ಉಚಿತ ಬಸ್ ಪ್ರಯಾಣ, ಇನ್ನೂರು ಯೂನಿಟ್ ತನಕ ಉಚಿತ ವಿದ್ಯುತ್ ಇನ್ನೂ ಏನೇನು?

ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪ್ರಯಾಣ, ಮಹಿಳೆಯರ ಭದ್ರತೆಗಾಗಿ 'ಮೊಹಲ್ಲಾ ಮಾರ್ಷಲ್'ಗಳ ನೇಮಕ ಸೇರಿದಂತೆ ಆಮ್ ಆದ್ಮಿ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಮುನ್ನ ಹತ್ತು ಭರವಸೆಗಳನ್ನು ನೀಡಲಾಗಿದೆ. ಸದ್ಯಕ್ಕೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯೇ ದೆಹಲಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದು, ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದೆ.

'ಗ್ಯಾರಂಟಿ ಕಾರ್ಡ್' ಹೆಸರಿನಲ್ಲಿ ಈ ಭರವಸೆಗಳನ್ನು ಬಿಡುಗಡೆ ಮಾಡಿದ್ದು, ಇನ್ನೂರು ಯೂನಿಟ್ ತನಕ ಉಚಿತ ವಿದ್ಯುತ್, ಉಚಿತ ಆರೋಗ್ಯ ತಪಾಸಣೆ, ಮುಂದಿನ ಐದು ವರ್ಷಗಳಲ್ಲಿ ದೆಹಲಿಯಲ್ಲಿ ಎರಡು ಕೋಟಿ ಸಸಿಗಳನ್ನು ನೆಡುವುದು ಸಹ ಹತ್ತು ಭರವಸೆಗಳಲ್ಲಿ ಒಳಗೊಂಡಿದೆ.

ಉಚಿತ ಬಸ್ ಪ್ರಯಾಣ, 200 ಯೂನಿಟ್ ತನಕ ಉಚಿತ ವಿದ್ಯುತ್ ಇನ್ನೂ ಏನೇನು?

"ದೆಹಲಿ ಜನರಿಗೆ ನಾನು ಹತ್ತು ಖಾತ್ರಿಯನ್ನು ನೀಡುತ್ತಿದ್ದೇನೆ. ಇದು ಪ್ರಣಾಳಿಕೆ ಅಲ್ಲ. ಇನ್ನು ಏಳರಿಂದ ಹತ್ತು ದಿನದೊಳಗೆ ಸಮಗ್ರವಾದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದೇವೆ. ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಸೇರಿದಂತೆ ಪ್ರತಿಯೊಬ್ಬರಿಗೂ ನಿರ್ದಿಷ್ಟವಾದ ವಿಚಾರಗಳು ಇರುತ್ತವೆ" ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+