ಜಿಂದಾಲ್ ಸ್ಟೀಲ್ ಸಾಲ ಬಾಧೆ, ಷೇರುಗಳು ಇಳಿಮುಖ

ಜಿಂದಾಲ್ ಸ್ಟೀಲ್ ಸಾಲ ಬಾಧೆ, ಷೇರುಗಳು ಇಳಿಮುಖ
JSW Steel: Quotes, News
BSE 1279.20BSE Quote30.35 (-2.37%)
NSE 1278.00NSE Quote31.3 (-2.45%)
ಬೆಂಗಳೂರು, ಜು.9: ಪ್ರಸಕ್ತ ಆರ್ಥಿಕ ವರ್ಷ(2012-13)ರಲ್ಲಿ ಜೆಎಸ್ ಡಬ್ಲ್ಯೂ ಸ್ಟೀಲ್ ಸಂಸ್ಥೆ ಹೊಂದಿರುವ ಸಾಲದ ಅಂದಾಜು ಮೌಲ್ಯ 11,290 ಕೋಟಿ ರು ಮೀರುತ್ತದೆ ಎಂದು ಕ್ರೆಡಿಟ್ ಸುಸ್ಸೆ ನೀಡಿರುವ ವರದಿ ಜಿಂದಾಲ್ ಗೆ ಮುಳುವಾಗಿದೆ. ನಮ್ಮ ಸಂಸ್ಥೆ ಎಷ್ಟೊಂದು ಸಾಲದ ಹೊರೆ ಹೊಂದಿಲ್ಲ ಎಂದು ಜೆಎಸ್ ಡಬ್ಲ್ಯೂ ಸ್ಟೀಲ್ ವಿವರಣೆ ನೀಡಿದರೂ ಷೇರು ಮಾರುಕಟ್ಟೆಯಲ್ಲಿ ಸಂಸ್ಥೆಗೆ ಹೆಚ್ಚಿನ ಲಾಭ ಬಂದಿಲ್ಲ. ಸೋಮವಾರ JSW Steel ಷೇರುಗಳು ಶೇ 2 ರಷ್ಟು ಕುಸಿತ ಕಂಡಿದೆ.

ಕ್ರೆಡಿಟ್ ಸುಸ್ಸೆ ಸಾಲದ ಪ್ರಮಾಣದ ಬಗ್ಗೆ ನೀಡಿರುವ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಜೆಎಸ್ ಡಬ್ಲ್ಯೂ ವಕ್ತಾರರು ಬಿಎಸ್ ಇ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಜಿಂದಾಲ್ ಸಂಸ್ಥೆ ಷೇರುಗಳು 704 ಮುಖಬೆಲೆಯಂತೆ ಟ್ರೇಡಿಂಗ್ ಆರಂಭಿಸಿ 12.05ರ ಸುಮಾರಿಗೆ 1.48 ರು ಕಳೆದುಕೊಂಡಿದೆ.

ಸಂಸ್ಥೆಯ ವಾರ್ಷಿಕ ವಾಣಿಜ್ಯ ವರದಿಯನ್ನು ಭಾರತದ GAAP ನಿರ್ದೇಶನದಂತೆ ರೂಪಿಸಲಾಗಿದೆ ಹಾಗೂ ಪ್ರತಿಷ್ಠಿತ ಚಾರ್ಟ್ರೆಡ್ ಅಕೌಂಟೆಂಟ್ ಗಳಿಂದ ಪರಿಶೀಲನೆ ನಂತರವೇ ಪ್ರಕಟಿಸಲಾಗಿದೆ. ಕ್ರೆಡಿಟ್ ಸುಸ್ಸೆ ವರದಿಯಲ್ಲಿರುವ ಮಾಹಿತಿ ಸುಳ್ಳು ಎಂದು ಜಿಂದಾಲ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸಂಸ್ಥೆ ಪಾಲಿಸಿಕೊಂಡು ಬಂದಿರುವ ನಿಯಮಾವಳಿಗಳಂತೆ ವರದಿ ರಚಿಸಲಾಗಿದೆ. ವರದಿಯಲ್ಲಿರುವಂತೆ ಸಂಸ್ಥೆಯ ಆಸ್ತಿ ಪಾಸ್ತಿ ವಿವರಗಳು Indian Accounting Regulations ಗೆ ಒಳಪಟ್ಟಿದೆ. ಹೀಗಾಗಿ ತಪ್ಪಾಗಲು ಸಾಧ್ಯವಿಲ್ಲ ಎಂದು ಜಿಂದಾಲ್ ಸಂಸ್ಥೆ ವಿವರಿಸಿದೆ.
ಆದರೆ, ಜಿಂದಾಲ್ ಸಂಸ್ಥೆಯ ಇನ್ನಷ್ಟು ಮಾಹಿತಿ ಹೊರ ಹಾಕಿರುವ ಕ್ರೆಡಿಟ್ ಸುಸ್ಸೆ, ರುಪಾಯಿ ಅಪಮೌಲ್ಯದಿಂದ ಸಂಸ್ಥೆಗೆ ಸುಮಾರು 1,200 ಕೋಟಿ ರು ನಷ್ಟವಾಗಿದೆ ಎಂದು ವರದಿ ಮಾಡಿದೆ.

ಮುಂದುವರೆದ ಜಿಂದಾಲ್ ಸಂಕಷ್ಟ: ವಿಶ್ವದಲ್ಲೇ ಅತಿ ಕಡಿಮೆ ಮೌಲ್ಯದಲ್ಲಿ ಉಕ್ಕು ಉತ್ಪಾದಿಸುವ ಜಿಂದಾಲ್ ಗ್ರೂಪ್ ಭಾರತ ಮೂರನೇ ಅತಿದೊಡ್ಡ ಉಕ್ಕು ಉದ್ಯಮ ಸಂಸ್ಥೆಯಾಗಿದೆ. ಜಿಂದಾಲ್ ನ ಷೇರು ಖರೀದಿ, ಬಂಡವಾಳ ಹೂಡಿಕೆಯಿಂದ ಹಿಂದೆ ಸರಿಯುವಂತೆ ಹೂಡಿಕೆದಾರರಿಗೆ ಆರ್ಥಿಕ ತಜ್ಞರು ಸೂಚಿಸಿರುವುದು ಕಂಪನಿಗೆ ಭಾರಿ ಹಿನ್ನೆಡೆಯಾಗಿದೆ.4ನೇ ತ್ರೈಮಾಸಿಕ ವರದಿಯಲ್ಲಿ ಶೇ 10 ರಷ್ಟು ಲಾಭ ಕಳೆದುಕೊಂಡಿತ್ತು.

ಯಡಿಯೂರಪ್ಪ ಗಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಂದಾಲ್ ಸಂಸ್ಥೆ ಕೂಡಾ ಆರೋಪ ಹೊತ್ತಿದೆ. ಲೋಕಾಯುಕ್ತ ವರದಿ, ಜನಾರ್ದನ ರೆಡ್ಡಿ ಅದಿರು ಅಕ್ರಮ ಸಾಗಾಟ, ಸಿಇಸಿ ವರದಿ ಒಟ್ಟಾರೆ ಅಕ್ರಮ ಗಣಿಗಾರಿಕೆಗೂ ನಮಗೂ ಸಂಬಂಧವಿಲ್ಲ ಎಂದು ಮುಖ್ಯಸ್ಥ ಸಜ್ಜನ್ ಜಿಂದಾಲ್ ಇತ್ತೀಚೆಗೆ ಹೇಳಿದ್ದರು. ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆಯಿಂದ ನಮ್ಮ ಸಂಸ್ಥೆಗೆ ಭಾರಿ ನಷ್ಟವಾಗಿದೆ. ನಮ್ಮ ಕಷ್ಟ ಕೇಳುವ ಬದಲು ನಮ್ಮ ಮೇಲೆ ಆರೋಪ ಹೊರೆಸುವುದು ಎಷ್ಟು ಸರಿ ಎಂದು ಸಜ್ಜನ್ ಜಿಂದಾಲ್ ಪ್ರಶ್ನಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+