
ಕೇಂದ್ರ ಮತ್ತು ರಾಜ್ಯಗಳ ತೆರಿಗೆಗಳನ್ನು ಏಕರೂಪಗೊಳಿಸುವ ನಿಟ್ಟಿನಲ್ಲಿ ತಯಾರಾಗಿರುವ ಋಣಾತ್ಮಕ ಪಟ್ಟಿಯಲ್ಲಿರುವ 38 ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಸೇವೆಗಳಿಗೂ ಶೇ 12ರ ಹೆಚ್ಚುವರೆ ಸೇವಾ ತೆರಿಗೆ ಜುಲೈ 1 ರಿಂದ ಜಾರಿಗೊಳ್ಳಲಿದೆ.
ಹಣುದಬ್ಬರ, ಬೆಲೆಏರಿಕೆ, ಆಹಾರ ಧಾನ್ಯ ಬೆಲೆ ಏರಿಕೆ, ಅಗತ್ಯ ವಸ್ತುಗಳ ಕೊರತೆ, ಬರ ಪರಿಸ್ಥಿತಿ ಎದುರಿಸುತ್ತಿರುವ ಶ್ರೀಸಾಮಾನ್ಯರ ಪಾಲಿಗೆ ಶೇ 12ರಷ್ಟು ಹೊಸ ಸೇವಾ ತೆರಿಗೆ ಹೆಚ್ಚುವರಿಯಾಗಿ ಕಾಟಕೊಡಲಿದೆ.
ಈ ವರ್ಷ ಕೇಂದ್ರೀಯ ಸೇವಾ ತೆರಿಗೆ ಸಂಗ್ರಹ 1.24 ಲಕ್ಷ ಕೋಟಿ ರೂ.ಗಳ ಗುರಿ ಹೊಂದಿದೆ. ಕಳೆದ ವರ್ಷ 97,000 ಕೋಟಿ ರೂ ಕೇಂದ್ರೀಯ ಸೇವಾ ತೆರಿಗೆ ಸಂಗ್ರಹವಾಗಿತ್ತು.
ಪ್ರಥಮ ದರ್ಜೆ ಹಾಗೂ ಹವಾನಿಯಂತ್ರಿತ ದರ್ಜೆಯ ರೈಲು ಪ್ರಯಾಣಗಳು ದುಬಾರಿ ಬಗ್ಗೆ ಇನ್ನೂ ಗೊಂದಲವಿದೆ. ರೈಲು ಸರಕು ಹಾಗೂ ಪ್ರಯಾಣಿಕರ ಟಿಕೆಟ್ ಮೇಲೆ ತೆರಿಗೆ ವಿಧಿಸಬೇಕೇ ಬೇಡವೇ ಎನ್ನುವ ಕುರಿತು ಸ್ಪಷ್ಟನೆ ಸಿಕ್ಕಿಲ್ಲ. ಹೆಚ್ಚುವರಿ ತೆರಿಗೆ ರೈಲು ಇಲಾಖೆಗೆ ಅನ್ವಯಿಸುವುದಿಲ್ಲ ಎಂದು ಸಚಿವ ಮುಕುಲ್ ರಾಯ್ ಹೇಳಿದ್ದಾರೆ.
ಈ ಬಗ್ಗೆ ರೈಲ್ವೇ ಸಚಿವರು ಸದ್ಯ ವಿತ್ತಸಚಿವರೂ ಆಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಪ್ರಧಾನಿ ಸಚಿವಾಲಯದಿಂದ ಉತ್ತರ ಹೊರಬಿದ್ದಿಲ್ಲ.
ದುಬಾರಿ ದುನಿಯಾ: ಸ್ಪೀಡ್ ಪೋಸ್ಟ್, ಎಕ್ಸ್ ಪ್ರೆಸ್ ಪಾರ್ಸೆಲ್, ರಜಾ ಕಾಲದ ಪ್ರವಾಸದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ದರಗಳೂ ದುಬಾರಿಯಾಗಿದೆ. ಜಿಮ್ಯಾಟ್ ಹಾಗೂ ಜಿಆರ್ ಇ ಪರೀಕ್ಷೆಗಳ ಸೇವಾ ತೆರಿಗೆಯೂ ಏರಿಕೆಯಾಗಿದೆ. ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚು ವಹಿವಟು ನಡೆಸುವ ಖಾಸಗಿ ಟ್ಯೂಷನ್ ಸಂಸ್ಥೆಗಳೂ ಸೇವಾ ತೆರಿಗೆ ವ್ಯಾಪ್ತಿಗೆ ಬಂದಿದೆ.
