
ಕಾರು ಸಾಲ ಬಡ್ಡಿದರ ಹಳೆ ದರ 11.25 ಹೊಸ ದರ 10.75 ( 1 ಲಕ್ಷ ರೂಪಾಯಿಗೆ 1,725 ರಷ್ಟಿದ್ದ ಮಾಸಿಕ ಕಂತು 1.699 ರೂ.ಗಳಿಗೆ ಇಳಿಕೆ)
ಗೃಹಸಾಲ ದರ ಶೇ 10.5 ರಿಂದ ಶೇ 10.25ಕ್ಕೆ ಇಳಿಕೆ.
30 ರಿಂದ 75 ಲಕ್ಷದ ವರೆಗಿನ ಸಾಲದ ಬಡ್ಡಿದರವನ್ನು ಶೇ 10.4ಕ್ಕೆ ಇಳಿಕೆ
ಹೊಸ ದರಗಳು ಹೊಸ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತವೆ. ಈಗಾಗಲೇ ಸಾಲ ಪಡೆದುಕೊಂಡಿರುವ ಹಳೆಯ ಗ್ರಾಹಕರಿಗೆ ಇದು ಅನ್ವಯಿಸುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಹಾಗಿದ್ದರೂ ಹಳೆಯ ಸಾಲಗಾರರು ನಿಗದಿತ ಶುಲ್ಕ ನೀಡಿ ಹೊಸ ಸಾಲಕ್ಕೆ ಪರಿವರ್ತನೆ ಮಾಡಿಕೊಳ್ಳಬಹುದು ಎಂದು ಎಸ್ ಬಿಐ ಹೇಳಿದೆ. ರಿಸರ್ವ್ ಬ್ಯಾಂಕ್ ಶಾಸನಬದ್ಧ ಲಿಕ್ವಿಡಿಟಿ ರೇಶಿಯೋ ದರವನ್ನು 100 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿದ ಬೆನ್ನಿಗೇ ಎಸ್.ಬಿಐ ಕೂಡ ದರ ಕಡಿತಕ್ಕೆ ಮುಂದಾಗಿದೆ.
ಇಲ್ಲಿ ಸಮಸ್ಯೆ ಏನು?: ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಇದರಿಂದ ಅಷ್ಟಾಗಿ ಲಾಭ ಇಲ್ಲ. ಹಳೆ ದರದಂತೆ ಮುಂದುವರೆಯಬೇಕಾಗುತ್ತದೆ. ಆರ್ ಬಿಐ ಈ ಸಮಸ್ಯೆ ಎದುರಾಗುವ ಮುನ್ಸೂಚನೆ ಅರಿತು ಜುಲೈ 2010 ರಲ್ಲಿ Prime lending system ಬದಲಿಗೆ ಪಾರದರ್ಶಕವಾದ base rare system ಜಾರಿಗೆ ತಂದಿತ್ತು. ಆದರೆ, ಸಾರ್ವಜನಿಕ ವಲಯದ ಅತ್ಯಂತ ಜನಪ್ರಿಯ ಬ್ಯಾಂಕ್ ಸಂಸ್ಥೆ ಪಾರದರ್ಶಕತೆಗೆ ಸವಾಲು ಒಡ್ಡುವಂಥ ಕ್ರಮ ಕೈಗೊಂಡಿದೆ. ಇದರಿಂದ ಚಾಲ್ತಿಯಲ್ಲಿರುವ ಗ್ರಾಹಕರಿಗೆ ಅನ್ಯಾಯವಾಗಲಿದೆ ಎಂದು ಅಪ್ನಪೈಸಾ.ಕಾಂನ ಸಿಇಒಪ್ ಹರ್ಷ್ ರೂಂಗ್ಟ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಂಕ್ ಏನು ಮಾಡಬಹುದಿತ್ತು?: ಪ್ರತಿ ಸಾಲ ನೀಡಿಕೆಯಲ್ಲೂ ಎರಡು ಅಂಶಗಳನ್ನು ಪ್ರಮುಖವಾಗಿ ಗಮನದಲ್ಲಿರಿಸಲಾಗುತ್ತದೆ. ಒಂದು ಮೂಲಾಂಶ (base rate)(ಅದಕ್ಕಿಂತ ಕೆಳಗೆ ನೀಡಲಾಗುವುದಿಲ್ಲ) ಇನ್ನೊಂದು ವಿಸ್ತರಣೆ. ಬ್ಯಾಂಕ್ ಮೂಲಾಂಶವನ್ನು ಬದಲಾಯಿಸಲು ಹೋಗಿಲ್ಲ. ಆದರೆ, ಹೊಸ ಗ್ರಾಹಕರಿಗೆ ಕೊಂಚ ಬದಲಾವಣೆ ಮಾಡಲಾಗಿದೆ. ಚಾಲ್ತಿಯಲ್ಲಿರುವ ಗ್ರಾಹಕರಿಗೆ ಶೇ 10(ಮೂಲಾಂಶ) + 0.50%(ವಿಸ್ತರಣೆ)=10.5%
ಈ ಲೆಕ್ಕಾಚಾರದಂತೆ ಹೊಸ ಗ್ರಾಹಕರು ಶೇ 10(ಮೂಲಾಂಶ) + 0.25%(ವಿಸ್ತರಣೆ)=10.25% ಬಡ್ಡಿದರ ಹೊಂದಲಿದ್ದಾರೆ.
ಚಾಲ್ತಿಯಲ್ಲಿರುವ ಗ್ರಾಹಕರಿಗೆ 30 ಲಕ್ಷದ ಗೃಹ ಸಾಲ 20 ವರ್ಷಕ್ಕೆ ಶೇ 10.5ರಂತೆ 7,188,335 ರು ತಗುಲಲಿದೆ. ಆದರೆ, ಇದೇ ಅವಧಿ ಇದೇ ಮೊತ್ತದ ಸಾಲ ಹೊಸಬರಿಗೆ 7,067,833 ರು ಮಾತ್ರ ಆಗಲಿದೆ. 1,20,502 ರು ಕಡಿಮೆ ಲಾಭ ವರವಾಗಿ ದೊರೆಯಲಿದೆ ಎಂದು ರೂಂಗ್ಟಾ ಹೇಳಿದ್ದಾರೆ. ಈ ಲೆಕ್ಕಾಚಾರ ನಿಯಮಗಳನ್ನು ಮೀರಿದೆ ಅಲ್ಲದೆ. ಹಾಲಿ ಗ್ರಾಹಕರಿಗೆ ಮುಳುವಾಗಿದೆ.
ನಾವೇನು ಮಾಡಬಹುದು?: ನೀವು ಎಸ್ ಬಿಐ ಗೃಹ ಸಾಲ ಪಡೆದ ಗ್ರಾಹಕರಾಗಿದ್ದರೆ, ನಿಮಗೆ ಎರಡು ಮಾರ್ಗಗಳಿದೆ. ಬ್ಯಾಂಕ್ ಅಧಿಕಾರಿಗಳೊಡನೆ ಕುಳಿತು ಸ್ವಲ್ಪ ಹಣ ಖರ್ಚು ಮಾಡಿ ಇರುವ ಯೋಜನೆಯಲ್ಲಿ ಬದಲಾವಣೆ(refinance) ತರಬಹುದು ಅಥವಾ ಕಡಿಮೆ ಬಡ್ಡಿದರ ಹೊಂದಿರುವ ಇನ್ನೊಂದು ಬ್ಯಾಂಕಿಗೆ ಮೊರೆ ಹೋಗಬಹುದು.
ಈ ರೀತಿ ಸಮಸ್ಯೆ ಎದುರಾಗುವ ಮುನ್ಸೂಚನೆ ದೊರೆತಿದ್ದರಿಂದ ಕಳೆದ ವರ್ಷ ಅಪೆಕ್ಸ್ ಬ್ಯಾಂಕ್ ಬದಲಾವಣೆ ಮೊತ್ತವನ್ನು ಸಾಲ ನೀಡಿಕೆ ಮೊದಲೇ ಪಡೆದಿತ್ತು. ಹೀಗಾಗಿ ನಂತರ ಸಾಲ ಬದಲಾವಣೆ ಹಾಗೂ ನಿರ್ಗಮನ ಸುಲಭವಾಗಿತ್ತು. ಹೊಸ ಬ್ಯಾಂಕಿಗೆ ಜಂಪ್ ಆಗುವ ಮೊದಲು ಒಟ್ಟಾರೆ ತಗುಲುವ ವೆಚ್ಚವನ್ನು ಒಮ್ಮೆ ಗಮನ ಹರಿಸಿ. ನಿರ್ವಹಣಾ ವೆಚ್ಚದ ಬಗ್ಗೆ, ಬದಲಾವಣೆ ಶುಲ್ಕದ ಬಗ್ಗೆ ಕೂಡಾ ಸಂಪೂರ್ಣ ಮಾಹಿತಿ ಲಭ್ಯವಿದ್ದರೆ ಮಾತ್ರ ಮುಂದುವರೆಯಿರಿ ಎಂದು ಬ್ಯಾಂಕ್ ಬಜಾರ್.ಕಾಂನ ಸಿಇಒ ಆದೀಲ್ ಶೆಟ್ಟಿ ಸಲಹೆ ನೀಡಿದ್ದಾರೆ.


Click it and Unblock the Notifications