ಎಚ್ಚರ..ಎಚ್ಚರ..ಎಚ್ಚರ 16 ಶತಕೋಟಿ ಪಾಸ್‌ವರ್ಡ್‌ಗಳು ಮಾಹಿತಿ ಸೋರಿಕೆ.. ಹೌದು, ಆ್ಯಪಲ್, ಫೇಸ್‌ಬುಕ್, ಗೂಗಲ್‌ನಲ್ಲಿ 16 ಬಿಲಿಯನ್ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆಯಾಗಿದೆ ಎಂದು ಭಾರತದ ಸೈಬರ್ ಭದ್ರತಾ ಸಂಸ್ಥೆ ಸಿಇಆರ್‌ಟಿ-ಇನ್ ಹೇಳಿದೆ. ಇದು ಆನ್‌ಲೈನ್ ಸೇವೆಯ ಬಳಕೆದಾರರಿಗೆ ಭಾರತ ಸರ್ಕಾರ ಎಚ್ಚರಿಕೆ ಗಂಟೆಯ ಜೊತೆಗೆ ಸು ಸುರಕ್ಷತವಾದ ಸಲಹೆಗಳನ್ನು ಸಹ ನೀಡಿದೆ.

ಹೌದು, ಆಪಲ್, ಗೂಗಲ್, ಫೇಸ್‌ಬುಕ್, ಟೆಲಿಗ್ರಾಮ್, ಗಿಟ್‌ಹಬ್ ವಿವಿಧ VPN ಸೇವೆಗಳು ಸೇರಿದಂತೆ ಪ್ಲಾಟ್‌ಫಾರ್ಮ್‌ಗಳಿಂದ ಸಂಗ್ರಹಿಸಲಾದ ಸುಮಾರು 16 ಬಿಲಿಯನ್ ಲಾಗಿನ್ ಪಾಸ್‌ವರ್ಡ್‌ಗಳು ಮಾಹಿತಿ ಲೀಕ್ ಆಗಿದೆ. ಓ ಸೋರಿಕೆಯು ಇಂಟರ್ನೆಟ್ ಇತಿಹಾಸದಲ್ಲಿ ಅತಿದೊಡ್ಡ ಭದ್ರತಾ ಸೋರಿಕೆಗಳಲ್ಲಿ ಒಂದು ಆಗಿದೆ.
ಬೃಹತ್ ಪಾಸ್‌ವರ್ಡ್ ಸೋರಿಕೆಯ ಬಗ್ಗೆ ಎಚ್ಚರಿಕೆಯ ಗಂಟೆ
ಸುದ್ದಿಲ್ಲದೇ ಲಾಗಿನ್‌ಗಳ ರುಜುವಾತುಗಳನ್ನು 30 ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ. ಹೆಚ್ಚಿನ ಡೇಟಾವನ್ನು ಇನ್ಫೋಸ್ಟೀಲರ್ ಮಾಲ್‌ವೇರ್ ಮೂಲಕ ಮಾಹಿತಿಯನ್ನು ಪಡೆಯಲಾಗಿದೆ.ಜೊತೆಗೆ ಅಸುರಕ್ಷಿತ ಸ್ಥಿತಿಸ್ಥಾಪಕ ಹುಡುಕಾಟ ನಿದರ್ಶನಗಳಂತಹ ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಡೇಟಾಬೇಸ್‌ಗಳನ್ನು ತಪ್ಪಾಗಿ ಕಾನ್ಫಿಗರ್ ಮಾಡಲಾಗಿದೆ. ಈ ಡೇಟಾಸೆಟ್ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್, ದೃಢೀಕರಣ ಟೋಕನ್‌ಗಳು ಮತ್ತು ಸೆಷನ್ ಕುಕೀಗಳು ಹಾಗೂ ನಿರ್ದಿಷ್ಟ ಬಳಕೆದಾರರು ಅಥವಾ ಪ್ಲಾಟ್‌ಫಾರ್ಮ್‌ಗಳಿಗೆ ರುಜುವಾತುಗಳನ್ನು ಲಿಂಕ್ ಮಾಡುವ ಮೆಟಾಡೇಟಾವನ್ನ ಒಳಗೊಂಡತೆ ಮಾಹಿತಿ ಸೋರಿಕೆಯಾಗಿದೆ.ಅನಧಿಕೃತ ಪ್ರವೇಶ, ಫಿಶಿಂಗ್, ಗುರುತಿನ ಕಳ್ಳತನ ಮತ್ತು ಖಾತೆ ಸ್ವಾಧೀನ ಸೇರಿದಂತೆ ಸೈಬರ್ ಅಪರಾಧಗಳನ್ನು ತನ್ನ ಕಡೆ ಅಳವಡಿಸಿಕೊಂಡಿದೆ.
