ಎನ್ನಾರೈಗಳ ಹಣ ರವಾನೆಗೆ ಸೇವಾ ತೆರಿಗೆ ಇಲ್ಲ

ಎನ್ನಾರೈಗಳ ಹಣ ರವಾನೆಗೆ ಸೇವಾ ತೆರಿಗೆ ಇಲ್ಲ
ನವದೆಹಲಿ, ಜು. 11: ಅನಿವಾಸಿ ಭಾರತೀಯರು ವಿದೇಶಗಳಿಂದ ಹಣ ರವಾನಿಸುವುದರ ಮೇಲೆ ಯಾವುದೇ ರೀತಿಯ ಸೇವಾ ತೆರಿಗೆ ಇಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ (ಜು.10) ಪ್ರಕಟಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಪರಿಶೀಲನೆಗಳ ನಂತರ ವಿದೇಶಗಳಿಂದ ಭಾರತಕ್ಕೆ ವಿದೇಶಿ ಹಣ ರವಾನಿಸುವುದರ ಮೇಲೆ ಯಾವುದೇ ರೀತಿಯ ಸೇವಾ ತೆರಿಗೆಯನ್ನು ವಿಧಿಸುವುದಿಲ್ಲ ಎಂದು ಅಬಕಾರಿ ಮತ್ತು ಸುಂಕಗಳ ಕೇಂದ್ರೀಯ ಮಂಡಳಿ ಮಂಗಳವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ವಿದೇಶಗಳಿಂದ ಹೆಚ್ಚು ಹಣ ರವಾನೆಯಾಗುವ ಕೇರಳ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಈ ವಿಷಯವನ್ನು ಪ್ರಧಾನಿ ಮನಮೋಹನ್ ಸಿಂಗ್ ಬಳಿ ಕೊಂಡೊಯ್ದು ಸೇವಾ ತೆರಿಗೆ ಮನ್ನಾಗೆ ಮನವಿ ಮಾಡಿದ್ದರು.

ರವಾನೆ ಹಣಕ್ಕೆ ಸಂಬಂಧಿಸಿರುವುದರಿಂದ ಇಲ್ಲಿ ಸೇವೆ ಬರುವುದಿಲ್ಲ, ಹಾಗಾಗಿ ಎನ್‌ಆರ್‌ಐ ಹಣ ರವಾನೆಯ ಮೇಲೆ ಸೇವಾ ತೆರಿಗೆ ವಿಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಿಬಿಇಸಿ ಹೇಳಿದೆ.

ಅನಿವಾಸಿ ಭಾರತೀಯರು ಸ್ವದೇಶಕ್ಕೆ ರವಾನಿಸುವ ಹಣಕ್ಕೆ ಶುಲ್ಕ ಅಥವಾ ವಿನಿಮಯ ವೆಚ್ಚಗಳ ಮೇಲೆಯೂ ಸೇವಾ ತೆರಿಗೆ ವಿಧಿಸಲಾಗುವುದಿಲ್ಲ ಎಂದು Central Board of Excise and Customs (ಸಿಬಿಇಸಿ) ಸ್ಪಷ್ಟಪಡಿಸಿದೆ.

ಕೇರಳ, ಪಂಜಾಬ್, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಿಗೆ ಎನ್ನಾರೈಗಳಿಗೆ ಹೆಚ್ಚಿನ ಹಣ ಹರಿದು ಬರುತ್ತದೆ. ಗಲ್ಫ್ ದೇಶಗಳಿಂದ ಹಣ ರವಾನೆಯಾಗುವುದು ಹೆಚ್ಚು ಎಂದು ಸಿಬಿಇಸಿ ತಿಳಿಸಿದೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+