ಮಹಿಳೆ ಬರಿ ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ ಅಷ್ಟೇ ಇರಬೇಕು ಎನ್ನುವ ಕಾಲ ಮಗಿದಾಗಿದೆ. ಈಗ ಉದ್ಯಮ ರಂಗದಲ್ಲೂ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈ ಮೂಲಕ ಯಶಸ್ವಿ ಉದ್ಯಮಿ ಆಗುತ್ತಿದ್ದಾರೆ. ಇನ್ನು ಬಿಲಿಯನೇರ್‌ಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಅತಿ ಹೆಚ್ಚು ಮಹಿಳಾ ಬಿಲಿಯನೇರ್‌ಗಳಿದ್ದಾರೆ. ಅಲ್ಲದೆ ಭಾರತ ಈ ಪಟ್ಟಿಯಲ್ಲಿ ಟಾಪ್ 5ರಲ್ಲಿ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ.
ಸಿಟಿ ಇಂಡೆಕ್ಸ್‌ನ ಅಧ್ಯಯನದ ಪ್ರಕಾರ, ಭಾರತದಲ್ಲಿ 15 ಮಹಿಳೆಯರು ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸೇರಿದ್ದಾರೆ. ಸಾವಿತ್ರಿ ಜಿಂದಾಲ್ ಅವರ ಹೆಸರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಧ್ಯಯನದ ಪ್ರಕಾರ, ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರ ನಿವ್ವಳ ಮೌಲ್ಯ 20.2 ಬಿಲಿಯನ್ ಡಾಲರ್ ಆಗಿದೆ. ಎರಡನೇ ಸ್ಥಾನದಲ್ಲಿ 7.5 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಸೈರಸ್ ಮಿಸ್ತ್ರಿ ಪತ್ನಿ ರೋಹಿಕಾ ಸೈರಸ್ ಮಿಸ್ತ್ರಿ ಹೆಸರು ಇದೆ.

ಅತಿ ಹೆಚ್ಚು ಶ್ರೀಮಂತ ಮಹಿಳೆಯರು ಇರುವುದು ಎಲ್ಲಿ?
ರಿಟೇಲ್ ಚೈನ್ ವಾಲ್‌ಮಾರ್ಟ್‌ನ ಉತ್ತರಾಧಿಕಾರಿ ಆಲಿಸ್ ವಾಲ್ಟನ್ ಶ್ರೀಮಂತ ಮಹಿಳೆ. ಆಲಿಸ್ ವಾಲ್ಟನ್ ಅವರ ನಿವ್ವಳ ಮೌಲ್ಯವು ಸುಮಾರು 78 ಬಿಲಿಯನ್ ಡಾಲರ್ ಆಗಿದೆ. ಬ್ಲೂಮ್‌ಬರ್ಗ್‌ನ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅವರು ಪ್ರಸ್ತುತ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 19 ನೇ ಸ್ಥಾನದಲ್ಲಿದ್ದಾರೆ. ಮಹಿಳಾ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅಮೆರಿಕವೊಂದರಿಂದಲೇ 97 ಮಹಿಳೆಯರ ಹೆಸರಿಗೆ.
ಸಿಟಿ ಇಂಡೆಕ್ಸ್‌ನ ಅಧ್ಯಯನದ ಪ್ರಕಾರ, ವಿಶ್ವದ ಪ್ರತಿ 5 ಶ್ರೀಮಂತ ಮಹಿಳೆಯರಲ್ಲಿ 4 ಅಮೆರಿಕದವರು. ಬಿಲಿಯನೇರ್ ಮಹಿಳೆಯರ ಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. ಸಿಟಿ ಇಂಡೆಕ್ಸ್‌ನ ಮಹಿಳಾ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಚೀನಾದ 42 ಮಹಿಳೆಯರು ಸ್ಥಾನ ಪಡೆದಿದ್ದಾರೆ.
ಭಾರತಕ್ಕೂ ಮೊದಲು ಈ ದೇಶಗಳಿಗೆ ಸ್ಥಾನ
ಯುರೋಪ್‌ನ ಅತಿದೊಡ್ಡ ಆರ್ಥಿಕತೆಯಾಗಿರುವ ಜರ್ಮನಿ, 22 ಮಹಿಳಾ ಬಿಲಿಯನೇರ್‌ಗಳಿಗೆ ಆಶ್ರಯ ನೀಡಿದ್ದು ಮೂರನೇ ಸ್ಥಾನದಲ್ಲಿದೆ. 19 ಮಹಿಳಾ ಬಿಲಿಯನೇರ್‌ಗಳೊಂದಿಗೆ ಯುರೋಪ್‌ನ ಇಟಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ 15 ಬಿಲಿಯನೇರ್ ಮಹಿಳೆಯರೊಂದಿಗೆ ಭಾರತ ಐದನೇ ಸ್ಥಾನದಲ್ಲಿದೆ.
ಸಿಟಿ ಇಂಡೆಕ್ಸ್ ಪ್ರಕಾರ, ಆಸ್ಟ್ರೇಲಿಯಾ ಮತ್ತು ಸ್ವಿಟ್ಜರ್ಲೆಂಡ್ ನಲ್ಲಿ ತಲಾ 9 ಮಹಿಳಾ ಬಿಲಿಯನೇರ್‌ಗಳು ಇದ್ದಾರೆ. ಅಲ್ಲದೆ ಬ್ರೆಜಿಲ್ ಕೂಡ 9 ಮಹಿಳಾ ಬಿಲಿಯನೇರ್‌ಗಳನ್ನು ಹೊಂದಿದೆ. ಹಾಂಗ್ ಕಾಂಗ್, ಸ್ಪೇನ್, ಸ್ವೀಡನ್ ಮತ್ತು ಫ್ರಾನ್ಸ್ ತಲಾ ಏಳು ಮಹಿಳಾ ಬಿಲಿಯನೇರ್‌ಗಳನ್ನು ಹೊಂದಿದ್ದು ಜಂಟಿಯಾಗಿ ಏಳನೇ ಸ್ಥಾನದಲ್ಲಿವೆ.
ತಲಾ ಆರು ಮಹಿಳಾ ಬಿಲಿಯನೇರ್‌ಗಳೊಂದಿಗೆ ಕೆನಡಾ ಮತ್ತು ದಕ್ಷಿಣ ಕೊರಿಯಾ ಎಂಟನೇ ಸ್ಥಾನದಲ್ಲಿವೆ. ಇಸ್ರೇಲ್ ಮತ್ತು ತುರ್ಕಿಯೆಯಲ್ಲಿ ತಲಾ ನಾಲ್ಕು ಕೋಟ್ಯಾಧಿಪತಿಗಳನ್ನು ಹೊಂದಿದ್ದು 9ನೇ ಸ್ಥಾನದಲ್ಲಿದೆ.


Click it and Unblock the Notifications