ಮಾರನ್ ಹೊಡೆತ, ಸನ್, ಸ್ಪೈಸ್ ಜೆಟ್ ಷೇರು ಕುಸಿತ

ಮಾರನ್ ಹೊಡೆತ, ಸನ್, ಸ್ಪೈಸ್ ಜೆಟ್ ಷೇರು ಕುಸಿತ
Sun TV Network: Quotes, News
BSE 523.40BSE Quote1.95 (-0.37%)
NSE 520.85NSE Quote1.05 (-0.20%)
Spicejet: Quotes, News
BSE 12.63BSE Quote0.23 (-1.82%)
NSE 31.7NSE Quote0 (0.00%)
ಚೆನ್ನೈ, ಜು.27: ಟೆಲಿಕಾಂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಎದುರಿಸುತ್ತಿರುವ ಮಾರನ್ ಸೋದರರ ಒಡೆತನ ಕಂಪನಿಗಳ ಷೇರುಗಳು ಕರಡಿಯನ್ನು ತಬ್ಬಿಕೊಂಡು ನೆಲಕಚ್ಚಿದೆ.

ಏರ್ ಸೆಲ್ ಮ್ಯಾಕ್ಸಿ ಡೀಲ್ ಒಪ್ಪಂದದ ಪ್ರಕರಣದಲ್ಲಿ ಮಾರನ್ ಸೋದರರು 550 ಕೋಟಿ ಲಂಚ ಪಡೆದ ಬಗ್ಗೆ ಸಿಬಿಐ ದೃಢಪಡಿಸಿದ ಸುದ್ದಿ ಹೊರ ಬೀಳುತ್ತಿದ್ದಂತೆ ಷೇರುಪೇಟೆ ಸಂಚಲನ ಉಂಟಾಗಿದೆ.

ಕಳಾನಿಧಿ ಮಾರನ್ ಒಡೆತನದ ಸನ್ ಟಿವಿ ಹಾಗೂ ಮಾರನ್ ನೇತೃತ್ವದ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಷೇರುಗಳು ಶುಕ್ರವಾರ (ಜು.27) ಬಿಎಸ್ ಇನಲ್ಲಿ 12.05ಕ್ಕೆ ಶೇ 10.83(-31.90)ರಷ್ಟು ಕುಸಿತಕಂಡು 262.65 ರು. ಮೌಲ್ಯ ಹೊಂದಿತ್ತು.

ಎನ್ ಎಸ್ ಇನಲ್ಲಿ ಶೇ 11.03 (-32.65) ರಷ್ಟು ಕುಸಿತ ಕಂಡು 263.25 ರು. ಮೌಲ್ಯ ಹೊಂದಿತ್ತು.

ಅದೇ ರೀತಿ ಮಾರನ್ ಅವರ ಸ್ಪೈಸ್ ಜೆಟ್ ಷೇರುಗಳು ಸಮಯ 12.15ರ ಸುಮಾರಿಗೆ ಶೇ 7.80 (-2.20) ರಷ್ಟು ಕುಸಿತ ಕಂಡು 26.00 ರುಮೌಲ್ಯ ಹೊಂದಿತ್ತು. ಕಳೆದ 30 ದಿನಗಳಿಂದ ಎನ್ ಎಸ್ ಇನಲ್ಲಿ ಸ್ಪೈಸ್ ಜೆಟ್ ಯಾವುದೇ ಟ್ರೇಡಿಂಗ್ ಮಾಡಿಲ್ಲ.

ದಯಾನಿಧಿ ಮಾರನ್, ಕಲಾನಿಧಿ ಮಾರನ್, ರಾಲ್ಫ್ ಮಾರ್ಷಲ್ (ಆಸ್ಟ್ರಾ ಟಿವಿ ಸಿಇಒ, ಟಿ ಅನಂದಕೃಷ್ಣನ್ ಮೇಲೆ FIR ದಾಖಲಿಸಲಾಗಿದೆ. ಏರ್ ಸೆಲ್ ಹಾಗೂ ಮಾಕ್ಸಿಸ್ ಒಪ್ಪಂದ, 2ಜಿ ಹಗರಣ, ಟೆಲಿಕಾಂ ನಿಯಮ ಉಲ್ಲಂಘನೆ ಮುಂತಾದ ಆರೋಪಗಳು ಮಾರನ್ ವಿರುದ್ಧ ಕೇಳಿ ಬಂದಿದೆ.

ಅತ್ಯಾಧುನಿಕ ಡಿಜಿಟಲ್ ಜಾಲವನ್ನು ಉಚಿತವಾಗಿ ಸನ್ ನೆಟ್ವರ್ಕ್ ಗೆ ಒದಗಿಸಲಾಗಿದೆ. ಆದರೆ, ಮಾರನ್ ಗೂ ನಮಗೂ ಸಂಬಂಧವಿಲ್ಲ ಎಂದು ಸನ್ ನೆಟ್ವರ್ಕ್ ಸ್ಪಷ್ಟಪಡಿಸಿತ್ತು.
ಸನ್ ಟಿವಿ ಸ್ಪಷ್ಟನೆ ನೀಡಿದರೂ,ಮಾರನ್ ಹೂಡಿರುವ ಬಂಡವಾಳಗಳ ಪಟ್ಟಿಯನ್ನು ನೋಡಿದರೆ ಸನ್ ಟಿವಿ ಪಾಲುಗಾರಿಕೆಯ ಚಿತ್ರಣ ಸಿಗುತ್ತದೆ.

ಮಲೇಷಿಯಾ ಮೂಲದ ಏರ್ ಸೆಲ್ ಕಂಪೆನಿಗೆ 2ಜಿ ತರಂಗಾಂತರ ಗುಚ್ಛ ಕೊಡಿಸಿದ್ದು, ಸನ್ ಟಿವಿ ಡೈರೆಕ್ಟ್ ನಲ್ಲಿ ಸುಮಾರು 675 ಕೋಟಿ ರು ಷೇರು ಹೊಂದಿರುವುದು ಮುಂತಾದ ಆರೋಪಗಳು ಕೇಳಿ ಬಂದಿತ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+