ಮಾಹಿತಿ ಸೋರಿಕೆಯು ಬಹಳ ದೊಡ್ಡ ಮಟ್ಟದಲ್ಲಿ ಆಗಿರುವುದರಿಂದ ಇದು ವೈಯತ್ತಿಕ ಮಾಹಿತಿಗೆ ಅಪಾಯವನ್ನು ತರುವಂತಹ ಸಾಧ್ಯತೆಗಳು ಹೆಚ್ಚಾಗಿ ಇವೆ. ನಿಮ್ಮ ಮಾಹಿತಿಯನ್ನು ಇಟ್ಟಿಕೊಂಡು ಬೆದರಿಕೆಗಳು ಸಹ ಬರಬಹುದು. CERT-In ಸೋರಿಕೆಯಿಂದಾಗಿ ನಿಮ್ಮಗೆ ನಾಲ್ಕು ರೀತಿಯಲ್ಲಿ ಬೆದರಿಕೆಗಳನ್ನು ಎದುರಾಗಬಹುದು ಹೇಳಿದ್ದು, ಅವುಗಳಲ್ಲಿ ಪ್ರಮುಖವಾಗಿ ಸೈಬರ್ ಅಪರಾಧಿಗಳು ಕದ್ದ ಬಳಕೆದಾರ ಹೆಸರುಗಳು ಮತ್ತು ಪಾಸ್‌ವರ್ಡ್‌ಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಹಣ ಮತ್ತು ವೈಯತ್ತಿಕ ವಿವರಗಳನ್ನು ಪಡೆದುಕೊಳ್ಳಬಹುದು. ಇದಲ್ಲದೇ ಫಿಶಿಂಗ್ ಮತ್ತು ಸಾಮಾಜಿಕ ಎಂಜಿನಿಯರಿಂಗ್ ತಂತ್ರಗಳನ್ನು ಬಳಕೆ ಮಾಡಿಕೊಳ್ಳಬಹುದು.ಸೈಬರ್ ಅಪರಾಧಕ್ಕೆ ಮೆಟಾಡೇಟಾವು ವಂಚನೆಗಳನ್ನು ಮಾಡಲು ಬಹುಬೇಗನೆ ನೆರವಾಗುತ್ತದೆ.
ಸೈಬರ್ ಕಳ್ಳರು ಖಾತೆ ಸ್ವಾಧೀನದಿಂದ ವೈಯಕ್ತಿಕ, ಹಣಕಾಸು ಮತ್ತು ಸಾಂಸ್ಥಿಕ ಖಾತೆಗಳಿಗೆ ಪ್ರವೇಶವನ್ನು ಪಡೆಯಬಹುದು. ವ್ಯವಹಾರದ ಇಮೇಲ್ ಲಾಗಿನ್ ಅನ್ನು ಬಳಕೆ ಮಾಡಿಕೊಂಡು ದೊಡ್ಡ ಪ್ರಮಾಣದಲ್ಲಿ ವಂಚನೆಯನ್ನು ಕೂಡ ಮಾಡಬಹುದು.
ಡೇಟಾ ಹೇಗೆ ಸೋರಿಕೆ ಆಯ್ತು..?
