
ಬಂಡವಾಳ ಹೂಡಿಕೆ ಉದ್ದೇಶ: ನಿರಂತರವಾಗಿ, ನಿಯಮಿತ ಅವಧಿಯಲ್ಲಿ ಆದಾಯ ತರುವುದು ಈ ಯೋಜನೆ ಉದ್ದೇಶ. ಸರ್ಕಾರದ ಭದ್ರತಾ ಸಾಲ ವಿಧಾನಗಳು, PSU ಹಾಗೂ ಕಾರ್ಪೊರೇಟ್ ಬಾಂಡ್ ಗಳು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಮ್ಯಾಚುರಿಟಿ ದಿನಾಂಕ ಅಥವಾ ಅದಕ್ಕೂ ಮೊದಲೇ ರಿಟರ್ನ್ಸ್ ಸಿಗಲಿದೆ. ಎರಡು ಐಚ್ಛಿಕ ಯೋಜನೆಗಳನ್ನು ಹೊಂದಿದ್ದು ಸಂಚಿತ (ಹೆಚ್ಚಾಗುತ್ತಾ ಹೋಗುವ) ಹಾಗೂ ಲಾಭಾಂಶ ಮಾದರಿ ಇದೆ.
ನಿಧಿ ಹಂಚಿಕೆ: ಈ ಯೋಜನೆಯ ಶೇ 50 ರಿಂದ ಶೇ 100 ರಷ್ಟು ನಿಧಿಯನ್ನು ಸಾಲ ಹಾಗೂ ಹಣಕಾಸು ಸೆಕ್ಯುರಿಟೀಸ್ ಗಳ ಮೇಲೆ ಹೂಡಲಾಗುತ್ತದೆ ಹಾಗೂ ಶೇ 40 ರಷ್ಟು ನಿಧಿಯನ್ನು ಸರ್ಕಾರಿ ಭದ್ರತಾ ಠೇವಣಿಯಾಗಿಸಲಾಗುತ್ತದೆ. ನಿವ್ವಳದ ನಿಧಿಯ ಶೇ 40 ರಷ್ಟು ಮೊತ್ತ ಸ್ಥಳೀಯ ಸುರಕ್ಷಿತಾ ಸಾಲಗಳಲ್ಲೇ ವಿಸ್ತರಣೆಗೊಳ್ಳಲಿದೆ.
ಈ ಯೋಜನೆಗೆ ಯಾವುದೇ ಆರಂಭಿಕ ಹಾಗೂ ನಿರ್ಗಮನ ಶುಲ್ಕ ಇರುವುದಿಲ್ಲ. ಬಿಎಸ್ ಇಯ ಪಟ್ಟಿಯಲ್ಲಿ ಈ ಯೋಜನೆ ಕಾಣಿಸಿಕೊಳ್ಳುವುದರಿಂದ ಗ್ರಾಹಕರು ಹೆಚ್ಚಿನ ಲಾಭ ನಿರೀಕ್ಷಿಸಬಹುದು.
ಮುಖ್ಯ ಮಾಹಿತಿ:
NFO ಆರಂಭ : ಆಗಸ್ಟ್ 17, 2012
NFO ಮುಕ್ತಾಯ : ಆಗಸ್ಟ್ 21, 2012
NFO: 10 ರು ಪ್ರತಿ ಯೂನಿಟ್ ಗೆ
ಕನಿಷ್ಠ ಅರ್ಜಿ ಶುಲ್ಕ: 5000 ರು ಹಾಗೂ ನಂತರ 10 ರ ಹತ್ತರ ಗುಣಕದಂತೆ ಲೆಕ್ಕಚಾರ
ಆಧಾರ: CRISIL ಕಡಿಮೆ ಅವಧಿ ಬಾಂಡ್ ಫಂಡ್ ಸೂಚಿ
ವ್ಯವಸ್ಥಾಪಕ: ರಾಜೀವ್ ರಾಧಾಕೃಷ್ಣನ್
ನಿಧಿ ನಿರ್ವಹಣೆಯಲ್ಲಿ ಸುಮಾರು 25 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ಎಸ್ ಬಿಐ, ಭಾರತದ ಅತಿ ವಿಸ್ತಾರವಾದ ಜಾಲ ಹೊಂದಿರುವ ಬ್ಯಾಂಕ್ ಆಗಿದೆ. ಸುಮಾರು 5.4ಮಿಲಿಯನ್ ಹೂಡಿಕೆದಾರರನ್ನು ಹೊಂದಿರುವ ಎಸ್ ಬಿಐ, ಬಂಡವಾಳ ಹೂಡಿಕೆ ನಿರ್ವಹಣೆ ಅತಿದೊಡ್ಡ ಸಂಸ್ಥೆ ಎನಿಸಿದೆ.
(ಗುಡ್ ರಿಟರ್ನ್ಸ್.ಇನ್)
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications