
ವಾರ್ಷಿಕ India Day Parade 2012 ಉತ್ಸವದ ಅಂಗವಾಗಿ ನ್ಯೂಯಾರ್ಕಿನ ಟೈಮ್ಸ್ ಸ್ಕ್ವೈರ್ ನಲ್ಲಿ ಈ ಸಂಭ್ರಮಾಚರಣೆ ಆಗಸ್ಟ್ 19 ರಂದು ಜರುಗಲಿದೆ. ಅಮೆರಿಕದಲ್ಲಿನ ಭಾರತ ಸಮುದಾಯದ ಚಿರಪರಿಚಿತ ಸಂಸ್ಥೆ ಫೆಡೆರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ (FIA) ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಫೆಡೆರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ (FIA) ನ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಅನಿಲ್ ಕುಂಬ್ಳೆ ಅವರಿಗೆ ನಾಸ್ಡಾಕ್ ಬೆಲ್ ಬಾರಿಸುವ ಗೌರವವನ್ನು ನೀಡಲಾಗಿದೆ.
ಕಾರ್ಯಕ್ರಮದ ವಿವರ:
ಎಲ್ಲಿ: ನಾಸ್ಡಾಕ್ ಮಾರುಕಟ್ಟೆ : 4 Times Square - 43rd & Broadway - Broadcast Studio
ಯಾವಾಗ, ಸಮಯ: ಶುಕ್ರವಾರ ಆಗಸ್ಟ್ 17, 2012 - 3:45 p.m. to 4:00 p.m. ET
ಸಂಪರ್ಕಿಸಿ: ಕುರಂಗ್ ಶಾ (2011-2012) (609) 865-6204
ಭಾನುವಾರ ನಡೆಯಲಿರುವ ಬೃಹತ್ ಮೆರವಣಿಗೆಯಲ್ಲಿ ನಟ ಸೈಫ್ ಅಲಿ ಖಾನ್ ಕೂಡಾ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಮೆರಿಕದಲ್ಲಿ ಕ್ರಿಕೆಟ್ ಆಟ ಜನಪ್ರಿಯತೆ ಹೆಚ್ಚಿಸಲು, ಕ್ರಿಕೆಟ್ ರಾಯಭಾರಿಯಾಗಿ ಬಂದಿರುವ ಅನಿಲ್ ಕುಂಬ್ಳೆ ಅವರು ಭಾರತೀಯ ಸಮುದಾಯದೊಂದಿಗೆ ಬೆರೆತು ನಲಿಯಲಿದ್ದಾರೆ.
ನಾಸ್ಡಾಕ್ - ಅಮೆರಿಕದ ಸ್ಟಾಕ್ ಎಕ್ಸ್ ಚೇಂಜ್ ಸಂಸ್ಥೆಯಾಗಿದ್ದು ವಿಶ್ವದಲ್ಲಿ ಎರಡನೇ ಅತ್ಯಂತ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿರುವ ಷೇರು ಮಾರುಕಟ್ಟೆಯಾಗಿದೆ. NASDAQ OMX ಸಮೂಹ ಇದರ ಒಡೆತನವನ್ನು ಹೊಂದಿದೆ.


Click it and Unblock the Notifications