
ಕಳೆದ ವರ್ಷ ಇದೇ ಅವಧಿಗೆ ರೂ. 351.45 ಕೋಟಿ ಲಾಭವನ್ನು ಬ್ಯಾಂಕ್ ಸಾಧಿಸಿತ್ತು ಎಂದು ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕರ ಸಭೆಯ ಬಳಿಕ ಹಣಕಾಸು ಫಲಿತಾಂಶ ಪ್ರಕಟಿಸಿದ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಮಂಗಳವಾರ(ಜು.31) ಹೇಳಿದ್ದಾರೆ.
ನಿವ್ವಳ ಬಡ್ಡಿದರ(Net interest income) ಆದಾಯ ಶೇ 14 ರಷ್ಟು ಏರಿಕೆಯಾಗಿದ್ದು 808ರಷ್ಟು ಆದಾಯ ತಂದಿದೆ. ಬಿಎಸ್ ಇನಲ್ಲಿ ಕಾರ್ಪೋರೇಷನ್ ಬ್ಯಾಂಕ್ ಶೇ 2.93ರಷ್ಟು ಏರಿಕೆ ಕಂಡು ದಿನದ ಅಂತ್ಯಕ್ಕೆ 402.80 ರಂತೆ ವಹಿವಾಟು ಅಂತ್ಯಗೊಳಿಸಿದೆ.
ನಿರ್ವಹಣ ಲಾಭ ಶೇ. 21.09 ದರದಂತೆ ರೂ. 553.19 ಕೋಟಿ ರೂ.ನಿಂದ 669.86 ಕೋಟಿ ರೂ.ಗೆ ಏರಿಕೆಯಾಗಿದೆ. ಷೇರಿನ ಆದಾಯ 100 ರೂ. ಆಗಿದ್ದು, ಬುಕ್ ವ್ಯಾಲ್ಯೂ 505.59 ರೂ.ನಿಂದ 583.69 ರೂ.ಗೆ ಏರಿಕೆಯಾಗಿದೆ. ಈಕ್ವಿಟಿ ಮೇಲಿನ ಆದಾಯ ಶೇ. 17.5ರಷ್ಟಾಗಿದೆ ಎಂದು ಅಜಯ್ ವಿವರಣೆ ನೀಡಿದರು.
ಬ್ಯಾಂಕ್ ನ ಒಟ್ಟು ವಹಿವಾಟು ರೂ. 1,96,686 ಕೋಟಿಯಿಂದ ರೂ. 2,32,649 ಕೋಟಿಗೆ ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಒಟ್ಟಾರೆ ವಹಿವಾಟು 35,983 ಕೋಟಿಯಷ್ಟು ಏರಿಕೆಯಾಗಿದೆ.ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟು ಆದಾಯ ರೂ. 3,978.23 ಕೋಟಿಗೆ ಏರಿಕೆಯಾಗಿದ್ದು, ಬಡ್ಡಿ ಆದಾಯ ರೂ. 2,978 ಕೋಟಿ ಮತ್ತು ಬಡ್ಡಿಯೇತರ ಆದಾಯ ರೂ. 327.61 ಕೋಟಿಗೆ ಏರಿಕೆಯಾಗಿದೆ ಎಂದು ಅಜಯ್ ಹೇಳಿದರು.


Click it and Unblock the Notifications