ಮೀಟರ್ ಟ್ಯಾಕ್ಸಿ, ಆಟೋರಿಕ್ಷಾ, ಬೆಟ್ಟಿಂಗ್, ಜೂಜು, ಲಾಟರಿ, ಅಮ್ಯೂಸ್ ಮೆಂಟ್ ಪಾರ್ಕ್ ಪ್ರವೇಶ ದರ, ಪ್ರಯಾಣಿಕರು ಮತ್ತು ವಸ್ತುಗಳ ಸಾಗಣೆ, ವಿದ್ಯುತ್ ವಿತರಣೆ, ಶವ ಸಂಸ್ಕಾರ, ಅಂತ್ಯಕ್ರಿಯೆ, ರೋಗಿಗಳನ್ನು ಸಾಗಿಸುವ ವಾಹನ ಮುಂತಾದ ಸೇವೆಗಳು ಋಣಾತ್ಮಕ ಪಟ್ಟಿಯಲ್ಲಿದ್ದರೂ ಯಾವುದೇ ತೆರಿಗೆಯನ್ನು ಆಕರ್ಷಿಸುವುದಿಲ್ಲ.
ಶಾಲೆ, ವಿಶ್ವವಿದ್ಯಾಲಯ ಶಿಕ್ಷಣ ಮತ್ತು ಅನುಮತಿ ಪಡೆದ ವೃತ್ತಿ ತರಬೇತಿ ಶಿಕ್ಷಣ ಕೇಂದ್ರಗಳು ತೆರಿಗೆಯಿಂದ ಹೊರಗುಳಿದಿದೆ.ಉಳಿದಂತೆ ಮೇಲ್ಕಂಡ ಖಾಸಗಿ ಕೋಚಿಂಗ್ ತರಗತಿಗಳು ತೆರಿಗೆಗೆ ಒಳಪಡಲಿದೆ. ಧನಾತ್ಮಕ ಪಟ್ಟಿಯಲ್ಲಿರುವ 119 ಸೇವೆಗಳು ಸೇವಾ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದೆ.
Goods and Service Tax (GST) ಜಾರಿ ಮಾಡುವ ಸಲುವಾಗಿ ಈ ಋಣಾತ್ಮಕ ಸೇವಾ ಪಟ್ಟಿ ತಯಾರಿಸಿ ಜನ ಸಾಮಾನ್ಯರಿಗೆ ತೆರಿಗೆ ಹೊರೆಯನ್ನು ಹಾಕಲಾಗಿದೆ. ಅಡ್ವಕೋಟ್ ಗಳು ಕಾರ್ಪೋರೇಟ್ ಸಂಸ್ಥೆಗಳಿಗೆ ನೀಡುವ ಸೇವೆಯಲ್ಲಿ 10 ಲಕ್ಷ ವಾರ್ಷಿಕ ಆದಾಯ ತನಕ ತೆರಿಗೆ ವಿನಾಯತಿ ನೀಡಲಾಗಿದೆ.
ಋಣಾತ್ಮಾಕ ಪಟ್ಟಿಯಲ್ಲಿ ಏರ್ ಕ್ರಾಫ್ಟ್ ನಿರ್ವಹಣಾ ವೆಚ್ಚ, ರಿಪೇರಿ ಜೊತೆಗೆ ಸಾರ್ವಜನಿಕ ಮೂತ್ರಾಲಯ, ಸ್ನಾನಗೃಹಗಳು ಸೇರಿದೆ. JNNRUM ಅಥವಾ ರಾಜೀವ್ ಆವಾಸ್ ಯೋಜನೆ ಕೂಡಾ ಋಣಾತ್ಮಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. (ಪಿಟಿಐ)


Click it and Unblock the Notifications