
ಜಾಗತಿಕ ಮಟ್ಟದಲ್ಲಿ ಷೇರುದಾರರು ಚಿನ್ನ ಖರೀದಿಯಲ್ಲಿ ತೋರಿಸಿದ ಆಸಕ್ತಿ ಬೆಲೆ ಏರಿಕೆಗೆ ಆಸ್ಪದವಾಗಿದೆ. ಶನಿವಾರದ ದರದ ಪ್ರಕಾರ ಬೆಳ್ಳಿ ದರ 1,200 ರು ಏರಿಕೆಯಾಗಿ ಪ್ರತಿ ಕೆಜಿಗೆ 55,500 ರು ಆಗಿತ್ತು.
ಯುರೋ, ಡಾಲರ್ ಕುಸಿತದಿಂದ ಲಂಡನ್ ನಲ್ಲಿ ಚಿನ್ನದ ಮೇಲೆ ಹೂಡಿಕೆಗೆ ಜನ ಮುಗಿ ಬೀಳುತ್ತಿದ್ದಾರೆ. ಪ್ರತಿ ಔನ್ಸ್ ಚಿನ್ನದ ಬೆಲೆಯಲ್ಲಿ ಶೇ 1.3ರಷ್ಟು ಏರಿಕೆ ಕಂಡಿದ್ದು 1 ಔನ್ಸ್ ಗೆ 1,637.40 ಡಾಲರ್ ನಷ್ಟಿದೆ.
ಇದೇ ರೀತಿ ಬೆಳ್ಳಿ ದರದಲ್ಲೂ ಶೇ 2.7 ರಷ್ಟು ಏರಿಕೆಯಾಗಿದ್ದು ಪ್ರತಿ ಔನ್ಸ್ ಗೆ 29.31 ಡಾಲರ್ ನಷ್ಟು ಬೆಲೆ ಇದೆ. ಭಾರತದಲ್ಲಿ ಜೂ.16ರ ನಂತರ ಶುಭ ಕಾರ್ಯಗಳ ಸೀಸನ್ ಆರಂಭಗೊಳ್ಳಲಿದ್ದು, ಚಿನ್ನ ಖರೀದಿ ಹೆಚ್ಚಳದ ನಿರೀಕ್ಷೆಯಿದೆ.
ಬೆಂಗಳೂರಿನಲ್ಲಿ ಇನ್ನೂ ಬೆಲೆ ಏರಿಕೆ ಬಿಸಿ ಮುಟ್ಟಿಲ್ಲವಾದ್ದರಿಂದ ಚಿನ್ನದ ಖರೀದಿಗೆ ಅಡ್ಡಿಯಿಲ್ಲ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 54,900 ರು ಇದೆ. ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ 30,100.00(24K) ಹಾಗೂ 28050.00(22K) ಇದೆ.
ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆ ಭಾರತದಲ್ಲಿನ ಚಿನ್ನದ ಮಾರಾಟದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿದೆ. ಚಿನ್ನದ ಬೆಲೆ ಮತ್ತಷ್ಟು ಏರುತ್ತದೆ ಎಂಬ ಆತಂಕದಲ್ಲಿ ಲಂಡನ್ನಿನಲ್ಲಿ ಉಂಟಾಗಿರುವ ವಾತಾವರಣ ಭಾರತದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಚಿನ್ನದ ಮೇಲೆ ಬಂಡವಾಳ ಹೂಡಿಕೆ ಸೂಕ್ತ ಕಾಲ ಎಂದು ತಜ್ಞರು ಕೂಡಾ ಹೇಳಿದ್ದಾರೆ.


Click it and Unblock the Notifications