ಕೇರಳದಲ್ಲಿ ಪ್ರತಿ ದಿನ ಬೇರೆ ಬೇರೆ ಲಾಟರಿಗಳನ್ನು ಮಾರಾಟ ಮಾಡಲಾಗುತ್ತದೆ, 40 ರೂಪಾಯಿ ಮೌಲ್ಯದ ಲಾಟರಿಯಿಂದ ಹಿಡಿದು ಸುಮಾರು 500 ರೂಪಾಯಿವರೆಗಿನ ಲಾಟರಿ ಕೇರಳದಲ್ಲಿದೆ. 11 ಮಹಿಳೆಯರು ಜೊತೆಯಾಗಿ ಸೇರಿ ಲಾಟರಿ ಖರೀದಿಸಿ ಬರೋಬ್ಬರಿ 25 ಕೋಟಿ ರೂಪಾಯಿ ಮೊತ್ತವನ್ನು ಗೆದ್ದಿದ್ದಾರೆ.
ಕೇರಳದ ಹರಿತ ಕರ್ಮ ಸೇನೆಯ (ಎಚ್‌ಕೆಎಸ್) 11 ಮಹಿಳಾ ಸದಸ್ಯರು ಮಾನ್ಸೂನ್ ಬಂಪರ್ ಲಾಟರಿಯ ಮೊದಲ ಬಹುಮಾನವನ್ನು ಗೆದ್ದಿದ್ದಾರೆ. ಇದು 10 ಕೋಟಿ ರೂಪಾಯಿಯ ಬಹುಮಾನವಾಗಿದೆ. ಇದು ಸುಮಾರು 250 ರೂಪಾಯಿಯ ಲಾಟರಿ ಟಿಕೆಟ್ ಆಗಿದ್ದು, 11 ಮಹಿಳೆಯರು ಜೊತೆಯಾಗಿ ಸೇರಿ ತಲಾ 25 ರೂಪಾಯಿ ಹಾಕಿ ಟಿಕೆಟ್ ಖರೀದಿಸಿದ್ದಾರೆ. ಈ ಪೈಕಿ ಇಬ್ಬರು 12.5 ರೂಪಾಯಿ ಹಾಕಿದ್ದಾರೆ.

ಮಲಪ್ಪುರಂನ ಪರಪ್ಪನಂಗಡಿ ಪುರಸಭೆಯ 57 ಸದಸ್ಯರ ಎಚ್‌ಕೆಎಸ್ ಗುಂಪಿನ ಮಹಿಳೆಯರು ಇವರಾಗಿದ್ದಾರೆ. ಈ ಮಹಿಳೆಯರ ಗುಂಪು ಕಳೆದ ಎರಡೂವರೆ ವರ್ಷಗಳಿಂದ ಮನೆ ಮತ್ತು ಸಂಸ್ಥೆಗಳಿಂದ ತ್ಯಾಜ್ಯವನ್ನು ಸಂಗ್ರಹ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಮಹಿಳೆಯರು ಜೊತೆಯಾಗಿ ಸೇರಿ ಲಾಟರಿ ಖರೀದಿಸಿ ಈಗ ಕೋಟಿ ರೂಪಾಯಿ ಸಂಗ್ರಹ ಮಾಡಿಕೊಂಡಿದ್ದಾರೆ. ಏಕತೆ ಮತ್ತು ಸಹಯೋಗದಲ್ಲಿ ನಮ್ಮ ಶಕ್ತಿ ಅಡಿಗಿದೆ ಎಂದು ಈ ಮಹಿಳೆಯರು ನಂಬಿದ್ದಾರೆ.
