
ಜೂ.30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸುಮಾರು 651 ಕೋಟಿ ರು ನಷ್ಟ ಅನುಭವಿಸಿರುವ ಕಿಂಗ್ ಫಿಷರ್ ಷೇರುಗಳು ಸೋಮವಾರ ನೆಲಕಚ್ಚಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.
ಆದರೆ, ಛಲದಂಕಮಲ್ಲ ಮಲ್ಯರ ಕುದುರೆ ಷೇರುಪೇಟೆಯಲ್ಲಿ ಭರ್ಜರಿಯಾಗಿ ಗಗನದೆತ್ತರಕ್ಕೆ ಓಡುತ್ತಿದೆ. ಕಳೆದ ವರ್ಷದ ತ್ರೈಮಾಸಿಕದಲ್ಲಿ 251 ಕೋಟಿ ರು ನಷ್ಟ ಅನುಭವಿಸಿದ್ದ ಪ್ರತಿಷ್ಠಿತ ಏರ್ ಲೈನ್ಸ್ ಸಂಸ್ಥೆ ಈ ವರ್ಷ ಅದೇ ಅವಧಿಯಲ್ಲಿ 651 ಕೋಟಿ ರು ನಷ್ಟ ಅನುಭವಿಸಿರುವುದು ಮಲ್ಯರಿಗೆ ನುಂಗಲಾರದ ತುತ್ತಾಗಿದೆ.
ಜೊತೆಗೆ ಏರ್ ಲೈನ್ಸ್ ಉದ್ಯೋಗಿಗಳಿಗೆ ಸಂಬಳ, 30 -40 ವಿಮಾನ ಹಾರಾಟ ರದ್ದು ಪ್ರತಿ ವಾರದ ಸಮಸ್ಯೆಯಾಗಿದೆ. ಇದೆಲ್ಲದರ ನಡುವೆ ಷೇರುಗಳ ಏರಿಕೆ ಹೂಡಿಕೆದಾರರಿಗೆ ಆಶಾಕಿರಣವಾಗಿ ಮಾರ್ಪಟ್ಟಿದೆ.
ಬಿಎಸ್ ಇನಲ್ಲಿ ಸೋಮವಾರ(ಆ.13) ಬೆಳಗ್ಗೆ ಕಿಂಗ್ ಫಿಷರ್ ಷೇರುಗಳು ಶೇ 18 ರಷ್ಟು ಏರಿಕೆ ಕಂಡಿದ್ದರೆ, ಯುಬಿ ಸಮೂಹದ ಷೇರುಗಳು ಶೇ 8 ರಷ್ಟು ಏರಿಕೆ ಕಂಡಿದೆ.
ಹೊಸ ಬಂಡವಾಳ ಹೂಡಿಕೆ, ಸಾಲ ತೀರಿಸುವ ಭರವಸೆ ಮೂಡಿರುವುದು ಷೇರುಗಳ ಪ್ರಗತಿ ಕಾರಣ ಇರಬಹುದು ಎಂದು ಊಹಿಸಲಾಗಿದೆ. ಕಿಂಗ್ ಫಿಷರ್ ಏರ್ ಲೈನ್ಸ್ ನಂತರ ಯುನೈಟೆಡ್ ಸ್ಪಿರಿಟ್ಸ್ ಸಾಲಬಾಧೆ ತೀರಿಸಿಕೊಳ್ಳಲು ಇಂಡಿಯನ್ ಪ್ರಿಮಿಯರ್ ಲೀಗ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡಲು ವಿಜಯ್ ಮಲ್ಯ ಮುಂದಾಗಿದ್ದರು.
ವೈಟ್ ಅಂಡ್ ಮ್ಯಾಕೆ ಬ್ರಾಂಡ್ ಖರೀದಿಸಿದ ಮೇಲೆ ಯುನೈಟೆಡ್ ಸ್ಪಿರಿಟ್ಸ್ ಜಾಗತಿಕವಾಗಿ ಉನ್ನತ ಸ್ಥಾನಕ್ಕೇರಿತ್ತು. ಆದರೆ, ಸುಮಾರು 7,000 ಕೋಟಿ ರು ಸಾಲ ಉಳಿಸಿಕೊಂಡಿರುವ ಯುನೈಟೆಡ್ ಸ್ಪಿರಿಟ್ಸ್ ಗೆ ರಿಲೀಫ್ ನೀಡಲು ಆಸ್ತಿ ಮಾರಾಟ, ಷೇರು ಮಾರಾಟಕ್ಕೆ ಕಿಂಗ್ ಮಲ್ಯ ಮುಂದಾಗಿದ್ದಾರೆ ಎನ್ನಲಾಗಿತ್ತು.
ಯುನೈಟೆಡ್ ಬ್ರೂವರೀಸ್ ನ ಸಾಲ ತೀರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 1,500 ಕೋಟಿ ರು ನಿಂದ 2,000 ಕೋಟಿ ಮೊತ್ತ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಹೆಚ್ಚಿತ್ತು. ಆರ್ಥಿಕ ಸಂಕಷ್ಟದಿಂದ ಹೊರ ಬರಲು ನಿರ್ವಹಣಾ ವೆಚ್ಚವನ್ನು ಕಳೆದ ವರ್ಷದ ವೆಚ್ಚ 429 ಕೋಟಿ ರು ನಿಂದ 204 ಕೋಟಿ ರು ಗೆ ತಗ್ಗಿಸಲಾಗಿದೆ. ಹೆಚ್ಚಿನ ವಿವರಣೆಗೆ goodreturns.in ನೋಡುತ್ತಿರಿ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications