ಸಣ್ಣ ಪ್ರಮಾಣದ ವರ್ತಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮುದ್ರಾ ಸಾಲ ಯೋಜನೆ ಅಡಿ 50,000 ರುಪಾಯಿಯೊಳಗೆ ಪಡೆಯುವವರಿಗೆ 2 ಪರ್ಸೆಂಟ್ ಬಡ್ಡಿ ಸಬ್ಸಿಡಿ ನೀಡಲು ಪ್ರಧಾನಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಮುದ್ರಾ ಶಿಶು ಯೋಜನಾ ಅಡಿಯಲ್ಲಿ (50 ಸಾವಿರಕ್ಕಿಂತ ಕಡಿಮೆ ಸಾಲ ಪಡೆದವರು) 9.37 ಕೋಟಿ ಫಲಾನುಭವಿಗಳು ಇದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಇದಕ್ಕಾಗಿ ಜೂನ್ 1, 2020ರಿಂದ ಮೇ 31, 2021ರ ತನಕ ಬಡ್ಡಿ ಸಬ್ಸಿಡಿ ಮುಂದುವರಿಸಲಿದೆ. ಇದಕ್ಕಾಗಿ 1540 ಕೋಟಿ ರುಪಾಯಿ ಖರ್ಚು ಮಾಡುವುದಾಗಿ ಘೋಷಿಸಿದೆ. ಮೈಕ್ರೋ ಯೂನಿಟ್ಸ್ ಡೆವಲಪ್ ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ (MUDRA) ಯೋಜನೆಯು ವಿಶ್ವದಲ್ಲೇ ಅತಿ ದೊಡ್ಡ ಕಿರು ಸಾಲ ಯೋಜನೆ. ಹತ್ತಿರ ಹತ್ತಿರ 20 ಕೋಟಿ ಮಂದಿಗೆ ವರ್ಕಿಂಗ್ ಕ್ಯಾಪಿಟಲ್ ಒದಗಿಸುತ್ತಿದೆ.
ಈ ಯೋಜನೆ ರೂಪುಗೊಂಡಿದ್ದೇ ದೇಶದ ಕಿರು ಸಂಸ್ಥೆಗಳಿಗೆ ಅಭಿವೃದ್ಧಿಗೆ ಬೆಂಬಲ ನೀಡುವ ಉದ್ದೇಶದಿಂದ. ಮುದ್ರಾದಿಂದ ಬ್ಯಾಂಕ್ ಗಳಿಗೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಹಾಗೂ ಎನ್ ಬಿಎಫ್ ಸಿಗಳಿಗೆ ಪುನರ್ ಹಣಕಾಸು ಯೋಜನೆ ಬೆಂಬಲ ನೀಡಲಾಗುತ್ತದೆ. ಆ ಮೂಲಕ ಕಿರು ಘಟಕಗಳಿಗೆ ಹತ್ತು ಲಕ್ಷದ ತನಕ ಹಣಕಾಸಿನ ಸಾಲದ ಅಗತ್ಯವನ್ನು ಒದಗಿಸಲಾಗುತ್ತದೆ.

ಶಿಶು ಯೋಜನಾ ಅಡಿಯಲ್ಲಿ 50 ಸಾವಿರ ರುಪಾಯಿಯೊಳಗೆ ಸಾಲ ನೀಡಲಾಗುತ್ತದೆ. ಇನ್ನು ಕಿಶೋರ ಯೋಜನೆಯಲ್ಲಿ 50 ಸಾವಿರದಿಂದ 5 ಲಕ್ಷದ ತನಕ ಹಾಗೂ ತರುಣ್ ಯೋಜನೆ ಅಡಿಯಲ್ಲಿ 5 ಲಕ್ಷ ಮೇಲ್ಪಟ್ಟು 10 ಲಕ್ಷದ ತನಕ ಸಾಲ ಒದಗಿಸಲಾಗುತ್ತದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications