
ಬಂಡವಾಳ ಹೂಡಿಕೆ ಉದ್ದೇಶ: ಶಾಶ್ವತ ಅದಾಯ ತರುವ ಸೆಕ್ಯುರಿಟಿ/ ಸಾಲ ವಿಧಾನದ ಮೇಲೆ ಬಂಡವಾಳ ಹೂಡಿಕೆ ಮಾಡಿ ಮ್ಯೂಚುರಿಟಿ ದಿನಾಂಕಕ್ಕೆ ಅಥವಾ ಅದಕ್ಕೂ ಮೊದಲು ಆದಾಯ ಗಳಿಕೆ ತರುವುದು ಇದರ ಉದ್ದೇಶ.
ನಿಗದಿತ NFO ಅವಧಿಯಲ್ಲಿ ಈ ಯೋಜನೆ ಮೂಲಕ ಕನಿಷ್ಠ ಚಂದಾದಾರ ಮೌಲ್ಯದ ರೂಪದಲ್ಲಿ 20 ಕೋಟಿ ರು ವಹಿವಾಟು ನಡೆಸಲು ಐಸಿಐಸಿಐ ಯೋಜಿಸಿದೆ. ಎರಡು ಐಚ್ಛಿಕ ಯೋಜನೆಗಳನ್ನು ಹೊಂದಿದ್ದು ಸಂಚಿತ (ಹೆಚ್ಚಾಗುತ್ತಾ ಹೋಗುವ) ಹಾಗೂ ಲಾಭಾಂಶ ಮಾದರಿ ಇದೆ.
ನಿಧಿ ಹಂಚಿಕೆ: ಈ ಯೋಜನೆಯ ಶೇ 50 ರಿಂದ ಶೇ 100 ರಷ್ಟು ನಿಧಿಯನ್ನು ಕಡಿಮೆ ತೊಂದರೆಯುಳ್ಳ ಸುರಕ್ಷಿತ ಸಾಲ ವಿಧಾನಗಳ ಮೇಲೆ ಹೂಡಲಾಗುವುದು. ಉಳಿದ 50% ನಿಧಿಯನ್ನು ಹಣಕಾಸು ಮಾರುಕಟ್ಟೆಯಲ್ಲಿ ತೊಡಗಿಸಲಾಗುವುದು. ಇದರ ಜೊತೆಗೆ AAA ಶ್ರೇಯಾಂಕ ಉಳ್ಳ non convertible debentures ಗಳ ಮೇಲೆ ಶೇ 50 ರಿಂದ 55 ರಷ್ಟು ಹೂಡಿಕೆ ಹಾಗೂ ಶೇ 45 ರಿಂದ 50 ರಷ್ಟು AA ರೇಟಿಂಗ್ ಉಳ್ಳ non convertible debentures ಗಳ ಮೇಲೆ ಹೂಡಲಾಗುತ್ತದೆ.
ಈ ಯೋಜನೆಗೆ ಯಾವುದೇ ಆರಂಭಿಕ ಹಾಗೂ ನಿರ್ಗಮನ ಶುಲ್ಕ ಇರುವುದಿಲ್ಲ. ಬಿಎಸ್ ಇಯ ಪಟ್ಟಿಯಲ್ಲಿ ಈ ಯೋಜನೆ ಕಾಣಿಸಿಕೊಳ್ಳುವುದರಿಂದ ಗ್ರಾಹಕರು ಹೆಚ್ಚಿನ ಲಾಭ ನಿರೀಕ್ಷಿಸಬಹುದು.
ಮುಖ್ಯ ಮಾಹಿತಿ:
NFO ಆರಂಭ : ಆಗಸ್ಟ್ 13, 2012
NFO ಮುಕ್ತಾಯ : ಆಗಸ್ಟ್ 21, 2012
NFO: 10 ರು ಪ್ರತಿ ಯೂನಿಟ್ ಗೆ
ಕನಿಷ್ಠ ಅರ್ಜಿ ಶುಲ್ಕ: 5000 ರು ಹಾಗೂ ನಂತರ 10 ರ ಹತ್ತರ ಗುಣಕದಂತೆ ಲೆಕ್ಕಚಾರ
ಆಧಾರ: CRISIL ಕಡಿಮೆ ಅವಧಿ ಬಾಂಡ್ ಫಂಡ್ ಸೂಚಿ
ವ್ಯವಸ್ಥಾಪಕ: ಚೈತನ್ಯ ಪಾಂಡೆ
ಐಸಿಐಸಿಐ ಪ್ರುಡೆನ್ಶಿಯಲ್, ಇದು ಐಸಿಐಸಿಐ ಬ್ಯಾಂಕ್ ಹಾಗೂ ಇಂಗ್ಲೆಂಡ್ ಮೂಲದ ಪ್ರುಡೆನ್ಶಿಯಲ್ ಸಂಸ್ಥೆಯ ಜಂಟಿ ಯೋಜನೆಯಾಗಿದೆ. ಸುಮಾರು 2 ಮಿಲಿಯನ್ ಗೂ ಅಧಿಕ ಹೂಡಿಕೆದಾರರನ್ನು ಹೊಂದಿರುವ ವಿಸ್ತೃತ ಸಂಸ್ಥೆಯಾಗಿದೆ.
ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಸೂರೆನ್ಸ್ ಕಂಪನಿ ಗ್ರಾಹಕರು ಮೊಬೈಲ್ ಮೂಲಕವೇ ಉತ್ಪನ್ನಗಳ ಸೇವೆ ಪಡೆಯಲು ನೆರವಾಗುವ ಇಂಟರ್‌ನೆಟ್ ತಾಣದ (m.iciciprulife.com ಅಥವಾ www.iciciprulife.com) ಸೇವೆ ವಿವರ ಪಡೆಯಬಹುದಾಗಿದೆ
(ಗುಡ್ ರಿಟರ್ನ್ಸ್.ಇನ್)


Click it and Unblock the Notifications