ವಿಜೇತ ಟಿಕೆಟ್ ಖರೀದಿಸಿದ ಮಹಿಳೆಯರಿವರು
ವಿಜೇತ ಟಿಕೆಟ್ ಅನ್ನು ಎಚ್‌ಕೆಎಸ್ ಸದಸ್ಯರಾದ ಪಿ ಪಾರ್ವತಿ, ಕೆ ಲೀಲಾ, ಎಂಪಿ ರಾಧಾ, ಎಂ ಶೀಜಾ, ಕೆ ಚಂದ್ರಿಕಾ, ಇ ಬಿಂದು, ಕಾರ್ತಿಯಾಯಿನಿ, ಕೆ ಶೋಭಾ, ಸಿ ಬೇಬಿ, ಸಿ ಕುಟ್ಟಿಮಾಲು ಮತ್ತು ಪಿ ಲಕ್ಷ್ಮಿ ಜೊತೆಯಾಗಿ ಖರೀದಿ ಮಾಡಿದ್ದಾರೆ. ಈ ಮಹಿಳೆಯರು ಜೊತೆಯಾಗಿ ಸೇರಿ ನಾಲ್ಕು ಬಾರಿ ಲಾಟರಿ ಟಿಕೆಟ್ ಅನ್ನು ಖರೀದಿ ಮಾಡಿದ್ದಾರೆ.
ಪರಪ್ಪನಂಗಡಿ ಮೂಲದ ಪಾರ್ವತಿ, ತಾವು ಒಟ್ಟಿಗೆ ಖರೀದಿಸಿದ ನಾಲ್ಕನೇ ಟಿಕೆಟ್ ಆಗಿರುವುದರಿಂದ ಗೆಲ್ಲುವ ಯಾವುದೇ ನಿರೀಕ್ಷೆ ಇರಲಿಲ್ಲ. ಆದರೆ ಪಾಲಕ್ಕಾಡ್‌ನಲ್ಲಿ ಏಜೆನ್ಸಿಯೊಂದು ಮಾರಾಟ ಮಾಡಿದ ನಮ್ಮ ಟಿಕೆಟ್‌ಗೆ ಬಹುಮಾನ ಲಭ್ಯವಾಗಿದೆ ಎಂದು ತಿಳಿದಾಗ ನಮ್ಮ ಅದೃಷ್ಟವೇ ಬದಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಮಹಿಳೆಯರು ಗೆದ್ದ ಹಣವನ್ನು ಮನೆಗಳನ್ನು ನಿರ್ಮಿಸಲು, ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಅವರ ಸಾಲಗಳನ್ನು ತೀರಿಸಲು ಬಳಸಿಕೊಳ್ಳಲು ಮುಂದಾಗಿದ್ದಾರೆ. ತಲಾ 12.5 ರೂಪಾಯಿ ಹಾಕಿದ್ದ ಬೇಬಿ ಮತ್ತು ಕುಟ್ಟಿಮಾಲು ತಮ್ಮ ವಿಜೇತ ಮೊತ್ತವನ್ನು ಕೂಡಾ ಸಮನಾಗಿ ಹಂಚಿಕೊಂಡಿದ್ದಾರೆ. ಕಷ್ಟಪಟ್ಟು ಸಂಪಾದನೆಯನ್ನು ಮಾಡಿ ಜೀವನ ಸಾಗಿಸುತ್ತಾ ಬಂದಿರುವ ಈ ಮಹಿಳೆಯರಿಗೆ ಈ ವಿಜೇತ ಮೊತ್ತವು ಅತೀ ಸಹಕಾರಿಯಾಗಲಿದೆ.
ವಿಜಯಿಯಾದ ಮಹಿಳೆಯರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಪರಪ್ಪನಂಗಡಿ ಶಾಖೆಗೆ ವಿಜೇತ ಚೀಟಿಯನ್ನು ನೀಡಿದ ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಅವರ ಕೆಲಸದಲ್ಲಿನ ಪ್ರಾಮಾಣಿಕತೆಯನ್ನು ಶ್ಲಾಘಿಸಿದ ಪರಪ್ಪನಂಗಡಿ ಪುರಸಭಾ ಅಧ್ಯಕ್ಷ ಉಸ್ಮಾನ್ ಎ, ಅಚಲ ದೃಢಸಂಕಲ್ಪದಿಂದ ಜೀವನ ಸಾಗಿಸಲು ಹೆಣಗಾಡುತ್ತಿರುವ ಈ ಅರ್ಹ ತಂಡಕ್ಕೆ ಅದೃಷ್ಟವು ನ್ಯಾಯಯುತವಾಗಿ ದಯಪಾಲಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications