
ಮುತ್ತೂಟ್ ಫೈನಾನ್ಸ್ ಕಂಪನಿಯ ಚಿನ್ನದ ಸಾಲ ನೀಡುವ ಪ್ರಮಾಣದಲ್ಲಿ ಶೇ. 5ರಷ್ಟು ಇಳಿಕೆಯಾಗಿದೆ. 2012, ಜೂನ್ 30ರ ವೇಳೆಗೆ ಕಂಪನಿಯು ರೂ. 23,000 ಕೋಟಿ ಚಿನ್ನದ ಸಾಲ ವಹಿವಾಟು ನಡೆಸಿದೆ. ಕಳೆದ ಮಾರ್ಚ್ ಅಂತ್ಯದ ವೇಳೆ 24,300 ಕೋಟಿ ಚಿನ್ನದ ಸಾಲ ವಹಿವಾಟು ನಡೆಸಿತ್ತು.
ಚಿನ್ನದ ಮೇಲೆ ಸಾಲ ನೀಡುವ ಫೈನಾನ್ಸ್ ಕಂಪನಿಗಳು ತ್ವರಿತ ಗತಿಯಲ್ಲಿ ಆರಂಭಗೊಳ್ಳುವುದು ಹಾಗೂ ಪ್ರಗತಿ ಸಾಧಿಸುತ್ತಿರುವುದನ್ನು ಗಮನಿಸಿದ ಆರ್ ಬಿಐ ಇದಕ್ಕೆ ನಿಯಂತ್ರಣ ಹೇರಲು ಮುಂದಾಯಿತು. ಚಿನ್ನದ ಮೇಲಿನ ಸಾಲ ನೀಡುವ ಕಂಪನಿಗಳಿಗೆ ಕೆಲವೊಂದು ನಿರ್ಬಂಧಗಳನ್ನು ಆರ್ ಬಿಐ ವಿಧಿಸಿತ್ತು.
2012, ಮಾರ್ಚ್ ನಲ್ಲಿ ಆರ್ ಬಿ ಐ ಮೌಲ್ಯಕ್ಕ ಅನುಗುಣವಾದ ಸಾಲದ ಪ್ರಮಾಣ (LTV) ವನ್ನು ಶೇ. 60ಕ್ಕೆ ಮಿತಿಗೊಳಿಸಿತ್ತು. ಇದಕ್ಕೂ ಮುನ್ನ ಕಂಪನಿಗಳಿಗೆ ಶೇ. 85ರ ಪ್ರಮಾಣದ ಮೌಲ್ಯಕ್ಕನುಗುಣವಾಗಿ ಚಿನ್ನದ ಸಾಲ ನೀಡುವ ಸುವರ್ಣ ಅವಕಾಶವಿತ್ತು. ಆದರೆ, ಆರ್ ಬಿಐ ನೂತನ ನೀತಿನಿಂದ ಹಣಕಾಸು ಸಂಸ್ಥೆಗಳಿಗೆ ಕಡಿವಾಣ ಹಾಕಿದ್ದಂತಾಗಿದೆ.
ಚಿನ್ನದ ಬೆಲೆ ಗಗನಕ್ಕೇರುತ್ತಿರುವ ನಡುವೆ, ಚಿನ್ನದ ಮೇಲಿವ ಹೂಡಿಕೆಯು ಭರವಸೆ ಗ್ರಾಹಕರಲ್ಲಿ ಹೆಚ್ಚಾಗಿತ್ತು. ಹೀಗಾಗಿ ಮಾ.31, 2012ಕ್ಕೆ ಅನ್ವಯವಾಗುವಂತೆ ಸರಾಸರಿ ಶೇ 72 ರಷ್ಟು ಮಿತಿಯಂತೆ ಸಾಲ ನೀಡುತ್ತಿದ್ದ ಮುತ್ತೂಟ್ ಫೈನಾನ್ಸ್ ಈಗ ತೊಂದರೆಗೆ ಸಿಲುಕಿದೆ.
'ಪ್ರಪ್ರಥಮ ಬಾರಿಗೆ ಚಿನ್ನದ ಮೇಲಿನ ಸಾಲ ನೀಡಿಕೆಯಲ್ಲಿ ಇಳಿಕೆಯಾಗಿದೆ. ಇದಕ್ಕೆ LTV ಅನುಪಾತವೇ ನೇರ ಕಾರಣ' ಎಂದು ಮುತ್ತೂಟ್ ಫೈನಾನ್ಸ್ ವ್ಯವಸ್ಥಾಪಕ ನಿರ್ದೇಶಕ ಕೆ ಪದ್ಮಕುಮಾರ್ ಹೇಳಿದ್ದಾರೆ.
2011-12 ರಲ್ಲಿ ಚಿನ್ನದ ಸಾಲ ನೀಡಿಕೆ ಪ್ರಗತಿ ದರ ಶೇ 57ರಷ್ಟಿತ್ತು. ಪ್ರಸಕ್ತ ವರ್ಷ ಶೇ 20 ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಹೊಂದಿದೆ. ಹೊಸ ಬ್ರಾಂಚ್ ಗಳನ್ನು ತೆರೆಯಲಾಗುವುದು ಎಂದು ಪದ್ಮಕುಮಾರ್ ಹೇಳಿದ್ದರು.
ಸುಮಾರು 200-250 ಹೊಸ ಮಳಿಗೆಗಳನ್ನು ಆರಂಭಿಸುವ ಸಾಧ್ಯತೆಯಿದ್ದು, 2011-12ರಲ್ಲಿ ದಾಖಲೆಯ 900ಕ್ಕೂ ಅಧಿಕ ಮಳಿಗೆಗಳನ್ನು ಆರಂಭಿಸಿತ್ತು. ಒಟ್ಟಾರೆ ದೇಶದಲ್ಲಿ 3678 ಬ್ರಾಂಚ್ ಮುತ್ತೂಟ್ ಫೈನಾನ್ಸ್ ಬ್ರಾಂಚ್ ಗಳಿತ್ತು. ದಕ್ಷಿಣ ಭಾರತದಲ್ಲಿ ಶೇ 60ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.


Click it and Unblock the Notifications