆರ್ಥಿಕ ಪರಿಗಣನೆಗಳನ್ನು ಮೀರಿದೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಭಾರತವು ಹೊಂದಿದೆ. ಅಲಂಕರಣ ಮತ್ತು ಹೂಡಿಕೆ ಉದ್ದೇಶಗಳಿಗಾಗಿ ಚಿನ್ನವನ್ನು ಆಮದು ಮಾಡಿಕೊಳ್ಳುವ ವಿಶ್ವದ ಅತ್ಯಂತ ಮಹತ್ವದ ಗ್ರಾಹಕರಲ್ಲಿ ಭಾರತ ದೇಶವು ಕೂಡಾ ಒಂದಾಗಿದೆ.
ಈ ಪಟ್ಟಿಯಲ್ಲಿ ಭಾರತದ ಉಪಸ್ಥಿತಿಯು ಚಿನ್ನದೊಂದಿಗೆ ದೇಶದ ಸಂಕೀರ್ಣ ಸಂಪರ್ಕಕ್ಕೆ ಸಾಕ್ಷಿಯಾಗಿದೆ. ಕೇವಲ ಆರ್ಥಿಕ ಮೌಲ್ಯವನ್ನು ಮಾತ್ರವಲ್ಲದೆ ಸಾಂಸ್ಕೃತಿಕ ಗೌರವ ಮತ್ತು ಧಾರ್ಮಿಕ ಆಚರಣೆಗಳನ್ನೂ ಒಳಗೊಂಡಿದೆ. ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಪ್ರಮುಖ ದೇಶವಾಗಿರುವ ಭಾರತವು ಎಂದಿಗೂ ತನ್ನ ಪಾತ್ರವನ್ನು ಎತ್ತಿ ತೋರಿಸುತ್ತದೆ. ದೇಶದಲ್ಲಿ ಹಳದಿ ಲೋಹವು ಆರ್ಥಿಕತೆಯನ್ನು ಮೀರಿ ರಾಷ್ಟ್ರದ ಗುರುತಿನ ಅವಿಭಾಜ್ಯ ಅಂಗವಾಗಿದೆ.


Click it and Unblock the Notifications