
ಜಗನ್ ಒಡೆತನದ ಭಾರತಿ ಸಿಮೆಂಟ್ಸ್, ಜಗತಿ ಪಬ್ಲಿಕೇಷನ್ಸ್ ನಲ್ಲಿ ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ಸ್ ಸಂಸ್ಥೆ ಬಂಡವಾಳ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ. ಹೂಡಿಕೆಗೆ ಬದಲಾಗಿ ವೈಎಸ್ ರಾಜಶೇಖರ್ ರೆಡ್ಡಿ ಕಾಲದಲ್ಲಿ ಶ್ರೀನಿವಾಸನ್ ಅವರ ಸಂಸ್ಥೆಗಳಿಗೆ ಬೇಕಾದ ಅಗತ್ಯ ನೀರಾವರಿ ಸೌಲಭ್ಯ ಒದಗಿಸಲಾಗಿದೆ ಎಂಬ ಆರೋಪ ಹೊರೆಸಲಾಗಿದೆ.
ಗುರುವಾರ 76.25 ಬೆಲೆಯಂತೆ ಕುಸಿದಿದ್ದ ಇಂಡಿಯಾ ಸಿಮೆಂಟ್ಸ್ ಷೇರುಗಳು ಶೇ 5 ರಷ್ಟೂ ಇಳಿಕೆ ಕಂಡಿತು. ಬಿಎಸ್ ಇ ನಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದ ಷೇರು ಎಂದು ಪರಿಗಣಿಸಲ್ಪಡಲಾಗಿದೆ.
ಇಂಡಿಯಾ ಸಿಮೆಂಟ್ಸ್ 73.00 ರು ಬೆಲೆಯಂತೆ -3.25 ಕಳೆದು ಕೊಂಡು (-4.26%ರಷ್ಟು ಇಳಿಕೆ ಕಂಡಿದೆ) ಜೂ.8, 12:19pm IST...
ಇಂಡಿಯಾ ಸಿಮೆಂಟ್ಸ್ ಒಟ್ಟು 7 ಕಡೆ ಉತ್ಪಾದನಾ ಘಟಕಗಳನ್ನು ಹೊಂದಿದೆ. ದಕ್ಷಿಣ ಭಾರತ ಹಾಗೂ ಮಹಾರಾಷ್ಟ್ರದಲ್ಲಿ ಉತ್ತಮ ಮಾರುಕಟ್ಟೆ ಹೊಂದಿದೆ. ವಾರ್ಷಿಕವಾಗಿ 9 ಮಿಲಿಯನ್ ಟನ್ ಗಳಷ್ಟು ಉತ್ಪಾದನೆ ಹೊಂದಿದೆ. ಶಂಕರ್ ಸಿಮೆಂಟ್ಸ್ ಹಾಗೂ ಕೋರಮಂಡಲ್ ಸಿಮೆಂಟ್ ಬ್ರ್ಯಾಂಡ್ ಅಡಿಯಲ್ಲಿ ಇಂಡಿಯಾ ಸಿಮೆಂಟ್ಸ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದ.
ಅಕ್ರಮ ಅಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ.27ರಂದು ಬಂಧನಕ್ಕೊಳಗಾದ ವೈಎಸ್ ಆರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಸದ್ಯಕ್ಕೆ ಚಂಚಲಗುಡ ಜೈಲಿನಲ್ಲಿದ್ದು, ಜೂ.11ರ ತನಕ ಜೈಲುವಾಸ ಅನುಭವಿಸಬೇಕಿದೆ.


Click it and Unblock the Notifications