ನವದೆಹಲಿ, ಜೂನ್ 27: ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಸ್ಟಾರ್ಟ್‌ಅಪ್‌ಗಳಲ್ಲಿ ಚೀನಾದ ಬಂಡವಾಳ ಹೂಡಿಕೆ 12 ಪಟ್ಟು ಬೆಳವಣಿಗೆ ಕಂಡುಬಂದಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
2016 ರಲ್ಲಿ 381 ಮಿಲಿಯನ್ ಡಾಲರ್ ಇದ್ದ ಹೂಡಿಕೆ 2019 ರಲ್ಲಿ 4.6 ಬಿಲಿಯನ್ ಡಾಲರ್‌ಗೆ ತಲುಪಿದೆ. ಗ್ಲೋಬಲ್ ಡಾಟಾ ವಿಶ್ಲೇಷಣಾ ಸಂಸ್ಥೆ ಈ ಮಾಹಿತಿ ನೀಡಿದೆ.
ಭಾರತದಲ್ಲಿನ ಬಹುಪಾಲು ಸ್ಟಾರ್ಟ್ ಅಪ್‌ಗಳು ಚೀನಾದ ಹೂಡಿಕೆ ಸಂಸ್ಥೆಗಳಿಂದ ಬೆಂಬಲಿತವಾಗಿವೆ. ಅದರಲ್ಲಿ ಮುಖ್ಯವಾಗಿ ಅಲಿಬಾಬಾ ಮತ್ತು ಟೆನ್ಸೆಂಟ್ ಎಂದು ಗ್ಲೋಬಲ್ ಡಾಟಾ ವಿಶ್ಲೇಷಣಾ ಸಂಸ್ಥೆ ಹೇಳಿದೆ.
2.6 ಬಿಲಿಯನ್ ಡಾಲರ್ ಹೂಡಿಕೆ
ಅಲಿಬಾಬಾ ಮತ್ತು ಅದರ ಅಂಗಸಂಸ್ಥೆ ಆಂಟ್ ಫೈನಾನ್ಷಿಯಲ್ ಭಾರತೀಯ ಸ್ಟಾರ್ಟ್‌ಅಪ್‌ಗಳಲ್ಲಿ ಅಂದರೆ ಪೇಟಿಎಂ, ಸ್ನ್ಯಾಪ್‌ಡೀಲ್, ಬಿಗ್‌ಬಾಸ್ಕೆಟ್ ಮತ್ತು ಜೊಮಾಟೊದಲ್ಲಿ 2.6 ಬಿಲಿಯನ್ ಡಾಲರ್‌ಗಳಷ್ಟು ಹೂಡಿಕೆ ಮಾಡಿದ್ದರೆ, ಟೆನ್ಸೆಂಟ್ ಓಲಾ, ಸ್ವಿಗ್ಗಿ, ಹೈಕ್, ಡ್ರೀಮ್ 11 ಮತ್ತು ಬೈಜು ಸ್ಟಾರ್ಟ್‌ಅಪ್‌ಗಳಲ್ಲಿ 2.4 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಹೂಡಿಕೆ ಮಾಡಿದೆ.
1 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಹೂಡಿಕೆ
ಇಲ್ಲಿ ಹೆಸರಿಸಲಾಗದ ಎಲ್ಲ ಸ್ಟಾರ್ಟ್‌ಅಪ್‌ಗಳು 1 ಬಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಸ್ಟಾರ್ಟ್‌ಅಪ್‌ಗಳು. ಚೀನೀ ಹೂಡಿಕೆದಾರರಾದ ಮೀಟೂನ್-ಡಯಾನ್ಪಿಂಗ್, ದೀದಿ ಚುಕ್ಸಿಂಗ್, ಫೋಸುನ್, ಶುನ್ವೇ ಕ್ಯಾಪಿಟಲ್, ಹಿಲ್ಹೌಸ್ ಕ್ಯಾಪಿಟಲ್ ಗ್ರೂಪ್, ಚೀನಾ ಲಾಡ್ಜಿಂಗ್ ಗ್ರೂಪ್ ಮತ್ತು ಚೀನಾ-ಯುರೇಷಿಯಾ ಆರ್ಥಿಕ ಸಹಕಾರ ನಿಧಿ ಭಾರತದಲ್ಲಿ ಹೂಡಿಕೆ ಮಾಡಿದ ಪ್ರಮುಖ ಹೂಡಿಕೆ ಕಂಪನಿಗಳಾಗಿವೆ.
ಗಮನಾರ್ಹವಾದ ಹೂಡಿಕೆಯನ್ನು ಮಾಡಿವೆ
ಕಳೆದ ಮಾರ್ಚ್‌ವರೆಗೂ ಭಾರತದಲ್ಲಿ ಚೀನಾದ ಹೂಡಿಕೆ ಕಂಪನಿಗಳು ಗಮನಾರ್ಹವಾದ ಹೂಡಿಕೆಯನ್ನು ಮಾಡಿವೆ. ಹೀಗಾಗಿ ಭಾರತೀಯ ಸ್ಟಾರ್ಟ್‌ಅಪ್‌ಗಳು ಪ್ರಪಂಚದಲ್ಲೇ ಅತೀ ತ್ವರೀತವಾಗಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್‌ಗಳು ಎಂದು ಹೆಸರು ಮಾಡಿದವು ಎಂದು ವರದಿ ಹೇಳುತ್ತದೆ.
ಚೀನಾ-ಭಾರತ ಗಡಿ ಸಂಘರ್ಷ: ದಿಗ್ಬಂಧನವನ್ನುಂಟುಮಾಡುತ್ತಿದೆ
ಇತ್ತೀಚಿನ ಭಾರತ-ಚೀನಾ ಗಡಿ ಸಂಘರ್ಷ ಭಾರತದಲ್ಲಿ ಚೀನಾ ಕಂಪನಿಗಳ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿ ಹೇಳಿದೆ. ಭಾರತದ ವಿದೇಶಿ ನೇರ ಹೂಡಿಕೆ ನೀತಿಯನ್ನು ಬಿಗಿಗೊಳಿಸುತ್ತಿರುವುದರಿಂದ ಚೀನಾದ ಹೂಡಿಕೆದಾರರಿಗೆ ತಮ್ಮ ದಿಗ್ಬಂಧನವನ್ನುಂಟುಮಾಡುತ್ತಿದೆ. ಅದೇನೇ ಇದ್ದರೂ, ಇದು ಕೇವಲ ತಾತ್ಕಾಲಿಕ ಕ್ರಮವಾಗಿದೆ ಮತ್ತು ಉಭಯ ದೇಶಗಳ ನಡುವಿನ ಮಹತ್ವದ ದ್ವಿಪಕ್ಷೀಯ ಹೂಡಿಕೆ ಸಂಬಂಧಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ಮಾತ್ರ ದೀರ್ಘಕಾಲೀನ ಪರಿಣಾಮವನ್ನು ಸಾಧಿಸಬಹುದು ಎಂದು ವರದಿ ಹೇಳಿದೆ.


Click it and Unblock the Notifications