ನಿಮ್ಮ ಮೊಬೈಲ್ ಅಥವಾ ಉಳಿಸಿದ ಲಾಗಿನ್ ಪಾಸ್‌ವರ್ಡ್‌ಗಳು, ಸೆಷನ್ ಟೋಕನ್‌ಗಳು ಮತ್ತು ಬ್ರೌಸರ್ ಡೇಟಾವನ್ನು ಸಂಗ್ರಹಿಸುವ ಇನ್ಫೋಸ್ಟೀಲರ್ ಮಾಲ್‌ವೇರ್‌ನಿಂದಾಗಿ ಮಾಹಿತಿಗಳು ಸೋರಿಕೆಯಾಗಿದೆ.ಅಸುರಕ್ಷಿತ ಡೇಟಾಬೇಸ್‌ಗಳು ಸೈಬರ್ ಅಪರಾಧಿಗಳಿಗೆ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಸುರಕ್ಷತಾ ಸಲಹೆಗಳು
- ಬ್ಯಾಂಕಿಂಗ್, ಸಾಮಾಜಿಕ ಜಾಲತಾಣ, ಸರ್ಕಾರಿ ಪೋರ್ಟಲ್‌ಗಳಂತಹವೇದಿಕೆಗಳಲ್ಲಿ ನಿಮ್ಮ ಪಾಸ್‌ವರ್ಡ್‌ಗಳನ್ನು ತಕ್ಷಣವೇ ಅಪ್ಡೇಟ್ಸ್ ಮಾಡಿ. ಪಾಸ್‌ವರ್ಡ್‌ಗಳಲ್ಲಿ ನೀವು ಅಕ್ಷರಗಳು, ಸಂಖ್ಯೆಗಳು ಮತ್ತು ಚಿಹ್ನೆಗಳನ್ನು ಒಳಗೊಂಡಿರುವ ದೃಢವಾದ ಪಾಸ್‌ವರ್ಡ್‌ಗಳನ್ನು ರಚಿಸಿ ಬಳಕೆ ಮಾಡಿಕೊಳ್ಳಿ. ನಿಮ್ಮಗೆ ಸಾಧ್ಯವಾದಲ್ಲೆಲ್ಲಾ ಬಹು-ಅಂಶ ದೃಢೀಕರಣವನ್ನು (MFA) ಸಕ್ರಿಯ ಮಾಡಿಕೊಳ್ಳಿ.
- ನಿಮ್ಮಗೆ ನಿಮ್ಮ ಇನ್ನೂ ಹೆಚ್ಚಿನ ರೀತಿಯಲ್ಲಿ ಸುರಕ್ಷಿತವಾಗಿ ಇಡಲು ದೃಢೀಕರಣ ಅಪ್ಲಿಕೇಶನ್‌ಗಳು, ಹಾರ್ಡ್‌ವೇರ್ ಟೋಕನ್‌ಗಳು ಅಥವಾ ಎಸ್‌ಎಂಎಸ್ ಆಧಾರಿತ ವ್ಯವಸ್ಥೆಗಳನ್ನು ಬಳಕೆಯನ್ನು ಮಾಡಿಕೊಳ್ಳವುದು ಉತ್ತಮ.
- ಫಿಶಿಂಗ್ ಪ್ರಯತ್ನಗಳ ಬಗ್ಗೆ ಎಚ್ಚರದಿಂದಿರಿ. ಪಾಸ್‌ವರ್ಡ್ ಮರುಹೊಂದಿಸುವ ಲಿಂಕ್‌ಗಳು ಅಥವಾ ತುರ್ತು ಅಧಿಸೂಚನೆಗಳ ಬಗ್ಗೆ ಜಾಗರೂಕರಾಗಿರಿ.
ಈ ಸಲಹೆಗಳನ್ನು ಅನುಸರಿಸುವುದರಿಂದ ನಿಮ್ಮ ವೈಯತ್ತಿಕ ಮಾಹಿತಿಗಳು ಸೋರಿಕೆಯಾಗುವಂತೆ ತಡೆಗಟ್ಟಬಹುದು.


Click it and Unblock the Notifications