For Quick Alerts
ALLOW NOTIFICATIONS  
For Daily Alerts

PUBG ಆಟಕ್ಕಾಗಿ ತಂದೆ ಖಾತೆಯ 16 ಲಕ್ಷ ತೆಗೆದ 17ರ ಹುಡುಗ

|

ಟಿಕ್ ಟಾಕ್ ನಂತರ ಭಾರತದಲ್ಲಿ ಬಹಳ ಪ್ರಸಿದ್ಧವಾದದ್ದು PUBG. ಈ ಆಟದ ವ್ಯಸನಿಗಳಾಗಿರುವವರು ಬಹಳ ಮಂದಿ ಸಿಗುತ್ತಾರೆ ಮತ್ತು ಇದು ಹೆಚ್ಚಿನ ಸಂಖ್ಯೆಯ ಜನರು ಆಡುವ ಆಟ. PUBG ಆಟಕ್ಕೆ ನಿಷೇಧ ಹೇರಬೇಕು ಎಂಬ ಬೇಡಿಕೆ ಸಹ ಇದೆ. ಚೀನಾ- ಭಾರತ ಮಧ್ಯೆ ಗಡಿ ವಿವಾದ ಉಲ್ಬಣಿಸುವ ಮುಂಚಿನಿಂದಲೂ ಈ ಆಟದ ಹಿಂದೆ ಬಿದ್ದು, ವ್ಯಸನಿಗಳಾಗಿರುವವರ ಸಂಖ್ಯೆ ದೊಡ್ಡದಿದೆ.

ಈ ವರದಿಯಲ್ಲಿನ ಉದಾಹರಣೆಯನ್ನೇ ಹೇಳುವುದಾದರೆ, 17 ವರ್ಷದ ಹುಡುಗನೊಬ್ಬ PUBG ಆಡುವ ಸಲುವಾಗಿ ತನ್ನ ತಂದೆಯ ಬ್ಯಾಂಕ್ ಖಾತೆಯಲ್ಲಿ ಇದ್ದ 16 ಲಕ್ಷ ರುಪಾಯಿಯನ್ನು ಖರ್ಚು ಮಾಡಿದ್ದಾನೆ. ಈ ಘಟನೆ ವರದಿ ಆಗಿರುವುದು ಪಂಜಾಬ್ ನ ಖರಾರ್ ನಿಂದ. ಆ ವರದಿಯ ಪ್ರಕಾರ, ವೈದ್ಯಕೀಯ ಖರ್ಚಿಗಾಗಿ ಆ ಹುಡುಗನ ತಂದೆ ಹಣ ಕೂಡಿಸಿಟ್ಟಿದ್ದರು. ಅದನ್ನು ತನ್ನ ಹಾಗೂ ಸ್ನೇಹಿತರ PUBG ಖಾತೆ ಅಪ್ ಡೇಟ್ ಮಾಡಲು ಈ ಹಣ ಬಳಸಲಾಗಿದೆ.

ಆನ್ ಲೈನ್ ಬ್ಯಾಂಕಿಂಗ್ ಹೆಸರಲ್ಲಿ ವಂಚಿಸುತ್ತಿದ್ದ ಯುವಕ ಸಿಕ್ಕಿಬಿದ್ದಆನ್ ಲೈನ್ ಬ್ಯಾಂಕಿಂಗ್ ಹೆಸರಲ್ಲಿ ವಂಚಿಸುತ್ತಿದ್ದ ಯುವಕ ಸಿಕ್ಕಿಬಿದ್ದ

ಬ್ಯಾಂಕ್ ಸ್ಟೇಟ್ ಮೆಂಟ್ ನೋಡಿದ ನಂತರವಷ್ಟೇ ಈ ಬಗ್ಗೆ ಪೋಷಕರಿಗೆ ಗೊತ್ತಾಗಿದೆ. ಆನ್ ಲೈನ್ ತರಗತಿಗೆ ಹಣ ಕಟ್ಟಬೇಕು ಅಂತ ಕಾರಣ ಹೇಳಿ, ಹದಿನೇಳು ವರ್ಷದ ಈ ಹುಡುಗ ತನ್ನ ತಂದೆಯ ಮೊಬೈಲ್ ಫೋನ್ ಪಡೆದುಕೊಂಡಿದ್ದಾನೆ. ಅದರಲ್ಲಿ ತಂದೆಯ ಬ್ಯಾಂಕ್ ಖಾತೆಯ ಮೂಲಕ ತನ್ನಗೆ ಹಾಗೂ ಸ್ನೇಹಿತರಿಗಾಗಿ PUBG ಇನ್ ಅಪ್ಲಿಕೇಷನ್ ಖರೀದಿ ಮಾಡಿದ್ದಾನೆ.

PUBG ಆಟಕ್ಕಾಗಿ ತಂದೆ ಖಾತೆಯ 16 ಲಕ್ಷ ತೆಗೆದ 17ರ ಹುಡುಗ

ಈ ಹಿಂದೆ ಹಲವು ಬಾರಿ PUBG ವ್ಯಸನಿಗಳ ವಿಚಿತ್ರ ಘಟನೆಗಳು ವರದಿ ಆಗಿದ್ದು. ಆಟ ಆಡುವಾಗಲೇ ಬಾಲಕನೊಬ್ಬ ಆಸಿಡ್ ಕುಡಿದಿದ್ದ. ಜಮ್ಮು- ಕಾಶ್ಮೀರದಲ್ಲಿ ಒಬ್ಬನಿಗೆ ಮಾನಸಿಕ ಸಮಸ್ಯೆ ಆಗಿತ್ತು. ಇಪ್ಪತ್ತೆರಡು ವರ್ಷದ ಯುವಕನೊಬ್ಬ ಈ PUBG ಆಟಕ್ಕೆ ವ್ಯಸನಿಯಾಗಿ, ಕಳೆದ ವಾರ ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆಟದ ವ್ಯಸನದಿಂದಲೇ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ.

English summary

17 Year Old Boy Spent 16 Lakh Father's Money To PUBG Game In Application Purchase

17 year old boy spent money of 16 lakh from father's bank account for PUBG game.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X