ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನನಿತ್ಯ 25 ರಿಂದ 30 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಶೇಕಡ 90 ರಿಂದ 95ರಷ್ಟು ಮರುಬಳಕೆ ಮಾಡಲಾಗುತ್ತಿದೆ. ಈಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಟ್ಟು ತ್ಯಾಜ್ಯದ ಶೇಕಡ 5ಕ್ಕಿಂತ ಕಡಿಮೆ ತ್ಯಾಜ್ಯವು ಭೂಮಿಗೆ ಹಾಕಲಾಗುತ್ತಿದೆ.
ಆದರೆ ಈ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿ ಮರಾರ್ ಅವರು ಹೇಳಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ದೇಶ ಉತ್ಪತ್ತಿಯಾಗುವ ತ್ಯಾಜ್ಯವನ್ನು ಭೂಮಿಗೆ ಹಾಕುವುದಕ್ಕೆ ಸಂಪೂರ್ಣವಾಗಿ ನಿರ್ಬಂಧಿಸುವುದು. ಇದಕ್ಕಾಗಿ ಇದೇ ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡುವ ಹೊಸ ಘನ ತ್ಯಾಜ್ಯ ನಿರ್ವಹಣಾ ಘಟಕವು ಈ ಗುರಿಯನ್ನು ಸಾಧಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಬಯೋಮೆಥನೇಷನ್ ತಂತ್ರಜ್ಞಾನವನ್ನು ಬಳಸಿಕೊಂಡು ದಿನಕ್ಕೆ ಐವತ್ತು ಟನ್ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು ಅದನ್ನು ತಯಾರಿಸಲಾಗಿದೆ.
ಟೈಮ್ಸ್ ವರದಿ ಪ್ರಕಾರ, ಈ ತಂತ್ರಜ್ಞಾನಕ್ಕೆ ಏರ್‌ಪೋರ್ಟ್ ವಿಭಾಗವು ಅನುಮತಿ ನೀಡಲಾಗಿದೆ. ವಿಮಾನ ನಿಲ್ದಾಣದ ಒಳಗೆ ಉತ್ಪತ್ತಿಯಾಗುವ ಎಲ್ಲ ಸಾವಯುವ ಕಸವನ್ನು ವಿಮಾನ ನಿಲ್ದಾಣದೊಳಗೆ ನಿರ್ವಹಿಸಿ ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಏರ್‌ಪೋರ್ಟ್‌ನಲ್ಲಿ ಉತ್ಪತ್ತಿಯಾಗುವ ಶೇಕಡ 55ರಿಂದ 60ರಷ್ಟು ಇರುವ ಸಾವಯುವ ತ್ಯಾಜ್ಯವನ್ನು ಮರುಬಳಕೆಗಾಗಿ ಸರ್ಕರದಿಂದ ಅಧಿಕೃತ ಮಾರಾಟಗಾರರಿಗೆ ಕಳುಹಿಸಲಾಗುತ್ತದೆ ಎಂದು ವ್ಯವಸ್ಥಾಪಕರು ಹೇಳಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿದಿನ ಎರಡೂವರೆಯಿಂದ ಮೂರು ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ವಿಮಾನ ನಿಲ್ದಾಣದ ಆವರಣದೊಳಗೆ 70 ಕಿ.ಮೀ. ಒಂದೇ ಪಥದ ನಿರ್ಮಾಣದಲ್ಲಿ ಶೇಕಡ ಆರರಷ್ಟು ಬಿಟುಮನ್ ಅನ್ನು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಲಾಗಿದೆ.
ವಿಮಾನ ನಿಲ್ದಾಣದೊಳಗೆ ಪಾನೀಯ ಮಳಿಗೆಗಳಿಂದ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ತೆಗೆದುಹಾಕುವುದು ಹಾಗೂ ಜೈವಿಕ ವಿಘಟನೀಯ ಪರ್ಯಾಯಗಳ ಬಳಕೆಯು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಸರ ಕಾಳಜಿಯ ಬದ್ಧತೆಯನ್ನು ತೋರಿಸುತ್ತದೆ ಎಂದು ಎಂಡಿ ಹಾಗೂ ಸಿಇಒ ಹರಿ ಮಾರಾರ್ ಹೇಳಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಸಂಬಂಧ ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ. ಟರ್ಮಿನಲ್‌ಗಳಾದ್ಯಂತ ಬಣ್ಣದ ಕೋಡೆಟ್ ಕಸದ ಬುಟ್ಟಿಗಳನ್ನು ಇರಿಸುತ್ತದೆ. ಸರಿಯಾದ ತ್ಯಾಜ್ಯ ವಿಂಗಡಣೆಯನ್ನು ಮಾಡಲು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಾರ್ಬನ್ ನಿರ್ವಹಣೆಯಲ್ಲಿ ಸುಸ್ಥಿರತೆ ಸಾಧಿಸಿದೆ ಎಂದು ವರದಿಯಾಗಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುತ್ತಿದ್ದು, ಇದು ಏರ್‌ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಷನಲ್‌ನಿಂದ ಐದು ಮಾನ್ಯತೆ ಪಡೆದ ವಿಮಾನ ನಿಲ್ದಾಣವಾಗಿದೆ ಎಂದು ಘೋಷಿಸಲಾಗಿತ್ತು. ಇದು ಮೇ 5, 2024ರಿಂದ ಈ ಸಾಧನೆಯು ವಿಮಾನ ನಿಲ್ದಾಣದ ಮೈಲುಗಲ್ಲಾಗಿದೆ ಎಂದು ತಿಳಿಸಲಾಗಿತ್ತು.
ಬೆಂಗಳೂರು ವಿಮಾನ ನಿಲ್ದಾಣವು ಸ್ಕೋಪ್ 1 ಹಾಗೂ ಸ್ಕೋಪ್ 2 ಹಸಿರು ಮನೆ ಅನಿಲ ಹೊರ ಸೂಸುವಿಕೆಯಲ್ಲಿ ಶೇಕಡ 95ರಷ್ಟು ಕಡಿತ ಮಾಡುವ ಮೂಲಕ ಹೊಸ ಮಾನದಂಡವನ್ನು ಮೀರಿಸಿದ್ದು, ಇದು 2030ರ ಟಾರ್ಗೆಟ್ ಅನ್ನು ಮುಟ್ಟಿದೆ ಎಂದು ಹೇಳಿದೆ.
ಡಿಕಾರ್ಬೊನೈಸೇಶನ್‌ನಲ್ಲಿ ಶೇಕಡ 100 ನವೀಕರಿಸಬಹುದಾದ ವಿದ್ಯುತ್ ಪರಿವರ್ತನೆ ಹಾಗೂ ಹಸಿರು ಮೂಲಸೌಕರ್ಯ ಹಾಗೂ ಸುಸ್ಥಿರ ಯೋಜನೆಗಳ ಅನುಷ್ಠಾನದಿಂದ ಪ್ರಗತಿ ಸಾಧಿಸಲಾಗಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣವು ಹೇಳಿದೆ. ಬೆಂಗಳೂರು ವಿಮಾನ ನಿಲ್ದಾಣವು ಎಸಿಐ ಅನುಮೋದಿತ ಕಾರ್ಬನ್ ಘಟಕಗಳನ್ನು ಇಂಗಾಲ ತೆಗೆಯುವ ಯೋಜನೆಗಳಿಂದ ಪಡೆದಿದೆ.


Click it and Unblock the Notifications