
ಹೂಡಿಕೆ ಧ್ಯೇಯ: ಕೇಂದ್ರ, ರಾಜ್ಯ ಸರಕಾರಗಳ ಸೆಕ್ಯುರಿಟಿ ಪತ್ರಗಳು ಮತ್ತು ಇತರ ಸ್ಥಿರ ಆದಾಯ/ಸಾಲ ಪತ್ರಗಳ ಮೇಲೆ ಬಂಡವಾಳ ಹೂಡಿಕೆಮಾಡಿ ಆದಾಯ ಗಳಿಸುವ ಉದ್ದೇಶವನ್ನು ನೂತನ ರಿಲಯೆನ್ಸ್ ಮ್ಯೂಚುಯಲ್ ಫಂಡ್ ಸ್ಕೀಮ್ ಹೊಂದಿದೆ. ಪ್ರಗತಿ ಮತ್ತು ಡಿವಿಡೆಂಟ್ ಪಾವತಿ ಎಂಬ ಎರಡು ಕೊಡುಗೆಗಳನ್ನು ನೂತನ ರಿಲಯೆನ್ಸ್ ಮ್ಯೂಚುವಲ್ ಫಂಡ್ ನೀಡುತ್ತಿದೆ.
ರಿಲಯೆನ್ಸ್ ಫಿಕ್ಸಡ್ ಹೊರಿಝೊನ್ ಫಂಡ್- XXII- ಸೀರಿಸ್ 13 ಹೂಡಿಕೆಯ ಶೇಕಡ 100ರಲ್ಲಿ ಶೇಕಡ 40ರಷ್ಟು ಸ್ವತ್ತನ್ನು ಕಡಿಮೆ ರಿಸ್ಕ್ ಇರುವ ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುವುದು. ಉಳಿದ ಶೇಕಡ 60ರಷ್ಟನ್ನು ಮಧ್ಯಮ ರಿಸ್ಕ್ ಇರುವ ಸರಕಾರದ ಭದ್ರತಾ ಪತ್ರಗಳು ಮತ್ತು ಸಾಲ ಪತ್ರಗಳ ಮೇಲೆ ಹೂಡಿಕೆ ಮಾಡಲಾಗುವುದು.
ಶೇಕಡ 100ರಲ್ಲಿ ಶೇಕಡ 95ರಷ್ಟು ನಿವ್ವಳ ಸ್ವತ್ತನ್ನು AAA/A1+ ರೇಟಿಂಗ್ ಇರುವ ಹೂಡಿಕೆಗಳಲ್ಲಿ ಮತ್ತು ಶೇಕಡ 5ರವರೆಗೆ ನಿವ್ವಳ ಸ್ವತ್ತನ್ನು ಸಿಬಿಎಲ್ಒ/ರಿವರ್ಸ್ ರೆಪೊ/ಸರಕಾರಿ ಭದ್ರತಾ ಪತ್ರಗಳು/ಟಿ ಬಿಲ್ ನಲ್ಲಿ ಹೂಡಿಕೆ ಮಾಡಲಾಗುವುದು ಎಂದು ರಿಲಯೆನ್ಸ್ ಮ್ಯೂಚುಯಲ್ ಫಂಡ್ ತಿಳಿಸಿದೆ. ನೂತನ ಸ್ಕೀಮ್ ಕನಿಷ್ಠ 20 ಕೋಟಿ ರು. ಸಂಗ್ರಹಿಸುವ ನಿರೀಕ್ಷೆ ಹೊಂದಿದೆ.
ಈ ಸ್ಕೀಮಿನಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಲೋಡ್ ಶುಲ್ಕ ಇರುವುದಿಲ್ಲ.
ಸಾಮಾನ್ಯ ಮಾಹಿತಿ
ಎನ್ಎಫ್ಒ ವಿತರಣೆ ಆರಂಭ: ಜೂನ್ 26, 2012
ವಿತರಣೆ ಮುಕ್ತಾಯ: ಜುಲೈ 5, 2012
ಎನ್ಎಫ್ಒ ದರ: ಒಂದು ಯುನಿಟಿಗೆ 10 ರುಪಾಯಿ
ಲಿಸ್ಟ್ ಕೇಂದ್ರ: ಮುಂಬೈ ಷೇರು ಮಾರುಕಟ್ಟೆ
ಕನಿಷ್ಠ ಹೂಡಿಕೆ ಮೊತ್ತ: 5 ಸಾವಿರ ರುಪಾಯಿ
ಮ್ಯಾನೆಜರ್ ಹೆಸರು: ಅಮಿತ್ ತ್ರಿಪಾಠಿ


Click it and Unblock the Notifications